Haripriya-Vasishta Simha: Loveಲಿ ಸೆಟ್ಗೆ ಬಂದ ಹರಿಪ್ರಿಯಾ! ಭಾವೀ ಪತಿಯ ಜೊತೆ ಸಮಯ ಕಳೆದ ನಟಿ
ನಟಿ ಹರಿಪ್ರಿಯಾ ಅವರು ವಸಿಷ್ಠ ಸಿಂಹ ಅಭಿನಯದ ಲವ್ಲಿ ಸಿನಿಮಾದ ಶೂಟಿಂಗ್ ಸೆಟ್ಗೆ ಭೇಟಿ ಕೊಟ್ಟಿದ್ದಾರೆ. ಎಂಗೇಜ್ಮೆಂಟ್ ನಂತರ ಗೆಳೆಯ ಕೆಲಸ ಮಾಡೋ ಸ್ಥಳದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರ ನಿಶ್ಚಿತಾರ್ಥ ನಡೆದಿದೆ. ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಯೊಂದು ಎಂಗೇಜ್ಮೆಂಟ್ ಮಾಡಿಕೊಂಡು ಹಸೆಮಣೆ ಏರಲು ಸಿದ್ಧವಾಗಿದೆ. ಈಗ ನಟಿ ಭಾವೀ ಪತಿ ಕೆಲಸ ಮಾಡೋ ಸಿನಿಮಾ ಸೆಟ್ಗೆ ಬಂದಿದ್ದಾರೆ.
2/ 9
ಇವರಿಬ್ಬರ ಮದುವೆ ಬಗ್ಗೆ ಈಗಾಗಲೇ ಬಹಳಷ್ಟು ಸುದ್ದಿ ಓಡಾಡಿದ್ದು ಇವರ ಮದುವೆ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ದುಬೈಗೆ ಹೋಗಿ ಬಂದಿದ್ದ ಈ ಜೋಡಿ ದಿಢೀರ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು.
3/ 9
ಇವರ ನಿಶ್ಚಿತಾರ್ಥ ಫೋಟೋಗಳು ವೈರಲ್ ಆದಾಗ ಇವರ ಸಂಬಂಧ ಪಕ್ಕಾ ಆಗಿತ್ತು. ಇದೀಗ ಜೋಡಿ ಯಾವಾಗ ಮದುವೆಯಾಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.
4/ 9
ಈ ಮಧ್ಯೆ ನಟಿ ಹರಿಪ್ರಿಯಾ ಅವರು ವಸಿಷ್ಠ ಸಿಂಹ ಅವರ ಸಿನಿಮಾ ಶೂಟಿಂಗ್ ಸೆಟ್ಗೆ ಭೇಟಿಕೊಟ್ಟಿದ್ದಾರೆ. ಅಲ್ಲಿ ನಟ ಸಾಧುಕೋಕಿಲ ಸೇರಿದಂತೆ ಇತರ ಕಲಾವಿದರೊಂದಿಗೆ ಮಾತನಾಡಿದ್ದಾರೆ.
5/ 9
ನಟ ವಸಿಷ್ಠ ಸಿಂಹ ಅವರು ಲವ್ಲಿ ಸಿನಿಮಾ ಮಾಡುತ್ತಿದ್ದು ಇದರ ಶೂಟಿಂಗ್ ಸದ್ಯ ಉಡುಪಿಯಲ್ಲಿ ನಡೆಯುತ್ತಿದೆ. ಈ ಶೂಟಿಂಗ್ ಸೆಟ್ಗೆ ಹರಿಪ್ರಿಯಾ ಅವರು ಭೇಟಿ ಕೊಟ್ಟಿದ್ದಾರೆ.
6/ 9
ಭಾವೀ ಪತ್ನಿಗೆ ಮೊಬೈಲ್ನಲ್ಲಿ ಏನನ್ನೋ ತೋರಿಸುತ್ತಿರುವ ನಟ ವಸಿಷ್ಠ ಸಿಂಹ. ಜೊತೆಯಲ್ಲಿ ನಟ ಸಾಧುಕೋಕಿಲ ಅವರೂ ಇದ್ದಾರೆ.
7/ 9
ನಟಿ ಹರಿಪ್ರಿಯಾ ವೈಟ್ ಕಲರ್ ಡ್ರೆಸ್ನಲ್ಲಿ ಬಂದಿದ್ದು ಅವರು ಫುಲ್ ಸ್ಮೈಲಿಂಗ್ ಮೂಡ್ನಲ್ಲಿ ಕಂಡುಬಂದರು.
8/ 9
ವಸಿಷ್ಠ ಸಿಂಹ ಅವರು ಹಳದಿ ಬಣ್ಣದ ಶರ್ಟ್ ಧರಿಸಿದ್ದು ಶೂಟಿಂಗ್ ಸಿದ್ಧತೆಯಲ್ಲಿದ್ದರು. ಹೊಸ ಜೋಡಿ ಜೊತೆ ಸೆಟ್ನಲ್ಲಿದ್ದ ಕಲಾವಿದರು ಮಾತನಾಡಿದ್ದಾರೆ.
9/ 9
ಉಡುಪಿಯಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ಹರಿಪ್ರಿಯಾ ಅವರ ಭೇಟಿಯ ಫೋಟೋಗಳು ಇವು. ಅಂತೂ ಈಗ ಜೋಡಿ ಹೆಚ್ಚು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.