ಕಮಲ್ ಹಾಸನ್ ಇಂದು 64ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಾಲ್ಕು ವರ್ಷಗಳಿಗೂ ಅಧಿಕ ಕಾಲ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದ ಅವರು ಈಗ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ‘ಪುಷ್ಪಕ ವಿಮಾನ’ ಸೇರಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ ಹೆಚ್ಚುಗಾರಿಕೆ ಅವರದ್ದು. ಕಮಲ್ ನಟನೆಯ ವಿಶ್ವರೂಪಮ್ 2 ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನೆಲ ಕಚ್ಚಿತ್ತು. ಸದ್ಯ ಶಭಾಶ್ ನಾಯ್ಡುಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿರುವ ಅವರು, ನಂತರ ಸಂಪೂರ್ಣವಾಗಿ ರಾಜಕೀಯದಲ್ಲೇ ತೊಡಗಿಕೊಳ್ಳುತ್ತಾರಂತೆ. ಅವರ ಸಿನಿ ಬದುಕಿನಲ್ಲಿ ಮೈಲಿಗಲ್ಲಾದ ಕೆಲ ಸಿನಿಮಾಗಳ ವಿವರ ಸಹಿತ ಫೋಟೋಗಳು ನಿಮಗಾಗಿ.
News18 | November 7, 2018, 12:41 PM IST
1/ 5
ಬಾಲ ಕಲಾವಿದನಾಗಿ ಕಮಲ್ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇವರು ಬಣ್ಣದ ಬದುಕು ಆರಂಭಿಸಿದ್ದು ತಮಿಳು ಚಿತ್ರರಂಗದ ಮೂಲಕ. ನಂತರ ತೆಲುಗು, ಕನ್ನಡ, ಮಲಯಾಳಂ, ಹಿಂದಿ ಚಿತ್ರರಂಗದಲ್ಲೂ ಛಾಪು ಮೂಡಿಸಿದರು. ಎಕ್ ದೂಜೆ ಕೆ ಲಿಯೆ ಅವರ ಮೊದಲ ಹಿಂದಿ ಚಿತ್ರ.
2/ 5
1983ರಲ್ಲಿ ತೆರೆಕಂಡ 'ಸದ್ಮಾ' ಚಿತ್ರ ಕಮಲ್ ಸಿನಿ ಬದುಕಿಗೆ ಮತ್ತಷ್ಟು ಮೈಲೇಜ್ ನೀಡಿತ್ತು. ಈ ಚಿತ್ರದಲ್ಲಿ ಅವರಿಗೆ ಜೊತೆಯಾಗಿ ಶ್ರೀದೇವಿ ಕಾಣಿಸಿಕೊಂಡಿದ್ದರು.
3/ 5
1985ರಲ್ಲಿ ತೆರೆಕಂಡಿದ್ದ 'ಸಾಗರ್' ಚಿತ್ರದಲ್ಲಿ ಕಮಲ್ಗೆ ಜತೆಗೆ ರಿಷಿ ಕಪೂರ್ ಹಾಗೂ ಡಿಂಪಲ್ ಕಪಾಡಿಯ ಕೂಡ ನಟಿಸಿದ್ದರು. ಈ ಸಿನಿಮಾಗೆ ಮೆಚ್ಚುಗೆ ಕೇಳಿ ಬಂದಿತ್ತು.
4/ 5
1997ರಲ್ಲಿ ಹಿಂದಿಯಲ್ಲಿ ತೆರೆಕಂಡ 'ಚಾಚಿ 420' ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಕಮಲ್ ಮಹಿಳೆಯ ಪಾತ್ರ ನಿರ್ವಹಿಸಿದ್ದರು.
5/ 5
2013ರಲ್ಲಿ ತೆರೆಕಂಡು ಹಿಟ್ ಆಗಿದ್ದ 'ವಿಶ್ವರೂಪಂ' ಚಿತ್ರದ ಮುಂದಿನ ಭಾಗವಾಗಿ 'ವಿಶ್ವರೂಪಮ್ 2' ಈ ವರ್ಷ ತೆರೆಕಂಡಿತ್ತು. ಆದರೆ ಜನರು ಈ ಚಿತ್ರ ಮಕಾಡೆ ಮಲಗಿತ್ತು.