HBD Anushree: ಕನ್ನಡದ ಮಾತಿನ ಮಲ್ಲಿಗೆ ಹುಟ್ಟು ಹಬ್ಬದ ಸಂಭ್ರಮ-ಅನುಶ್ರೀ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು

Happy Birthday Anushree: ಆ್ಯಂಕರ್ ಅನುಶ್ರೀ (Anchor Anushree) ಅಂದರೆ ಬಹುತೇಕರಿಗೆ ಗೊತ್ತು. ಸಿನಿಮಾ (Film), ನಟನೆಗಿಂತ (Acting) ಮಾತಿನ ಕೌಶಲ್ಯದ ಮೂಲಕ ತೆರೆ ಮೇಲೆ ರಂಜಿಸುವ ಕನ್ನಡದ ಫೇಮಸ್ ಆ್ಯಂಕರ್ ಆಗಿ ಅನುಶ್ರೀ ಗುರುತಿಸಿಕೊಂಡಿದ್ದಾರೆ. ಇಂದು ಅವರಿಗೆ 34ನೇ ಹುಟ್ಟು ಹಬ್ಬದ ಸಂಭ್ರಮ. ಅನುಶ್ರೀ ಬಗ್ಗೆ ಯಾರಿಗೂ ಗೊತ್ತಿರದ ವಿಚಾರಗಳು ಇಲ್ಲಿದೆ.

First published:

  • 19

    HBD Anushree: ಕನ್ನಡದ ಮಾತಿನ ಮಲ್ಲಿಗೆ ಹುಟ್ಟು ಹಬ್ಬದ ಸಂಭ್ರಮ-ಅನುಶ್ರೀ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು

    ಮೂಲತಃ ಮಂಗಳೂರು (Mangalore) ಮೂಲದವರಾಗಿರುವ ಅನುಶ್ರೀ ಅನೇಕ ವರ್ಷಗಳಿಂದ ಬೆಂಗಳೂರಿನಲ್ಲೇ (Bengaluru) ನೆಲೆಸಿದ್ದಾರೆ. ತಾಯಿ ಮತ್ತು ತಮ್ಮನೊಂದಿಗಿರುವ ಅನುಶ್ರೀ ಆ್ಯಂಕರ್ ಆಗಿ ಟಿವಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

    MORE
    GALLERIES

  • 29

    HBD Anushree: ಕನ್ನಡದ ಮಾತಿನ ಮಲ್ಲಿಗೆ ಹುಟ್ಟು ಹಬ್ಬದ ಸಂಭ್ರಮ-ಅನುಶ್ರೀ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು

    ಕರಾವಳಿ ಮೂಲದ ಅನುಶ್ರೀ ಸದ್ಯ ಕರ್ನಾಟಕದ ಪ್ರತಿಭಾವಂತ ಆ್ಯಂಕರ್​ ಆಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೆ ಸಾಕಷ್ಟು ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿದ್ದಾರೆ. ಮಾತ್ರವಲ್ಲದೆ ಖಾಸಗಿ ಕಾರ್ಯಕ್ರಮದ ಜೊತೆಗೆ ಜನಪ್ರಿಯ ಟಿವಿ ಶೋಗಳನ್ನು ಮಾಡುತ್ತಾ ಬಂದಿದ್ದಾರೆ.

    MORE
    GALLERIES

  • 39

    HBD Anushree: ಕನ್ನಡದ ಮಾತಿನ ಮಲ್ಲಿಗೆ ಹುಟ್ಟು ಹಬ್ಬದ ಸಂಭ್ರಮ-ಅನುಶ್ರೀ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು

    ಪ್ರಾರಂಭದಲ್ಲಿ ಪ್ರಾದೇಶಿಕ ಚಾನೆಲ್​ನಲ್ಲಿ ಆ್ಯಂಕರಿಂಗ್​ ಮಾಡುತ್ತಿದ್ದ ಅನುಶ್ರೀ, ತಮ್ಮ ಶ್ರಮ ಮತ್ತು ಪ್ರತಿಭೆಯ ಮೂಲಕ ಸ್ಟೇಟ್​ ಲೆವೆಲ್​ ಚಾನೆಲ್​ನಲ್ಲಿ ಆ್ಯಂಕರ್​ ಆಗಿ ಗುರುತಿಸಿಕೊಂಡಿದ್ದು, ಇಂದು ಹೆಚ್ಚು ಪ್ರಸಿದ್ಧರಾಗಿದ್ದಾರೆ.

    MORE
    GALLERIES

  • 49

    HBD Anushree: ಕನ್ನಡದ ಮಾತಿನ ಮಲ್ಲಿಗೆ ಹುಟ್ಟು ಹಬ್ಬದ ಸಂಭ್ರಮ-ಅನುಶ್ರೀ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು

    ವೇಗವಾಗಿ ಮತ್ತು ಪ್ರೇಕ್ಷಕರನ್ನು ನಗಿಸುತ್ತಾ ಆ್ಯಂಕರಿಂಗ್​ ಮಾಡುವ ಅನುಶ್ರೀ ಅವರು ಶೂಟಿಂಗ್​ ಸಮಯದಲ್ಲಿ ರೀಟೇಕ್​ ತೆಗೆದುಕೊಳ್ಳುವುದು ತೀರಾ ಕಡಿಮೆ. ಪಟ ಪಟ ಅಂತ ಮಾತನಾಡುತ್ತಾ ಎಲ್ಲರನ್ನು ನಗೆಗಡಲಲಲ್ಲಿ ತೇಳಿಸುವ ಕೌಶಲ್ಯ ಅವರಿಗೆ. ಅಷ್ಟು ಮಾತ್ರವಲ್ಲದೆ ಕೆಲವೊಂದು ಸನ್ನಿವೇಶಗಳನ್ನು ಲೀಲಾಜಾಲವಾಗಿ ನಿಭಾಯಿಸುತ್ತಾರೆ.

    MORE
    GALLERIES

  • 59

    HBD Anushree: ಕನ್ನಡದ ಮಾತಿನ ಮಲ್ಲಿಗೆ ಹುಟ್ಟು ಹಬ್ಬದ ಸಂಭ್ರಮ-ಅನುಶ್ರೀ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು

    ಕಷ್ಟಗಳನ್ನು ಹಿಮ್ಮೆಟ್ಟಿಸಿ ಮ್ಯಾನರಿಸಂ, ಕನ್ನಡದ ಮೇಲಿನ ಹಿಡಿತ ಎಲ್ಲವೂ ಅನುಶ್ರೀಯವರನ್ನು ಪರ್ಫೆಕ್ಟ್ ಆ್ಯಂಕರ್ ಆಗಿಸಿದೆ. ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆ್ಯಂಕರ್ ಎಂದು ಪ್ರಖ್ಯಾತರಾಗಿರುವ ಅನುಶ್ರೀ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ.

    MORE
    GALLERIES

  • 69

    HBD Anushree: ಕನ್ನಡದ ಮಾತಿನ ಮಲ್ಲಿಗೆ ಹುಟ್ಟು ಹಬ್ಬದ ಸಂಭ್ರಮ-ಅನುಶ್ರೀ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು

    ಮಂಗಳೂರು ಮೂಲದ ನಮ್ಮ ಟಿವಿ ಚಾನೆಲ್ ನಲ್ಲಿ ಅಂತ್ಯಾಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿ, ETV ಯ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’ಕಾರ್ಯಕ್ರಮ ಇವರಿಗೆ ಹೆಸರು ತಂದುಕೊಟ್ಟಿದೆ. ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ ನಂತರ ಹೆಚ್ಚು ಪ್ರಸಿದ್ಧರಾದ ಅನುಶ್ರೀ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿಗಳು ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳನ್ನು ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ.

    MORE
    GALLERIES

  • 79

    HBD Anushree: ಕನ್ನಡದ ಮಾತಿನ ಮಲ್ಲಿಗೆ ಹುಟ್ಟು ಹಬ್ಬದ ಸಂಭ್ರಮ-ಅನುಶ್ರೀ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು

    ಬೆಂಕಿಪೊಟ್ಣ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿದ ಇವರಿಗೆ ಈ ಚಿತ್ರಕ್ಕೆ NAK ಮೀಡಿಯಾದಿಂದ Best debut Actress ಅವಾರ್ಡ್ ಬಂದಿತ್ತು, ಮುರಳಿ ಮೀಟ್ಸ್ ಮೀರಾ ಚಿತ್ರಕ್ಕೆ ಸಹ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಪಡೆದು ಚಿತ್ರರಂಗದಲ್ಲಿ ಸಹ ಮಿಂಚಿದ್ದಾರೆ.

    MORE
    GALLERIES

  • 89

    HBD Anushree: ಕನ್ನಡದ ಮಾತಿನ ಮಲ್ಲಿಗೆ ಹುಟ್ಟು ಹಬ್ಬದ ಸಂಭ್ರಮ-ಅನುಶ್ರೀ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು

    ಕನ್ನಡದ ಟಾಪ್ ಆ್ಯಂಕರ್ ಎಂದು ಪ್ರಸಿದ್ಧವಾಗಿರುವ ಅನುಶ್ರೀ ವಿರುದ್ಧ ಕಳೆದ ವರ್ಷವಷ್ಟೇ ಡ್ರಗ್ಸ್ ಸೇವನೆಯ ಆರೋಪ ಕೇಳಿಬಂದಿತ್ತು. ಆದರೂ ಸಹ ಎಲ್ಲ ಆರೋಪಗಳನ್ನು ಮೆಟ್ಟಿ ನಿಂತು ಬೆಸ್ಟ್ ಎನಿಸಿಕೊಂಡಿದ್ದಾರೆ

    MORE
    GALLERIES

  • 99

    HBD Anushree: ಕನ್ನಡದ ಮಾತಿನ ಮಲ್ಲಿಗೆ ಹುಟ್ಟು ಹಬ್ಬದ ಸಂಭ್ರಮ-ಅನುಶ್ರೀ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು

    ಅನುಶ್ರೀ ಆ್ಯಂಕರ್ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿರುವ ಅನುಶ್ರೀ ಈ ಚಾನೆಲ್ ಮೂಲಕ ಸಿನಿತಾರೆಯರ ಸಂದರ್ಶನ ಮಾಡುತ್ತಾರೆ. ಇನ್ನು ಇತ್ತೀಚೆಗಷ್ಟೆ ಅವರ ನೆಚ್ಚಿನ ನಾಯಿ ಕಳೆದುಕೊಂಡು ಬೇಸರದಲ್ಲಿರುವ ಅನುಶ್ರೀ ಜೀವನದಲ್ಲಿ ಎಲ್ಲವೂ ಬದಲಾಗಿ, ಮತ್ತಷ್ಟು ಯಶಸ್ಸು ಸಿಗಲಿ ಎಂದು ನಾವು ಹಾರೈಸುವ.

    MORE
    GALLERIES