Abram Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಟಾರ್ ಕಿಡ್: ಈಗಾಗಲೇ ಅಪ್ಪ ಶಾರುಖ್ ಖಾನ್ ಜತೆ ತೆರೆ ಹಂಚಿಕೊಂಡಿರುವ ಅಬ್ರಾಂ..!
Happy Birthday Abram Khan: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ (Shahrukh Khan) ಹಾಗೂ ಗೌರಿ ಖಾನ್ (Gauri Khan) ಅವರ ಕೊನೆಯ ಹಾಗೂ ಮುದ್ದಿನ ಮಗ ಅಬ್ರಾಂ (Abram) ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅಬ್ರಾಂ ಅಪ್ಪನೊಂದಿಗೆ ಸಿನಿಮಾದಲ್ಲಿ ನಟಿಸಿರುವ ಸ್ಟಾರ್ ಕಿಡ್ ಅಬ್ರಾಂ ಇಂದು 8ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. (ಚಿತ್ರಗಳು ಕೃಪೆ: ಗೌರಿ ಖಾನ್ ಇನ್ಸ್ಟಾಗ್ರಾಂ ಖಾತೆ)
ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರ ಮುದ್ದಿನ ಮಗ ಅಬ್ರಾಂ ಇಂದು 8ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
2/ 25
2003 ರ ಮೇ 27ರಂದು ಅಬ್ರಾಂ ಅವರ ಜನನವಾಗಿದ್ದು, ಗೌರಿ ಹಾಗೂ ಶಾರುಖ್ ತಮ್ಮ ಮೂರನೇ ಮಗುವನ್ನು ಬಾಡಿಗೆ ತಾಯಿಯ ಮೂಲಕ ಪಡೆದಿದ್ದಾರೆ.
3/ 25
ಸ್ಟಾರ್ ಕಿಡ್ ಅಬ್ರಾಂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ.
4/ 25
ಮುದ್ದಿನ ತಮ್ಮ ಅಬ್ರಾಂ ಹುಟ್ಟುಹಬ್ಬಕ್ಕೆ ಸುಹಾನಾ ಖಾನ್ ವಿಶೇಷವಾಗಿ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ.
5/ 25
ಸ್ಟಾರ್ ಕಿಡ್ಸ್ ಸುಹಾನಾ ಹಾಗೂ ಅಬ್ರಾಂ ಕೆಮಿಸ್ಟ್ರಿ ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ.
6/ 25
ಸ್ಟಾರ್ ಕಿಡ್ ಅಬ್ರಾಂ ಈಗಾಗಲೇ ಸಿನಿಮಾದಲ್ಲಿ ನಟಿಸಿದ್ದಾರೆ.
7/ 25
ಶಾರುಖ್ ಖಾನ್ ನಟಿಸಿರುವ ಸಿನಿಮಾದ ಮೂಲಕವೇ ಅಬ್ರಾಂ ಬೆಳ್ಳಿ ತೆರೆಗೆ ಪರಿಚಯವಾಗಿದ್ದು.
8/ 25
ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಮಗ ಅಬ್ರಾಂ ಖಾನ್ ಅವರನ್ನು ಪರಿಚಯಿಸಲಾಯಿತು.
9/ 25
ಫರಾ ಖಾನ್ ಅವರ ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಸೋನು ಸೂದ್, ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಹಾಗೂ ಇತರರು ನಟಿಸಿದ್ದಾರೆ.
10/ 25
ಎರಡೂ ವರ್ಷವಿದ್ದಾಗ ಅಬ್ರಾಂನನ್ನು ಬೆಳ್ಳಿ ತೆರೆಗೆ ಪರಿಚಯಿಸಲಾಯಿತು.
11/ 25
ಒಂದು ದಿನ ಶಾರುಖ್ ಹಾಗೂ ಫರಾ ಇದ್ದಕ್ಕಿಂತೆ ಅಬ್ರಾಂನನ್ನು ಹ್ಯಾಪಿ ನ್ಯೂ ಇಯರ್ ಸೆಟ್ಗೆ ಕರೆತರುವಂತೆ ಗೌರಿ ಖಾನ್ ಅವರಿಗೆ ಹೇಳಿದ್ದಂತೆ. ಕಾರಣ ಕೇಳಿದಾಗ ಮಗನನ್ನು ಬೆಳ್ಳಿ ತೆರೆಗೆ ಪರಿಚಯಿಸುವ ವಿಷಯ ತಿಳಿಯಿತು ಎಂದು ಗೌರಿ ಖಾನ್ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.