Happy Birthday Kamal Haasan 65ನೇ ವರ್ಷಕ್ಕೆ ಕಾಲಿಟ್ಟ ನಟ ಕಮಲ್ ಹಾಸನ್
ಇಂದು ಸೂಪರ್ ಸ್ಟಾರ್ ಕಮಲ್ ಹಾಸನ್ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1954 ನವೆಂಬರ್ 7ರಂದು ಕಮಲ್ ಹಾಸನ್ ಜನಿಸಿದರು. ನಟನಾಗಿ, ನೃತ್ಯಗಾರನಾಗಿ, ನಿರ್ದೇಶಕರಾಗಿ,ನಿರ್ಮಾಪಕರಾಗಿ, ಗಾಯಕರಾಗಿ ಹಾಗೂ ರಾಜಕೀಯ ರಂಗದಲ್ಲೂ ಹೆಸರು ಮಾಡಿದ್ದಾರೆ. ಬಾಲನಟನಾಗಿ ತಮಿಳು ಚಿತ್ರರಂಗದ ಮೂಲಕ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ. ತಮಿಳು ಚಿತ್ರರಂಗ ಸೇರಿದಂತೆ ತೆಲುಗು, ಮಲಯಾಳ, ಕನ್ನಡ, ಹಿಂದಿ ಹಾಗೂ ಬೆಂಗಾಳಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.