Nikita Thukral: ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ಎಂದ ನಿಖಿತಾಗೆ ಹುಟ್ಟುಹಬ್ಬದ ಸಂಭ್ರಮ, ವಂಶಿ ಬೆಡಗಿ ಮತ್ತೆ ಸಿನಿಮಾ ಮಾಡ್ತಾರಾ?
Happy Birthday Nikita: ನಿಖಿತಾ ತುಕ್ರಾಲ್ ಈ ಹೆಸರನ್ನು ಸಿನಿಪ್ರಿಯರು ಮರೆತಿರಲಿಕ್ಕಿಲ್ಲ. ಬಹುಕಾಲ ಬೇಡಿಕೆಯಲ್ಲಿದ್ದ ನಟಿ ಇವರು. ಇಂದು ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕಳೆದ ಕೆಲ ವರ್ಷಗಳಿಂದ ಸಿನಿರಂಗದಿಂದ ದೂರವಿರುವ ನಟಿ ಎಲ್ಲಿದ್ದಾರೆ, ಹೇಗಿದ್ದಾರೆ ಅಂತ ಅಭಿಮಾನಿಗಳು ಕೇಳುತ್ತಿದ್ದಾರೆ.
ಕನ್ನಡದಲ್ಲಿ ಒಂದು ಕಾಲದಲ್ಲಿ ನಿಖಿತಾ ಅವರಿಗೆ ಬಹಳ ಬೇಡಿಕೆ ಇತ್ತು. ಪ್ರತಿಯೊಬ್ಬ ನಟರೂ ಇವರೇ ನಾಯಕಿಯಾಗಿ ಬೇಕು ಎಂದು ಕೇಳುತ್ತಿದ್ದ ಸಮಯವಿತ್ತು.
2/ 8
ಸ್ಯಾಂಡಲ್ವುಡ್ನಲ್ಲಿ ಪ್ರತಿಯೊಂದು ಸ್ಟಾರ್ ಹೀರೋಗಳ ಜೊತೆ ತೆರೆಹಂಚಿಕೊಳ್ಳುವ ಮೂಲಕ ಟಾಪ್ನಲ್ಲಿದ್ದ ನಟಿ ಎಂದರೆ ಅದು ನಿಖಿತಾ. ಅವರಿಗೆ ಬಹಳ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಸಿನಿಮಾಗಳು ಲಭಿಸಿದ್ದು ಮಾತ್ರವಲ್ಲದೇ, ಅಭಿಮಾನಿಗಳನ್ನು ಸಹ ಪಡೆದುಕೊಂಡಿದ್ದರು.
3/ 8
2017ರಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ನಿಖಿತಾ ಒಂದು ಮಗುವಿನ ತಾಯಿ ಕೂಡ. ಮದುವೆಯ ಬಳಿಕ ಅವರು ಮುಂಬೈನಲ್ಲೇ ನೆಲೆಸಿರುವ ಅವರು ಸಿನಿಮಾದಿಂದ ದೂರವಿದ್ದರು. ಆದರೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
4/ 8
ಬಿಗ್ ಬಾಸ್ ಕನ್ನಡ ಮೊದಲ ಸೀಸನ್ನಲ್ಲಿ ಕಾಣಿಸಿಕೊಂಡಿದ್ದ ನಿಖಿತಾ ನಂತರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅಭಿಮಾನಿಗಳಂತೂ ನಿಖಿತಾ ಎಲ್ಲಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದರು.
5/ 8
ನಂತರ 2020ರಲ್ಲಿ ನಿಖಿತಾ ಮರಳಿ ಬಣ್ಣ ಹಚ್ಚುವ ಬಗ್ಗೆ ಅಭಿಮಾನಿಗಳ ಜೊತೆ ವಿಷಯ ಹಂಚಿಕೊಂಡಿದ್ದರು. ಆದರೆ ಅದು ತೆಲುಗು ವೆಬ್ ಸೀರೀಸ್ ಆಗಿತ್ತು. ಈ ಬಗ್ಗೆ ನಂತರ ಯಾವುದೇ ಮಾಹಿತಿ ಇರಲಿಲ್ಲ. ಆ ಸಮಯದಲ್ಲಿ ಕನ್ನಡಕ್ಕೆ ಬರಲ್ವ ಎಂದು ಸಹ ಕೇಳಿದ್ದರು.
6/ 8
ಆದರೆ ನಿಖಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ, ನಂತರ ಯಾವುದೇ ಅಪ್ಡೇಟ್ ಸಹ ಕೊಟ್ಟಿಲ್ಲ. ಈಗಲೂ ಫ್ಯಾನ್ಸ್ ನಿಖಿತಾ ಕಮ್ಬ್ಯಾಕ್ ಮಾಡುವುದನ್ನು ಕಾಯುತ್ತಿದ್ದಾರೆ. ಅವರನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.
7/ 8
ತಮ್ಮ ಅದ್ಭುತ ಅಭಿನಯದ ಮೂಲಕ ಸ್ಯಾಂಡಲ್ವುಡ್, ಟಾಲಿವುಡ್, ಮಾಲಿವುಡ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಭಿನಯಿಸುವ ಮೂಲಕ ಬಹುಭಾಷಾ ನಟಿ ಎನಿಸಿಕೊಂಡಿರುವ ಸುಂದರಿ ಈ ಜನ್ಮದಿನದಂದಾದರೂ ಅಭಿಮಾನಿಗಳಿಗೆ ಗಿಫ್ಟ್ ಕೊಡ್ತಾರಾ ಕಾದು ನೋಡಬೇಕಿದೆ.
8/ 8
ಅದೇನೇ ಇರಲಿ ನಿಖಿತಾ ಉತ್ತಮ ನಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಭಿಮಾನಿಗಳು ಸಹ ನಟಿಗೆ ವಿಶ್ಗಳ ಮಳೆ ಸುರಿಸುತ್ತಿದ್ದಾರೆ.