Happy Birthday Yogesh: ಕನ್ನಡಿಗರ ಅಭಿಮಾನದ ಅಂಬಾರಿ ಹೊತ್ತ ಯೋಗಿಗೆ ಹುಟ್ಟುಹಬ್ಬದ ಸಂಭ್ರಮ, ಲೂಸ್ ಮಾದನ ದುನಿಯಾ ಕಥೆ ಇಲ್ಲಿದೆ
Happy Birthday Loose Mada Yogi: ಸ್ಯಾಂಡಲ್ವುಡ್ನಲ್ಲಿ ಲೂಸ್ ಮಾದ ಎಂದೇ ಖ್ಯಾತರಾಗಿರುವ ನಟ ಯೋಗಿ. ಇಂದು ಯೋಗಿ ಅವರ ಹುಟ್ಟುಹಬ್ಬ.ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಅವರ ಅಭಿನಯದ ಹೊಸ ಚಿತ್ರಗಳ ತಂಡಗಳು ಶುಭ ಕೋರಿವೆ.
ನಟ ಲೂಸ್ ಮಾದ ಯೋಗಿ, ಈ ಹೆಸರನ್ನು ಕೇಳಿದ್ರೆ ನೆನಪಾಗೋದು ಜಿಂಕೆ ಮರಿನಾ ಹಾಡು. ಈ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಪ್ರತಿಯೊಬ್ಬರ ಬಾಯಲ್ಲೂ ಇದೇ ಕಾಡು ಕೇಳಿ ಬರುತ್ತಿತ್ತು. ಈಗಲೂ ಜನರ ನೆನಪಿನಲ್ಲಿ ಈ ಹಾಡಿದೆ.
2/ 8
ದುನಿಯಾ ಸಿನಿಮಾದಲ್ಲಿ ವಿಲನ್ ಆಗಿ ಮೊದಲ ಬಾರಿಗೆ ಜನರ ಮುಂದೆ ಬಂದಿದ್ದ ಯೋಗಿ ಲೂಸ್ ಮಾದ ಎಂದು ಫೇಮಸ್ ಆದವರು. ಸ್ಯಾಂಡಲ್ವುಡ್ಗೆ ಹೊಸ ವಿಲನ್ ಎಂಟ್ರಿ ಎಂದು ಹೇಳಲಾಗಿತ್ತು. ಆದರೆ ಅವರು ಹೀರೋ ಆಗಿ ಮೆರೆದಿದ್ದಾರೆ.
3/ 8
ಆರಂಭದಲ್ಲಿ ಹಲವು ಹಿಟ್ ಸಿನಿಮಾ ನೀಡಿದ್ದ ಯೋಗಿ ನಂತರ ಸೋಲಿನ ರುಚಿಯನ್ನು ಸಹ ಅನುಭವಿಸಿದ್ದಾರೆ. ಆದರೆ ಅದಕ್ಕೆ ಕುಗ್ಗದ ಯೋಗಿ ಮತ್ತೆ ಅದೇ ಭರವಸೆಯೊಂದಿಗೆ ತೆರೆಯ ಮೇಲೆ ಬಂದಿದ್ದಾರೆ.
4/ 8
ಸಾಹಿತ್ಯಾ ಅವರನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ದಂಪತಿಗೆ ಶ್ರೀನಿಕಾ ಎಂಬ ಮಗಳಿದ್ದಾಳೆ. 16ನೇ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ಈ ನಟ ಮತ್ತೆ ತೆರೆಮೇಲೆ ಘರ್ಜಿಸುತ್ತಿದ್ದಾರೆ.
5/ 8
ನಂದ ಲವ್ಸ್ ನಂದಿತಾ' ಸಿನಿಮಾದಲ್ಲಿ ಮೊದಲ ಬಾರಿ ನಾಯಕರಾದಾಗ ಯೋಗಿಗೆ ಕೇವಲ 17 ವರ್ಷ. ಈ ಸಿನಿಮಾ ಸೂಪರ್ ಹಿಟ್ ಆಯ್ತು. ನಂತರ ಅಂಬಾರಿ ಸೇರಿದಂತೆ ಅನೇಕ ಭರ್ಜರಿ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ.
6/ 8
ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಈ ನಟ ಬಹಳಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸಿದ್ಲಿಂಗು ಸಿನಿಮಾ ಅವರಿಗೆ ಬಹಳಷ್ಟು ಹೆಸರು ತಂದುಕೊಟ್ಟಿದೆ. ಆದರೆ ಅವರ ನಿರ್ಮಾಣದ ಯಕ್ಷ ಸಿನಿಮಾ ದೊಡ್ಡ ಹೊಡೆತ ನೀಡಿತು.
7/ 8
ಹಲವಾರು ನೋವುಗಳ ನಂತರ ಮತ್ತೆ ಯೋಗಿ ಪುಟಿದೆದ್ದಿದ್ದು ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಲಂಕೆ, ಕಿರಿಕ್ ಶಂಕರ್ ಸೇರಿದಂತೆ ವಿವಿಧ ಸಿನಿಮಾಗಳು ಬಿಡುಗಡೆಯಾಗಿ ಹೆಸರು ಮಾಡಿದೆ.
8/ 8
ವಿನೋದ್ ಪ್ರಭಾಕರ್ ಜೊತೆ ಲಂಕಾಸುರ ಸೇರಿದಂತೆ ಅನೇಕ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಿನಿಮಾಗಳ ಜೊತೆ ಜನರಿಗೆ ಮನರಂಜನೆ ನೀಡುವ ವಿಶ್ವಾಸ ಅವರಲ್ಲಿದೆ.