HBD Mohanlal: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ಗೆ 62ರ ವಸಂತ! 'ಲಾಲೆಟ್ಟ' ಸಿನಿ ಬದುಕಿನ ಹೆಜ್ಜೆ ಗುರುತು ಇಲ್ಲಿವೆ
Happy Birthday Mohanlal: ಮೋಹನ್ ಲಾಲ್, ಮಲಯಾಳಂ ಚಿತ್ರರಂಗದ ಕಂಪ್ಲೀಟ್ ಆಕ್ಟರ್, ಅಭಿಮಾನಿಗಳ ಲಾಲೆಟ್ಟ ಎಂದೇ ಪ್ರಸಿದ್ಧ. ಮೋಹನ್ ಲಾಲ್ ಅವರು 1978 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅವರ ನಾಲ್ಕು ದಶಕಗಳ ವೃತ್ತಿಜೀವನದಲ್ಲಿ 340 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿನ್ನೆಲೆ ಗಾಯಕರಾಗಿ, ದೂರದರ್ಶನ ನಿರೂಪಕರಾಗಿ ಮತ್ತು ಚಲನಚಿತ್ರ ವಿತರಕರಾಗಿಯೂ ಕೆಲಸ ಮಾಡಿದ್ದಾರೆ. 1991 ಮತ್ತು 1999 ರಲ್ಲಿ, ಅವರು ಭಾರತಂ ಮತ್ತು ವಾನಪ್ರಸ್ಥಂ ಚಿತ್ರಗಳ ಪಾತ್ರಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದವರು. ಇಂದು ಅವರ ಜನ್ಮದಿನ. ಈ ಅದ್ಬುತ ನಟನ ಬಗ್ಗೆ ತಿಳಿಯದ ಕೆಲ ವಿಚಾರಗಳು ಇಲ್ಲಿದೆ.
ಮೋಹನ್ ಲಾಲ್ ಅವರು ತಿರುವನಂತಪುರದ ಯೂನಿವರ್ಸಿಟಿ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
2/ 10
ಒಂದು ವಿಶೇಷ ವಿಚಾರ ಎಂದರೆ ಕೇರಳದಲ್ಲಿ ಭಾರತದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮಕ್ಕಿಂತ ಹೆಚ್ಚಿನ ಚಲನಚಿತ್ರಗಳನ್ನು ವಿತರಿಸಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಸಂತೋಷ್ ಶಿವನ್ ಅವರ ದಿ ಟೆರರಿಸ್ಟ್ ನಂತಹ ವಿಭಿನ್ನ ರೀತಿಯ ಚಿತ್ರಗಳಾಗಿವೆ.
3/ 10
ಮೋಹನ್ ಲಾಲ್ ವಿಶ್ವನಾಥನ್ ಎಂಬುದು ಮೋಹನ್ ಲಾಲ್ ಅವರ ಪೂರ್ಣ ಹೆಸರಾಗಿದ್ದು, ಅವರು ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
4/ 10
ಮೋಹನ್ ಲಾಲ್ ಅವರು ಗೆದ್ದಿರುವ ಪ್ರಶಸ್ತಿಗಳ ಪಟ್ಟಿ ದೊಡ್ಡದು, ಎರಡು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳೆಂದರೆ, ಅವರು ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶ್ಸ್ತಿ ಪಡೆದಿದ್ದಾರೆ.
5/ 10
ಮೋಹನ್ ಲಾಲ್ ಅತ್ಯಂತ ಉದಾರ ವ್ಯಕ್ತಿತ್ವವನ್ನು ಹೊಂದಿದ್ದು. ಅವರು ವಿಶ್ವಶಾಂತಿ ಫೌಂಡೇಶನ್ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.
6/ 10
ಮೋಹನ್ಲಾಲ್ ಅವರು ಒಂದು ಕಾಲದಲ್ಲಿ ವೃತ್ತಿಪರ ಕುಸ್ತಿಪಟು ಆಗಿದ್ದರು ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ. ಅವರು ಕೇರಳ ರಾಜ್ಯ ಕುಸ್ತಿ ಚಾಂಪಿಯನ್ಶಿಪ್ ಪ್ರಶ್ಸ್ತಿ ಪಡೆದಿದ್ದಾರೆ (1977-1978). ಅವರು ಕೊರಿಯಾದ ಸಿಯೋಲ್ನಲ್ಲಿರುವ ವಿಶ್ವ ಟೇಕ್ವಾಂಡೋ ಪ್ರಧಾನ ಕಛೇರಿಯಿಂದ ಟೇಕ್ವಾಂಡೋದಲ್ಲಿ ಗೌರವ ಕಪ್ಪು ಪಟ್ಟಿಯನ್ನು ಪಡೆದ ಹೆಮ್ಮೆಯ ನಟ ಎನ್ನಬಹುದು.
7/ 10
18 ನೇ ವಯಸ್ಸಿನಲ್ಲಿ, ಅವರು ತಿರನೋಟ್ಟಂ (1978) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. 25 ವರ್ಷಗಳ ನಂತರ ಈ ಚಿತ್ರ 2013ರಲ್ಲಿ ಬಿಡುಗಡೆಯಾಗಿರುವುದು ಮತ್ತೊಂದು ಗಮನಾರ್ಹ ವಿಚಾರ.
8/ 10
ಅವರು ತಮ್ಮ ಚಿತ್ರಗಳ ಸುಮಾರು 31 ಹಾಡುಗಳಿಗೆ ದ್ವನಿ ನೀಡಿದ್ದಾರೆ. ಅವು ಅದ್ಭುತ ನಟರಲ್ಲದೇ, ಹಾಡುಗಾರರು ಹೌದು.
9/ 10
ಮೋಹನ್ ಲಾಲ್ 1986 ರಲ್ಲಿ ಒಟ್ಟು 34 ಚಲನಚಿತ್ರಗಳಲ್ಲಿ ಅಭಿನಯಿಸಿ, ಅದೇ ವರ್ಷದಲ್ಲಿ ಬಿಡಗಡೆ ಮಾಡಿದ್ದರು. ಅವುಗಳಲ್ಲಿ ಇಪ್ಪತ್ತೈದು ಬಾಕ್ಸ್ ಆಫೀಸ್ ಬ್ಲಾಕ್ಬಸ್ಟರ್ ಆಗಿದ್ದವು ಎಂಬುದು ಸಹ ವಿಶೇಷ.
10/ 10
ನಟನಾಗಿ ಮಾತ್ರವಲ್ಲದೇ ಮೋಹಲನ್ ಲಾಲ್ ಉದ್ಯಮಿಯಾಗಿ ಸಹ ಯಶಸ್ಸುಗಳಿಸಿದ್ದಾರೆ. ಕೋಝಿಕೋಡ್ ಮೂಲದ ದೊಡ್ಡ ಸಮುದ್ರಾಹಾರ ರಫ್ತು ಕಂಪನಿ ಯುನಿ ರಾಯಲ್ ಮರಿಯನ್ ಎಕ್ಸ್ಪೋರ್ಟ್ಸ್ನ ಪಾಲುದಾರ ಮತ್ತು ನಿರ್ದೇಶಕರಾಗಿದ್ದು, ದುಬೈನಲ್ಲಿರುವ ಲಾಲ್ನ ಟೇಸ್ಟ್ಬಡ್ಸ್ ರೆಸ್ಟೋರೆಂಟ್ನ ಮಾಲೀಕರು ಕೂಡ ಹೌದು.