Kailash Kher: ಹಳೆ ಪಾತ್ರೆ ಹಳೆ ಕಬ್ಬಿಣಕ್ಕೆ ವ್ಯಾಲ್ಯೂ ತಂದುಕೊಟ್ಟವರು ಇವರು, ಚೆಂದ ಚೆಂದ ಚೆಂದ ಕೈಲಾಶ್ ಖೇರ್ ವಾಯ್ಸು!
Happy Birthday Kailash Kher: ಕೈಲಾಸ್ ಖೇರ್ ಭಾರತದ ಪ್ರಖ್ಯಾತ ಹಿನ್ನಲೆ ಗಾಯಕ. ಈ ಕಂಠದಲ್ಲಿ ಮೂಡಿಬಂದ ಪ್ರತಿಯೊಂದು ಹಾಡುಗಳು ಇಂದಿಗೂ ಜನರ ಬಾಯಲ್ಲಿ ಕೇಳುತ್ತದೆ. ಈ ಅದ್ಭುತ ಗಾಯಕ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ಗಾಯಕನ ಬಗ್ಗೆ ಗೊತ್ತಿಲ್ಲದ ಕೆಲ ಸಂಗತಿಗಳು ಇಲ್ಲಿದೆ
ಉತ್ತರ ಪ್ರದೇಶದ ಮೀರತ್ನಲ್ಲಿ 7 ಜುಲೈ 1973 ರಂದು ಜನಿಸಿದರುಕೈಲಾಶ್ ಖೇರ್ಇಂದು ಜನ್ಮದಿನ. 10ಕ್ಕೂ ಹೆಚ್ಚು ಭಾಷೆಗಳಲ್ಲಿ 700ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಕೈಲಾಶ್ ಖೇರ್ ಸಂಗೀತವನ್ನು ದೈವ ದತ್ತವಾಗಿ ಪಡೆದಿದ್ದಾರೆ.
2/ 8
ಕೈಲಾಶ್ ಬಾಲ್ಯದಲ್ಲಿ ತಂದೆಯಿಂದ ಸಂಗೀತ ಪಾಠಗಳನ್ನು ಕಲಿತರು. ಆದರೆ ವಿಶೆಷ ಗೊತ್ತಾ, ಸಂಗೀತದೊಂದಿಗೆ ಅವರ ಒಡನಾಟದ ಹೊರತಾಗಿಯೂ, ಅವರು ಎಂದಿಗೂ ಬಾಲಿವುಡ್ ಹಾಡುಗಳನ್ನು ಕೇಳುತ್ತಿರಲಿಲ್ಲವಂತೆ.
3/ 8
ಕೈಲಾಶ್ ಕೇವಲ 13 ವರ್ಷದವನಿದ್ದಾಗ, ಸಂಗೀತ ಕಲಿಯಲು ಕುಟುಂಬ ಸದಸ್ಯರೊಂದಿಗೆ ಜಗಳವಾಡಿ ಮೀರತ್ನಿಂದ ದೆಹಲಿಗೆ ಬಂದರು. ದೆಹಲಿಯಲ್ಲಿ ಸಂಗೀತ ಕಲಿಯುವುದರೊಂದಿಗೆ ಇಲ್ಲಿಗೆ ಬಂದ ವಿದೇಶಿಯರಿಗೂ ಸಂಗೀತ ಕಲಿಸಿ ಹಣ ಸಂಪಾದಿಸುತ್ತಿದ್ದರು.
4/ 8
ನಂತರ ಮುಂಬೈಗೆ ಬಂದ ಕೈಲಾಶ್ಗೆ ಬಹಳ ಕಷ್ಟಪಟ್ಟ ನಂತರ ಝಾಹೀರಾತಿನಲ್ಲಿ ಹಾಡಲು ಅವಕಾಶ ಸಿಕಿತ್ತು. ನಂತರ ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಅಂದಾಜ್ ಚಿತ್ರದಲ್ಲಿ ಹಾಡಲು ಅವಕಾಶ ಲಭಿಸಿತ್ತು.
5/ 8
ಅವರು ಹಾಡಿರುವ ರಬ್ಬಾ ಇಷ್ಕ್ ನಾ ಹೋವ್ ಎಷ್ಟು ಫೇಮಸ್ ಆಯ್ತು ಅಂದ್ರೆ, ನಂತರ ಅವರು ತಿರುಗಿ ನೋಡಿಲ್ಲ. ಸಾಲು ಸಾಲು ಹಾಡುಗಳನ್ನು ಹಾಡುವ ಮೂಲಕ ಅಭಿಮಾನಿಗಳ ಮನದಲ್ಲಿ ನೆಲೆಯೂರಿದ್ದಾರೆ.
6/ 8
ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಗಾಯನ ಕಾರ್ಯಕ್ರಮಗಳನ್ನು ನೀಡಿರುವ ಈ ಅದ್ಭುತ ಇಂಡಿಯನ್ ಐಡಾಲ್ ಸೇರಿದಂತೆ ಮುಂತಾದ ರಿಯಾಲಟಿ ಶೋಗಳ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.
7/ 8
ಕೈಲಾಶ್ ಖೆರ್ ಗಾಯನ ಕೇವಲ ಬಾಲಿವುಡ್ಗೆ ಸೀಮಿತವಾಗಿಲ್ಲ. ಸ್ಯಾಂಡಲ್ವುಡ್ನ ಅದೆಷ್ಟೋ ಅದ್ಭುತ ಹಾಡುಗಳಿಗೆ ಇವರು ಧನಿಯಾಗಿದ್ದಾರೆ. ಅವರ ಏರು ಧ್ವನಿ ಟ್ರೇಡ್ ಮಾರ್ಕ್ ಎನ್ನಬಹುದು.
8/ 8
ಕನ್ನಡಲದಲ್ಇ ಹಳೆ ಪಾತ್ರೆ ಹಳೆ ಕಬ್ಣ, ಅಣ್ಣ ನನ್ನ ಊರು, ಚೆಂದ ಚೆಂದ ನನ್ ಹೆಂಡ್ತಿ, ಮೋಸ ಮಾಡಲೆಂದೇ ನೀನು ಬಂದೆಯಾ ಸೇರಿದಂತೆ ಇನ್ನೂ ಹಲವಾರು ಹಾಡುಗಳನ್ನು ಹಾಡಿದ್ದು, ಸ್ಯಾಂಡಲ್ವುಡ್ನ ಅಭಿಮಾನಿಗಳು ಸಹ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.