ಭಾರತೀಯ ನಟಿ, ಭರತನಾಟ್ಯಂ ಡ್ಯಾನ್ಸರ್ ಹಾಗೂ ಪ್ರಾಣಿ ಕಲ್ಯಾಣ ಕಾರ್ಯಕರ್ತೆ ಅಮಲಾ ಅಕ್ಕಿನೇನಿ ಅವರಿಗೆ ಇಂದು 54ನೇ ಹುಟ್ಟುಹಬ್ಬದ ಸಂಭ್ರಮ. ತೆಲುಗು ಸ್ಟಾರ್ ನಾಗಾರ್ಜುನ ಅಕ್ಕಿನೇನಿ ಅವರನ್ನು ಮದುವೆಯಾಗಿರುವ ಈ ನಟಿ ಇಂದು ತಮ್ಮ ಪತಿಯೊಂದಿಗೆ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಅಮಲಾ ಅಕ್ಕಿನೇನಿ ಅವರು ನಟ ಅಖಿಲ್ ಅಕ್ಕಿನೇನಿಯ ತಾಯಿ ಹಾಗೂ ನಟ ನಾಗ ಚೈತನ್ಯಗೆ ಮಲತಾಯಿ.
ಅಮಲಾ ಮತ್ತು ನಾಗಾರ್ಜುನ 1992ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಮಲಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಾಗಾರ್ಜುನ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದು, ಕಡಲ ತೀರದ ಬಳಿ ಈ ಜೋಡಿ ಸಮಯ ಕಳೆದಿದ್ದಾರೆ.
2/ 10
ಈ ಫೋಟೋದಲ್ಲಿ ಅಮಲಾ-ನಾಗಾರ್ಜುನ್ಗೆ ವಯಸ್ಸಾಗಿರುವಂತೆ ಕಾಣಿಸುವುದೇ ಇಲ್ಲ. ಅವರ ನಗುವಿನ ಜೊತೆಗೆ ಖುಷಿಯೂ ಇದ್ದು, ಇನ್ನೂ ಯೌವ್ವನದಲ್ಲಿದ್ದಾರೆ ಎನ್ನುವಂತೆ ಕಾಣುತ್ತಿದೆ.
3/ 10
ಅಮಲಾ ಮತ್ತು ನಾಗಾರ್ಜುನ್ ದಂಪತಿಗೆ ಟ್ರಾವೆಲ್ ಮಡೋದು ಹಾಗೂ ಒಟ್ಟಾಗಿ ಸಮಯ ಕಳೆಯೋದು ಅಂದ್ರೆ ತುಂಬಾನೆ ಇಷ್ಟ. ಆಗಾಗ್ಗೆ ವಿದೇಶ ಪ್ರಯಾಣ ಮಾಡುತ್ತಿರುತ್ತಾರೆ. ಇದು ಸ್ಪೇನ್ಗೆ ಹೋಗಿದ್ದಾಗ ಸ್ವಿಮ್ಮಿಂಗ್ ಪೂಲ್ ಬಳಿ ಇಬ್ಬರೂ ಪೋಸ್ ಕೊಟ್ಟಿರುವ ದೃಶ್ಯ
4/ 10
ಸ್ವಿಡ್ಜರ್ಲ್ಯಾಂಡ್ನಲ್ಲಿ ಅಮಲಾ-ನಾಗಾರ್ಜುನ್. ತಮ್ಮ ಸಂಗಾತಿಯೊಂದಿಗೆ ಟ್ರಾವೆಲ್ ಮಾಡಿ ಅದ್ಭುತ ಅನಭವ ಪಡೆಯಿರಿ ಎಂದು ಹೇಳುವಂತಿದೆ.
5/ 10
ಟಾಲಿವುಡ್ ಜೋಡಿ ಸ್ವಿಡ್ಜರ್ಲ್ಯಾಂಡ್ಗೆ ಹೋಗಿದ್ದಾಗ ಕ್ಲಿಕ್ಕಿಸಿದ ಫೋಟೋ ಇದು.
6/ 10
ಅಮಲಾ-ನಾಗಾರ್ಜುನ್ ಅವರು ಮೊದಲಿನ ದಿನಗಳು ಹೀಗಿದ್ದವು. ಬೀಚ್ ಬಳಿ ಇಬ್ಬರೂ ಪ್ರೀತಿಯಿಂದ ಅಪ್ಪಿಕೊಂಡಿರುವ ದೃಶ್ಯ.
7/ 10
ಕ್ರೊಯಾಟಿಯಾ ಬಳಿಕ ಅಮಲಾ ಮತ್ತು ನಾಗಾರ್ಜುನ ದಂಪತಿ. ಇಬ್ಬರೂ ರೊಮ್ಯಾಂಟಿಕ್ ದಂಪತಿ.
8/ 10
ಯುರೋಪಿಯನ್ ದೇಶದಲ್ಲಿ ಅಮಲಾ-ನಾಗಾರ್ಜುನ್ ದಂಪತಿ, ಪೋರ್ಚುಗಲ್ ರಸ್ತೆಯಲ್ಲಿರುವ ಬೆಂಚಿನ ಮೇಲೆ ಅಮಲಾ ಕುಳಿತಿದ್ದರೆ, ನಾಗಾರ್ಜುಲ್ ಅವರ ಪಕ್ಕದಲ್ಲಿಯೇ ನಿಂತು ಪೋಸ್ ಕೊಟ್ಟಿದ್ದಾರೆ.
9/ 10
ಸ್ಲೊವೆನಿಯಾಗೆ ಭೇಟಿ ನೀಡಿದ್ದಾಗಿನ ಫೋಟೋ ಇದು. ಅಮಲಾ ಸದಾ ಹಸನ್ಮುಖಿಯಾಗಿರುವ ನಟಿ.
10/ 10
ನಾಗಾರ್ಜುನ್ ಹುಟ್ಟುಹಬ್ಬ ಆಚರಣೆಯ ಫೋಟೋ ಇದು. ಅಮಲಾ ತನ್ನ ಗಂಡನ ಬರ್ತ್ಡೇ ಆಚರಣೆ ಮಾಡುತ್ತಿರುವ ದೃಶ್ಯ