ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ನಿಶ್ಚಿತಾರ್ಥ ಸರಳವಾಗಿ ನಡೆದಿದೆ. ದುಬೈಗೆ ಹಾರಿದ್ದ ಸ್ಯಾಂಡಲ್ವುಡ್ ಜೋಡಿ ಶೀಘ್ರ ಹಸೆಮಣೆ ಏರಲಿದ್ದಾರೆ. ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇತ್ತೀಚೆಗೆ ಬೆಂಗಳೂರು ಏರ್ಪೋರ್ಟ್ನಲ್ಲಿ ಕೈ ಕೈ ಹಿಡಿದು ಹೆಜ್ಜೆ ಇಟ್ಟಾಗ ಇವರ ರಿಲೇಷನ್ಶಿಪ್ ವಿಚಾರ ಬಯಲಾಗಿತ್ತು. ದುಬೈಗೆ ವಕೇಷನ್ ಹೋಗಿದ್ದಾರೆ ಎನ್ನಲಾಗಿದ್ದ ಜೋಡಿ ದಿಢೀರ್ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಸರ್ಪೈಸ್ ಕೊಟ್ಟಿದ್ದಾರೆ. ಈಗ ನಟಿ ಹೊಸ ಫೋಟೋ ಶೇರ್ ಮಾಡಿದ್ದಾರೆ. ದುಬೈನ ಮರಳುಗಾಡಿನಲ್ಲಿ ವಸಿಷ್ಠ ಸಿಂಹ ಜೊತೆ ಸುಂದರ ಸಂಜೆಯನ್ನು ಕಳೆಯುತ್ತಿರುವ ನಟಿ ಅದರ ಫೋಟೋ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ವಸಿಷ್ಠ ಸಿಂಹ - ಹರಿಪ್ರಿಯಾ ಫೋಟೊ ನೋಡಿ ನಟಿ ಅಮೂಲ್ಯ, ಸೋನು ಗೌಡ, ಕಾವ್ಯ ಶೆಟ್ಟಿ ಅವರು ಕಾಮೆಂಟ್ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ಆದರೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ ಮೊದಲು ವಸಿಷ್ಠನ ಫಾಲೋ ಮಾಡಮ್ಮ, ಆಮೇಲೆ ಮದುವೆ ಆಗುವಂತೆ ಎಂದಿದ್ದಾರೆ. ನಟಿ ಇನ್ಸ್ಟಾಗ್ರಾಮ್ನಲ್ಲಿ 9 ಜನರನ್ನು ಮಾತ್ರ ಫಾಲೋ ಮಾಡುತ್ತಾರೆ. ಆದರೆ ವಸಿಷ್ಠ ಸಿಂಹ ಅವರನ್ನು ಫಾಲೋ ಮಾಡುತ್ತಿಲ್ಲ. ನಟಿ 711 ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.