Haripriya-Vasishta Simha: ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆ ಸಂಭ್ರಮ; ಅರಿಶಿನ ಶಾಸ್ತ್ರದ ಅಪೂರ್ವ ಕ್ಷಣಗಳು
ಸ್ಯಾಂಡಲ್ವುಡ್ನ ಲವ್ ಬರ್ಡ್ಸ್ ಹರಿಪ್ರಿಯಾ-ವಸಿಷ್ಠ ಸಿಂಹ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಮದುವೆ ಕಾರ್ಯಗಳು ಶುರುವಾಗಿದೆ. ಸಿಂಹಪ್ರಿಯಾ ಅರಿಶಿನ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ.
ಇಂದು ಹರಿಪ್ರಿಯ ಮನೆಯಲ್ಲಿ ಅರಿಸಿನ ಶಾಸ್ತ್ರ ಕಾರ್ಯಕ್ರಮ ನಡೆದಿದೆ. ಮನದರಸಿಗೆ ವಸಿಷ್ಠ ಸಿಂಹ ಅರಿಸಿನ ಅಚ್ಚಿದ್ದಾರೆ.
2/ 7
ಸ್ಯಾಂಡಲ್ವುಡ್ನ ಮುದ್ದಾದ ಜೋಡಿ ಮದುವೆ ಸಂಭ್ರಮದಲ್ಲಿದ್ದು, ಅರಿಶಿನ ಶಾಸ್ತ್ರದ ಫೋಟೋಗಳನ್ನ ನಟಿ ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
3/ 7
ಅರಿಶಿನ ಶಾಸ್ತ್ರದ ಅಪೂರ್ವ ಕ್ಷಣಗಳು ಎಂದು ನಟಿ ಹರಿಪ್ರಿಯೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
4/ 7
ಸ್ಯಾಂಡಲ್ವುಡ್ನ ಲವ್ ಬರ್ಡ್ಸ್ಗಳ ಪಟ್ಟಿ ಸೇರಿದ ನಟಿ ಹರಿಪ್ರಿಯಾ (Haripriya) ಹಾಗೂ ನಟ ವಸಿಷ್ಠ ಸಿಂಹ (Vasishta Simha) ಹಸೆಮಣೆ ಏರಲು ರೆಡಿಯಾಗಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಜೋಡಿ ಸಿದ್ದರಾಗಿದ್ದಾರೆ.
5/ 7
ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿವಾಹ ಜರುಗಲಿದೆ.
6/ 7
ಇದೇ ತಿಂಗಳ 28ರಂದು ಬೆಂಗಳೂರಿನಲ್ಲಿ ವಸಿಷ್ಠ ಸಿಂಹ-ಹರಿಪ್ರಿಯಾ ರಿಸೆಪ್ಷನ್ ಅದ್ಧೂರಿಯಾಗಿ ನಡೆಯಲಿದೆ.
7/ 7
ಮೈಸೂರಿನಲ್ಲಿ ನಡೆಯುವ ಮದುವೆಯಲ್ಲಿ ಸ್ಯಾಂಡಲ್ವುಡ್ನ ನಟ-ನಟಿಯರು ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಿದ್ದಾರೆ.