ದೇಶ ಮತ್ತು ವಿಶ್ವದಲ್ಲಿ ರಜನಿಕಾಂತ್ ಅಭಿಮಾನಿಗಳ ಪಟ್ಟಿ ಬಹಳ ದೊಡ್ಡದಿದೆ. ಭಾರತೀಯ ಕ್ರಿಕೆಟಿಗರು ಕೂಡ ತಲೈವಾ ಅವರ ದೊಡ್ಡ ಅಭಿಮಾನಿಗಳು ಮತ್ತು ಈ ಸೂಪರ್ ಸ್ಟಾರ್ ಬಗ್ಗೆ ತಮ್ಮ ಕ್ರೇಜ್ ಅನ್ನು ಬಹಿರಂಗಪಡಿಸಿದ್ದಾರೆ. ರಜನಿಕಾಂತ್ ಅಭಿಮಾನಿಯವರೊಬ್ಬರು ರಜನಿಕಾಂತ್ ಅವರ ಟ್ಯಾಟೂವನ್ನು ಒಮ್ಮೆ ತಮ್ಮ ಎದೆಯ ಮೇಲೆ ಹಾಕಿಸಿಕೊಂಡಿದ್ದರು. (ಕುಲದೀಪ್ ಯಾದವ್ Instagram)
ಹರ್ಭಜನ್ ಸಿಂಗ್ ಅವರು ರಜನಿಕಾಂತ್ ಭಾವಚಿತ್ರದ ಟ್ಯಾಟೂವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ ಹರ್ಭಜನ್ ಸಿಂಗ್, ನಟನೆಯತ್ತ ಮುಖ ಮಾಡಿದ್ದಾರೆ. ಹರ್ಭಜನ್ ಸಿಂಗ್ 2021ರಲ್ಲಿ ತಮಿಳು ಸಿನಿಮಾ ಫ್ರೆಂಡ್ಶಿಪ್ನಲ್ಲಿ ಕೆಲಸ ಮಾಡಿದರು. ಅದೇ ವರ್ಷ, ರಜನಿಕಾಂತ್ ತಲೈವಾ ಅವರ 71 ನೇ ಹುಟ್ಟುಹಬ್ಬದಂದು, ಹರ್ಭಜನ್ ಈ ಸೂಪರ್ ಸ್ಟಾರ್ಗೆ ಅಭಿಮಾನಿಯಾಗಿ ಪ್ರೀತಿಯನ್ನು ವ್ಯಕ್ತಪಡಿಸಲು ವಿಶೇಷ ಕೆಲಸ ಮಾಡಿದ್ದಾರೆ. ಭಜ್ಜಿ ಎದೆಯ ಮೇಲೆ ರಜನಿಕಾಂತ್ ಮುಖದ ಹಚ್ಚೆ ಹಾಕಿಸಿಕೊಂಡಿದ್ದರು. (ಹರ್ಭಜನ್ ಸಿಂಗ್ ಇನ್ಸ್ಟಾಗ್ರಾಮ್)
ನವೆಂಬರ್ 2021ರಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟ ಮಧ್ಯಪ್ರದೇಶದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಕೂಡ ರಜನಿಕಾಂತ್ ಅವರ ಅಭಿಮಾನಿಯಾಗಿದ್ದಾರೆ. ಅವರು ತಮ್ಮ ವಾಟ್ಸಾಪ್ ಡಿಪಿಯಲ್ಲಿ ರಜನಿಕಾಂತ್ ಅವರ ಫೋಟೋವನ್ನು ಹಲವು ಬಾರಿ ಹಾಕಿದ್ದಾರೆ. ವೆಂಕಟೇಶ್ ಅಯ್ಯರ್ ಅವರು 2021-22 ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಚಂಡೀಗಢ ವಿರುದ್ಧ ಶತಕ ಗಳಿಸಿದ್ದರು. ಈ ಆಲ್ ರೌಂಡರ್ ರಜನಿಕಾಂತ್ ಅವರ 71 ನೇ ಹುಟ್ಟುಹಬ್ಬದಂದು ತಮ್ಮ ಶತಕವನ್ನು ಅರ್ಪಿಸಿದರು. ರಜನಿಕಾಂತ್ ಶೈಲಿಯಲ್ಲಿ ಮೈದಾನದಲ್ಲಿ ಹಲವು ಬಾರಿ ಸಂಭ್ರಮಿಸಿದ್ದಾರೆ. (ವೆಂಕಟೇಶ್ ಅಯ್ಯರ್ Instagram)
ಇತ್ತೀಚೆಗೆ, ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಕೂಡ ಸೂಪರ್ಸ್ಟಾರ್ ರಜನಿಕಾಂತ್ ಜೊತೆಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರಜನಿಕಾಂತ್ ಸಂಜು ಅವರನ್ನು ಮನೆಗೆ ಕರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸಂಜು ತಮ್ಮ ಮನದಾಳವನ್ನು ವ್ಯಕ್ತಪಡಿಸಿದ್ದರು. ಸಂಜು ಸ್ಯಾಮ್ಸನ್ ಅವರು 7 ವರ್ಷ ವಯಸ್ಸಿನಿಂದಲೂ ರಜನಿಕಾಂತ್ ಅವರ ಅಭಿಮಾನಿ ಎಂದು ಟ್ವೀಟ್ ಮಾಡಿದ್ದರು. ಬಾಲ್ಯದಲ್ಲಿಯೇ, ಒಂದು ದಿನ ನಾನು ರಜನಿಕಾಂತ್ ಅವರನ್ನು ಅವರ ಮನೆಯಲ್ಲೇ ಭೇಟಿಯಾಗುತ್ತೇನೆ ಎಂದು ಹೇಳಿದ್ದರಂತೆ. 21 ವರ್ಷಗಳ ನಂತರ ಸಂಜು ಅವರ ಈ ಕನಸು ನನಸಾಗಿದ್ದು, ತಲೈವಾ ಅವರನ್ನು ಮನೆಗೆ ಕರೆದಿದ್ದರು. (ಸಂಜು ಸ್ಯಾಮ್ಸನ್ Instagram)