ಸ್ಯಾಂಡಲ್ವುಡ್ನಲ್ಲಿ `ಕೃಷ್ಣ’ ಅಂತಲೇ ಫೇಮಸ್ ಆಗಿರುವ ನಟ ಎಂದರೇ.. ಅದು ನಮ್ಮ ಅಜಯ್ ರಾವ್ `ಕೃಷ್ಣ’ನ ಹೆಸರಿರುವ ಹೆಚ್ಚಿನ ಸಿನಿಮಾಗಳಲ್ಲಿ ನಟ ಅಜಯ್ ರಾವ್ ನಟಿಸಿದ್ದಾರೆ.ಇಂದು ಅಜಯ್ ರಾವ್ಗೆ ಹುಟ್ಟುಹಬ್ಬದ ಸಂಭ್ರಮ.
2/ 7
`ಎಕ್ಸ್ಕ್ಯೂಸ್ ಮಿ’ ಸಿನಿಮಾ ಮೂಲಕ ಅಜಯ್ ರಾವ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅಜಯ್ ರಾವ್, ರಮ್ಯಾ ಹಾಗೂ ಸುನೀಲ್ ರಾವ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.
3/ 7
ಅಜಯ್ ರಾವ್ ಅವರ ಮೊದಲ ಚಿತ್ರ ಅಭೂತ ಪೂರ್ವವಾಗಿ ಯಶಸ್ವಿ ಕಂಡು ಇವರಿಗೆ ಒಳ್ಳೆ ಇಮೇಜ್ ತಂದುಕೊಡುವಲ್ಲಿ ಯಶಸ್ವಿಯಾಯಿತು. ನಂತರ 2008 ರಲ್ಲಿ ತೆರೆಕಂಡಿರುವ "ತಾಜ್ ಮಹಲ್" ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು.
4/ 7
"ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಮ್ಯಾರೇಜ್ ಲವ್ ಸ್ಟೋರಿ, ಕೃಷ್ಣ ಲೀಲಾ, ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
5/ 7
ಕೇವಲ ನಟನೆ ಮಾಡುವುದಲ್ಲದೆ ಕೆಲ ಚಿತ್ರಗಳಿಗೆ ನಿರ್ಮಾಪಕರಾಗಿಯೂ ಕನ್ನಡ ಚಿತ್ರಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗೆ ಇವರ ಅಭಿನಯದ ಸಿನಿಮಾ ಲವ್ ಯೂ ರಚ್ಚು ತೆರೆ ಕಂಡಿತ್ತು.
6/ 7
ಸ್ಯಾಂಡಲ್ವುಡ್ ನಟ ಅಜಯ್ ರಾವ್ (Krishna Ajay Rao) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಕುಟುಂಬದವರ ಜೊತೆಗೆ ಕಾಲ ಕಳೆಯುತ್ತಾರೆ. ಮುದ್ದು ಮಗಳಾದ ಚೆರ್ರಿ (ಚರೀಷ್ಮಾ) ಜೊತೆ ಎಂಜಾಯ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
7/ 7
ಲವ್ ಯು ರಚ್ಚು ಸಿನಿಮಾ ನಂತರ ನಟ ಅಜಯ್ ರಾವ್ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಶ್ರಾವಣಿ ಸುಬ್ರಮಣ್ಯ ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಡೈರೆಕ್ಷನ್ ನ ಮುಂದಿನ ಸಿನಿಮಾದಲ್ಲಿ ಅಜಯ್ ರಾವ್ ನಟಿಸುತ್ತಿದ್ದಾರೆ.