Happy Birthday Ambareesh: ಸ್ಯಾಂಡಲ್ವುಡ್ ಕರ್ಣನಿಗೆ 70ನೇ ವರ್ಷದ ಜನ್ಮದಿನ, ರೆಬೆಲ್ ಸ್ಟಾರ್ ಅಂಬರೀಶ್ ಕುರಿತ ಇಂಟ್ರಸ್ಟಿಂಗ್ ಸ್ಟೋರಿ
ಸ್ಯಾಂಡಲ್ ವುಡ್ ಕರ್ಣ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಇಂದು 70 ವರ್ಷ ಜನ್ಮದಿನ. ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪುಗಳು ಮಾತ್ರ ಕನ್ನಡಿಗರ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ.
ಮಂಡ್ಯ ಜಿಲ್ಲೆ ದೊಡ್ಡರಸನ ಕೆರೆ ಗ್ರಾಮದಲ್ಲಿ 1952 ಮೇ 29ರಂದು ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ ಅವರ ಮಗನಾಗಿ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಅವರು ಅಂಬರೀಶ್ ಜನಿಸಿದರು. ಇಂದು ಅವರಿಗೆ 70ನೇ ಜನ್ಮದಿನ. ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪುಗಳು ಮಾತ್ರ ಅಮರವಾಗಿ ಉಳಿದಿದೆ.
2/ 7
ಸ್ಯಾಂಡಲ್ವುಡ್ ನ ಕರ್ಣನಾಗಿ, ಅಭಿಮಾನಿಗಳ ಪಾಲಿನ ರೆಬಲ್ ಸ್ಟಾರ್ ಆಗಿ ಅಂಬರೀಶ್ ಜನಮಾನಸದಲ್ಲಿ ಉಳಿದಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೇ ರಾಜಕಾರಿಣಿಯಾಗೂ ಅನೇಕ ಜನಪರ ಕೆಲಸ ಮಾಡುವ ಮೂಲಕ ಜನಪ್ರಿಯರಾದವರು ಅಂಬಿ.
3/ 7
ಕನ್ನಡ ಚಲನಚಿತ್ರ ರಂಗಕ್ಕೆ 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಜಲೀಲನ ಪಾತ್ರ ಮೂಲಕ ಪರಿಚಿತರಾದರು. ಇದರಲ್ಲಿನ ಹೆ ಬುಲ್ ಬುಲ್ ಮಾತಾಡಕಿಲ್ವಾ ಡೈಲಾಗ್ ಇಂದಿಗೂ ಜನಪ್ರೀಯ ಡೈಲಾಗ್ ಆಗಿ ಉಳಿದಿದೆ.
4/ 7
ಇನ್ನು, ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀರ್ಶ ಸಹ ಚಲನಚಿತ್ರ ಮತ್ತು ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಅಲ್ಲದೇ ಇದೀಗ ಮಗ ಅಭಿಷೇಕ್ ಅಂಬರೀಶ್ ಸಹ ಸ್ಯಾಂಡಲ್ವುಡ್ ನಲ್ಲಿ ಮಿಂಚುತ್ತಿದ್ದು, ಅಂಬಿ ಅಭಿಮಾನಿಗಳು ಅಭಿಷೇಕ್ ಅವರಲ್ಲಿ ತಮ್ಮ ಮೆಚ್ಚಿನ ನಟನನ್ನು ಕಾಣುತ್ತಿದ್ದಾರೆ. ಹೀಗಾಘಿ ಅವರಿಗೆ ಜೂನಿಯರ್ ರೆಬಲ್ ಸ್ಟಾರ್ ಎನ್ನುತ್ತಾರೆ.
5/ 7
ನಟ ಅಂಬರೀಶ್ ಮತ್ತು ಡಾ. ವಿಷ್ಣುವರ್ಧನ್ ಅವರ ಸ್ನೇಹ ಚಿತ್ರರಂಗದಲ್ಲಿ ಒಂದು ಮಾದರಿಯಾಗಿತ್ತು. ಇವರಿಬ್ಬರ ನಡುವಿನ ಸ್ನೇಹ ಅದೆಷ್ಟೊ ಅಭಿಮಾನಿಗಳಿಗೆ ಮೆಚ್ಚುಗೆಯಾಗಿತ್ತು. ಇವರಿಬ್ಬರೂ ಇಂದು ನಮ್ಮನ್ನು ಅಗಲಿದ್ದರೂ ಇಂದು ಎಲ್ಲರ ಮನದಲ್ಲಿ ಇದ್ದಾರೆ.
6/ 7
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮತ್ತು ಜನತಾದಳ ಪಕ್ಷದಿಂದ ಸ್ಪರ್ದಿಸಿ ಲೋಕಸಭೆ ಸದಸ್ಯ ಮತ್ತು ಶಾಸಕರಾಗಿದ್ದರು, ಅವರು ಮೇ 2013 ರಿಂದ ಜೂನ್ 2016 ರ ವರೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕರ್ನಾಟಕ ಸರಕಾರದ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದರು.
7/ 7
1982ರಲ್ಲಿ ಅಂತ ಚಿತ್ರಕ್ಕಾಗಿ ಅತ್ಯುತ್ತಮ ನಟನಿಗಾಗಿರುವ ಕರ್ನಾಟಕ ರಾಜ್ಯ ವಿಶೇಷ ಪ್ರಶಸ್ತಿ, ಫಿಲ್ಮ್ ಫೇರ್ ಅತ್ಯುತ್ತಮ ನಟ, ಫಿಲ್ಮ್ ಫೇರ್ ಜೀವಮಾನ ಸಾಧನೆ, ಆಂಧ್ರ ಸರ್ಕಾರವು ನಂದಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿ ಲಭಿಸಿವೆ. ಅಂಬಿ ಸುಮಾರು 200ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.