ಲತಾ ಮಂಗೇಶ್ಕರ್ ಅವರು ರಸಿಕ ಬಲಮಾ (ಚೋರಿ ಚೋರಿ), ಜ್ಯೋತಿ ಕಲಷ್ ಛಲಕೇ ... (ಭಾಭೀ ಕೀ ಚೂಡಿಯಾಂ), ಯೆ ದಿಲ್ ಔರ್ ಉನ್ ಕೀ ನಿಗಾಹೋಂಕೆ ಸಾಯೇ(ಪ್ರೇಮ್ ಪರ್ಬತ್), ಕುಹೂ ಕುಹೂ ಬೋಲೇ ಕೋಯಲಿಯಾ(ಸುವರ್ಣ ಸುಂದರಿ), ಪಂಖ್ ಹೋತೀ ತೋ ಉಡ್ ಜಾತೀರೇ(ಸೆಹರಾ), ನೈನೋಂ ಮೆ ಬದರಾ ಛಾಯೆ (ಮೇರಾ ಸಾಯಾ), ಜಾನೆ ಕೈಸೆ ಸಪನೋಂಮೆ ಖೋಗಯೀ ಅಖಿಯಾಂ (ಅನುರಾಧ), ತುಮ್ ನ ಜಾನೆ ಕಿಸ್ ಜಹಾಂಮೆ ಖೋಗಯೇ(ಸಜಾ), ಏರೀ ಮೈ ತೋ ಪ್ರೇಮ್ ದಿವಾನಿ(ಬಹಾರ್), ಯೂಂ ಹಸರತೋಂ ಕೆ ದಾಗ್ (ಅದಾಲತ್) ಯೆ ಜಿಂದಗೀ ಉಸೀಕಿ ಹೈ (ಅನಾರ್ ಕಲೀ), ಮೋಹೆ ಭೂಲ್ ಗಯೇ ಸಾವರಿಯಾಂ (ಬೈಜೂ ಬಾವ್ರಾ), ಧೀರೆಸೆ ಆಜಾರೆ ಅಖಿಯನ್ ಮೇಂ ನಿಂದಿಯಾ, ರೈನಾ ಬೀತಿ ಜಾಯೇ, ಪವನ್ ದಿವಾನಿ, ಕೈಸೆ ಜಾಂವು ಜಮುನಾ ಕೆ ತೀರ್ ಪ್ರಸಿದ್ಧ ಹಾಡುಗಳನ್ನು ಹಾಡಿದ್ದಾರೆ.
ಲತಾ ಮಂಗೆಶ್ಕರ್ ಅವರ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ 6 ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್ (ನ್ಯೂಯಾರ್ಕ್ ವಿಶ್ವವಿದ್ಯಾಲಯವೂ) ಸೇರಿದಂತೆ, ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು, ಶಾಂತಿನಿಕೇತನದಿಂದ ದೇಶಿಕೋತ್ತಮ ಪ್ರಶಸ್ತಿ, ಆಸ್ಥಾನ ವಿದ್ವಾನ್, ತಿರುಪತಿ ದೇವಸ್ಥಾನಮ್ದಾ, ದಾಸಾಹೆಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ, ಭಾರತರತ್ನಫ್ರಾನ್ಸ್ ಸರ್ಕಾರ ನೀಡುವ ’ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್’ ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ.