ಕೊಡಗಿನ ಸುಂದರಿ ಹರ್ಷಿಕಾ ಪೂಣಚ್ಚ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏಳುಬೀಳನ್ನು ಕಂಡಿದ್ದಾರೆ. ನಾಯಕಿಯಾಗಿ ಹಾಗೂ ಪೋಷಕ ನಟಿಯಾಗಿ ದಕ್ಷಿಣ ಭಾರತದ ಹಲವಾರು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಕೊಡವ, ತುಳು, ಕೊಂಕಣಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಹರ್ಷಿಕಾ. ಹರ್ಷಿಕಾ ಈಗ ಒಂದು ಹೆಜ್ಜೆ ಮುಂದಿಟ್ಟು ಭೋಜಪುರಿ ಸಿನಿರಂಗದತ್ತ ಕಾಲಿಟ್ಟಿದ್ದಾರೆ. ಭೋಜಪುರಿ ಸಿನಿರಂಗದ ನಾಯಕ ನಟನಾದ ಪವನ್ ಸಿಂಗ್ ಅವರೊಂದಿಗೆ ನಟಿಸಲು ಹರ್ಷಿಕಾ ಅವರಿಗೆ ಈಗ ಅವಕಾಶ ಸಿಕ್ಕಿದೆ. ತಂದೆಯನ್ನು ಕಳೆದುಕೊಂಡು ನೋವಿನಲ್ಲಿದ್ದ ಹರ್ಷಿಕಾ ಕಳೆದ ಒಂದೂವರೆ ವರ್ಷದಿಂದ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಒಂದೂವರೆ ವರ್ಷದ ನಂತರ ಚಿತ್ರೀಕರಣದ ಸೆಟ್ಗೆ ಮರಳಿದ್ದೇನೆ ಎಂದು ಹರ್ಷಿಕಾ ಪೋಸ್ಟ್ ಮಾಡಿದ್ದಾರೆ. ಹರ್ಷಿಕಾ ಅವರ ಭೋಜಪುರಿ ಸಿನಿಮಾದ ಶೂಟಿಂಗ್ ಲಂಡನ್ನಲ್ಲೇ ನಡೆಯಲಿದೆಯಂತೆ. ಹರ್ಷಿಕಾರ ಈ ಸಿನಿಮಾ ಹಿಂದಿಯಲ್ಲೂ ರಿಲೀಸ್ ಆಗಲಿದೆಯಂತೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಆಂಭವಾಗಿದ್ದು, ಈ ಸಿನಿಮಾದಲ್ಲಿ ಲಂಡನ್ನ ಶ್ರೀಮಂತ ಹುಡುಗಿ ಪಾತ್ರದಲ್ಲಿ ಹರ್ಷಿಕಾ ನಟಿಸುತ್ತಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ನಟಿ ಹರ್ಷಿಕಾ ಪೂಣಚ್ಚ ಫೋಟೋಶೂಟ್ಗಳಲ್ಲೂ ಬ್ಯುಸಿಯಾಗಿದ್ದರು. ನಟಿ ಹರ್ಷಿಕಾ ಪೂಣಚ್ಚ