Happy Birthday Rishab Shetty: ಗಂಡ ರಿಷಭ್ ಶೆಟ್ಟಿ ಹುಟ್ಟುಹಬ್ಬದಂದು ಕ್ಯೂಟ್ ಫೋಟೋ ಶೇರ್ ಮಾಡಿದ ಪ್ರಗತಿ ಶೆಟ್ಟಿ..!
ಅಪ್ಪಟ ದೇಸಿ ಪ್ರತಿಭೆ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಅವರು ಹುಟ್ಟುಹಬ್ಬ ಇಂದು. ಸ್ಟಾರ್ಗಳು ಹಾಗೂ ಅಭಿಮಾನಿಗಳು ರಿಷಭ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಇನ್ನು ರಿಷಭ್ ಶೆಟ್ಟಿ ಅವರ ಮಡದಿ ಪ್ರಗತಿ ಶೆಟ್ಟಿ ಗಂಡನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಪ್ರಗತಿ ಶೆಟ್ಟಿ ಇನ್ಸ್ಟಾಗ್ರಾಂ ಖಾತೆ)
ರಿಷಭ್ ಶೆಟ್ಟಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಿಷಭ್ ಅವರಿಗೆ ಅಭಿಮಾನಿಗಳು ಹಾಗೂ ಸ್ಟಾರ್ಗಳಾದ ರಕ್ಷಿತ್ ಶೆಟ್ಟಿ ಕಿರಣ್ ರಾಜ್ ಕೆ, ದರ್ಶನ್ ಸೇರಿದಂತೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ.
2/ 15
ಹೆಂಡತಿ ಪ್ರಗತಿ ಶೆಟ್ಟಿ ಸಹ ರಿಷಭ್ ಅವರಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.
3/ 15
ನಿನ್ನನ್ನು ಎಷ್ಟು ಇಷ್ಟ ಪಡುತ್ತೇನೆಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.ನಿನ್ನ ಪಕ್ಕ ನಿಲ್ಲಲು ಹೆಮ್ಮೆ ಇದೆ ಎಂದು ಗಂಡನಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ ಪ್ರಗತಿ ಶೆಟ್ಟಿ.
4/ 15
ಇನ್ಸ್ಟಾಗ್ರಾಂನಲ್ಲಿ ಮಗ ರಣ್ವಿತ್ ಹಾಗೂ ಗಂಡನ ಜೊತೆಗಿನ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಪ್ರಗತಿ.
5/ 15
ಇತ್ತೀಚೆಗೆ ರಿಷಭ್ ಕುಟುಂಬ ಸಮೇತರಾಗಿ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು.