Happy Birthday Pavan Wadeyar: ಹುಟ್ಟುಹಬ್ಬದಂದೇ ಸಿಕ್ತು ಅಮೂಲ್ಯವಾದ ಉಡುಗೊರೆ: ಗಂಡು ಮಗುವಿನ ತಂದೆಯಾದ ಪವನ್ ಒಡೆಯರ್..!
Apeksha Purohit: ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಿರ್ದೇಶಕ ಪವನ್ ಒಡೆಯರ್ ಹಾಗೂ ಮಡದಿ ಅಪೇಕ್ಷಾ ಪುರೋಹಿತ್ ಅವರಿಗೆ ಗಂಡು ಮಗುವಾಗಿದೆ. ಅದರಲ್ಲೂ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪವನ್ ಅವರಿಗೆ ಇಂದೇ ಅಮೂಲ್ಯವಾದ ಉಡುಗೊರೆ ಮಗುವಿನ ರೂಪದಲ್ಲಿ ಸಿಕ್ಕಿದೆ. ಈ ಸಂತಸದ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ಪವನ್ ಒಡೆಯರ್. (ಚಿತ್ರಗಳು ಕೃಪೆ: ಪವನ್ ಒಡೆಯರ್ ಇನ್ಸ್ಟಾಗ್ರಾಂ ಖಾತೆ)
ಸೆಲೆಬ್ರಿಟಿ ಜೋಡಿ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ಅವರಿಗೆ ಗಂಡು ಮಗುವಾಗಿದೆ.
2/ 20
ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಪವನ್ ಅವರಿಗೆ ಅವರ ಹುಟ್ಟುಹಬ್ಬದಂದೇ ಅಮೂಲ್ಯವಾದ ಉಡುಗೊರೆ ಸಿಕ್ಕಿದೆ. ತಮಗೆ ಮಗುವಾದ ವಿಷಯವನ್ನು ಪವನ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
3/ 20
ನಿರ್ದೇಶಕರಾಗಿದ್ದ ಪವನ್ ಈಗ ನಿರ್ಮಾಪಕರಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಡೊಳ್ಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಾಗರ್ ಪುರಾಣಿಕ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.