HBD Jr NTR: ಬಲ'ಭೀಮ'ನಿಗೆ 39ರ ಸಂಭ್ರಮ! ಜ್ಯೂ. ಎನ್ಟಿಆರ್ಗೆ ಅಭಿಮಾನಿಗಳಿಂದ ಶುಭಾಶಯ
ಬಾಲ ಕಲಾವಿದರಿಂದ ಹಿಡಿದು ಟಾಲಿವುಡ್ನ ಟಾಪ್ ಮೋಸ್ಟ್ ಹೀರೋ ಯಂಗ್ ಟೈಗರ್ ಎನ್ಟಿಆರ್ ಗೆ ಇಂದು ಜನ್ಮದಿನದ ಸಂಭ್ರಮ. ಅಲ್ಲದೇ ಇಂದಿಗೆ ಸರಿಯಾಗಿ ಅವರು ಚಿತ್ರರಂಗ ಪ್ರವೇಶಿಸಿ 21 ವರ್ಷ ಕಳೆದಿದೆ. ಹೀಗಾಗಿ . ಜೂನಿಯರ್ ಎನ್ಟಿಆರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಚಿತ್ರರಂಗದ ಬಗ್ಗೆ ತಿಳಿದುಕೊಳ್ಳೋಣ.
ಜೂನಿಯರ್ NTR ಅವರ 21 ವರ್ಷಗಳ ವೃತ್ತಿಜೀವನದಲ್ಲಿ ಸುಮಾರು 30 ಚಿತ್ರಗಳತ್ತ ಸಮೀಪಿಸುತ್ತಿದ್ದಾರೆ. ರಾಜಮೌಳಿ ನಿರ್ದೇಶನದ RRR ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೊಮರಂ ಭೀಮ್ ಪಾತ್ರದಲ್ಲಿ ಮಿಂಚಿದರು. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಗಣ್ಯರು ಶುಭ ಹಾರೈಸುತ್ತಿದ್ದಾರೆ.
2/ 9
NTR ತಮ್ಮ ಎರಡು ದಶಕಗಳ ಸಿನಿ ವೃತ್ತಿಜೀವನದಲ್ಲಿ ವಿಭಿನ್ನ ಪಾತ್ರಗಳೊಂದಿಗೆ ಅಭಿಮಾನಿಗಳನ್ನು ರಂಜಿಸಿದರು. ಕೋಟ್ಯಾಧಿಪತಿ ಅಂತಹ ಕಿರುತೆರೆ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರನ್ನು ತಲುಪಿದ್ದಲ್ಲದೇ, ಒಂದು ಸೀಸನ್ನಲ್ಲಿ ಬಿಗ್ ಬಾಸ್ ತೆಲುಗು ಆವೃತ್ತಿಯಲ್ಲಿಯೂ ಹೋಸ್ಟ್ ಮಾಡಿದ್ದಾರೆ.
3/ 9
1997ರಲ್ಲಿ ಚಿಕ್ಕ ಮಕ್ಕಳೊಂದಿಗೆ ‘ರಾಮಾಯಣ’ ತೆರೆ ಕಂಡಿತು. ಈ ಸಿನಿಮಾದಲ್ಲಿ ಅವರು ಬಾಲ್ಯದಲ್ಲಿ ಪೌರಾಣಿಕ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ತಾರಕ್ ಮೊದಲ ನಂದಿ ಪ್ರಶಸ್ತಿಯನ್ನೂ ಪಡೆದರು. ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿದೆ.
4/ 9
2001 ರಲ್ಲಿ ಉಷಾಕಿರಣ್ ಮೂವೀಸ್ ತಮ್ಮ 'ನಿನ್ನು ಚೂಡಾಲಿ' ಚಿತ್ರದ ಮೂಲಕ ಎನ್ಟಿಆರ್ನನ್ನು ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದು ಇದೇ ದಿನದಂದು ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು, 21 ವರ್ಷಗಳು ಕಳೆದಿವೆ.
5/ 9
ಮೊದಲ ಬಾರಿಗೆ ಎನ್ಟಿಆರ್, ಕಾಜಲ್ ಮತ್ತು ಸಮಂತಾ ಒಟ್ಟಿಗೆ ನಟಿಸಿದ್ದಾರೆ. ಈ ಚಿತ್ರವು ಎನ್ಟಿಆರ್ಗೆ ಕುಟುಂಬಗಳಲ್ಲಿ ಒಳ್ಳೆಯ ಇಮೇಜ್ ತಂದುಕೊಟ್ಟಿತು. ಅಲ್ಲಿಯವರೆಗೂ ಹಳ್ಳಿ ಮಾಸ್ ಹೀರೋ ಆಗಿದ್ದ ಎನ್ ಟಿಆರ್... ‘ಬೃಂದಾವನ’ ಸಿನಿಮಾದ ಮೂಲಕ ಕ್ಲಾಸ್ ನಲ್ಲೂ ಫ್ಯಾನ್ ಫಾಲೋಯಿಂಗ್ ಹೆಚ್ಚಿಸಿಕೊಂಡರು.
6/ 9
ಇನ್ನು, RRR ಚಿತ್ರದ ಮೂಲಕ NTR ಮತ್ತು ರಾಜಮೌಳಿ 3ನೇ ಬಾರಿ ಜೊತೆಗೂಡಿದರು. ಈ ಚಿತ್ರವೂ ಸಹ NTR ವೃತ್ತಿ ಜೀವನದಲ್ಲಿ ದೊಡ್ಡ ತಿರುವನ್ನು ನೀಡಿದೆ ಎಂದೆನ್ನಬಹುದು.
7/ 9
ಆರ್ಆರ್ಆರ್ ನಂತರ ತ್ರಿವಿಕ್ರಮ್ ನಿರ್ದೇಶನದಲ್ಲಿ ಸಿನಿಮಾ ಮಾಡುವುದಾಗಿ ಎನ್ಟಿಆರ್ ಕೇಳಿಬಂದಿತ್ತು. ಆದರೆ ರಾಜಮೌಳಿ ನಂತರ ಎನ್ ಟಿಆರ್ ಕೊರಟಾಲ ಶಿವ ನಿರ್ದೇಶನದಲ್ಲಿ ಮುಂದಿನ ಸಿನಿಮಾ ಮಾಡಲಿದ್ದಾರೆ. ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.
8/ 9
ಕೊರಟಾಲ ಶಿವ ಚಿತ್ರದ ನಂತರ ಮುಂದಿನ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ. ಪಿರಿಯಾಡಿಕ್ ಬ್ಯಾಕ್ಡ್ರಾಪ್ನಲ್ಲಿ ಈ ಚಿತ್ರವನ್ನು ಮೈತ್ರೀ ಮೂವಿ ಮೇಕರ್ಸ್ ಬೃಹತ್ ಪ್ರಮಾಣದಲ್ಲಿ ಪ್ರದರ್ಶಿಸುತ್ತಿದೆ ಎಂದು ವರದಿಯಾಗಿದೆ. ನೀಲ್ ನಿರ್ದೇಶನ ಆಗಿರುವುದರಿಮದ ಅಭಿಮಾನಿಗಳಲ್ಲಿ ಸಹಜವಾಗಿ ನಿರೀಕ್ಷೆ ಹೆಚ್ಚಿದೆ.
9/ 9
ಸದ್ಯ ಆರ್ಆರ್ಆರ್ ಮತ್ತು 21 ವರ್ಷದ ವೃತ್ತಿ ಜೀವನದ ಸಂತಸದ ನಡುವೆ ಇಂದು Jr. NTR ಅವರಿಗೆ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ನಂದಮುರಿ ತಾರಕ್ ರಾಮ್ ಅವರಿಗೆ ಹುಟ್ಟುಹಬ್ಬದ ಶೂಭಾಷಯಗಳು.