Haripriya-Vasishta Simha: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿಂಹಪ್ರಿಯ! ಇಲ್ಲಿವೆ ಮದುವೆ ಫೋಟೋಸ್
Haripriya-Vasishta simha: ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಮದುವೆಯಾಗಿದ್ದಾರೆ. ಅವರ ಮದುವೆ ಫೋಟೋಸ್ ಈಗ ವೈರಲ್ ಆಗಿವೆ.
1/ 7
ಸ್ಯಾಂಡಲ್ವುಡ್ ಸ್ಟಾರ್ ಸೆಲೆಬ್ರಿಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಫೋಟೋಗಳು ವೈರಲ್ ಆಗಿವೆ.
2/ 7
ನಟಿ ಹರಿಪ್ರಿಯಾ ಅವರು ನೀಲಿ ಬಣ್ಣದ ಬಾರ್ಡರ್ ಇದ್ದಂತಹ ಸೀರೆ ಉಟ್ಟಿದ್ದರೆ ವಸಿಷ್ಠ ಸಿಂಹ ಕೂಡಾ ಸುಂದರವಾದ ಉಡುಪಿನಲ್ಲಿ ಸ್ಟೈಲಿಷ್ ಆಗಿ ಕಂಡುಬಂದರು.
3/ 7
ಪೇಟವನ್ನು ಧರಿಸಿ ಮದುಮಗನ ಲುಕ್ನಲ್ಲಿ ಸಖತ್ತಾಗಿ ಮಿಂಚಿದ ನಟ ವಸಿಷ್ಠ ಸಿಂಹ ಮುಖದಲ್ಲಿ ಮದುವೆ ಸಂಭ್ರಮ ತುಂಬಿತ್ತು. ಹರಿಪ್ರಿಯಾ ಕೂಡಾ ಕ್ಯೂಟ್ ಆಗಿ ಕಾಣಿಸಿದ್ದಾರೆ.
4/ 7
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ದುಬೈ ಪ್ರವಾಸ ಹೋಗಿದ್ದಾಗ ಜೊತೆಯಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಬೆಂಗಳೂರು ಏರ್ಪೋರ್ಟ್ನಲ್ಲಿದ್ದ ಇವರ ಫೋಟೋ ವೈರಲ್ ಆಗಿತ್ತು.
5/ 7
ಈ ಅದ್ಧೂರಿ ಮದುವೆಯಲ್ಲಿ ಪ್ರತಾಪ್ ಸಿಂಹ ಅವರೂ ಭಾಗಿಯಾಗಿದ್ದರು. ಹಾಗೆಯೇ ಮೈಸೂರಿನ ಪ್ರಮುಖ ರಾಜಕಾರಣಿಗಳೂ ಇದ್ದರು.
6/ 7
ವಿವಾಹ ಶಾಸ್ತ್ರಗಳಲ್ಲಿ ನಟಿ ಹರಿಪ್ರಿಯಾ ಅವರು ಕ್ರೀಂ ಕಲರ್ ಸೀರೆ ಉಟ್ಟಿದ್ದರು. ಅವರ ಕೈಯಲ್ಲಿದ್ದ ಮೆಹಂದಿಯೂ ಫೋಟೋದಲ್ಲಿ ಹೈಲೈಟ್ ಆಗಿದೆ.
7/ 7
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸುವ ಹಲವಾರು ಫೋಟೋಗಳು ವೈರಲ್ ಆಗಿದ್ದವು.
First published: