ಇತ್ತೀಚಿಗೆ ಒಟಿಟಿ ಪ್ಲಾಟ್ ಫಾರ್ಮ್ ಪ್ರೇಕ್ಷಕರ ಫೇವರಿಟ್ ಆಗಿದೆ. ಸಿನಿಮಾಗಳಷ್ಟೇ ಅಲ್ಲ ಸೆಲೆಬ್ರಿಟಿಗಳ ಮದುವೆ ವಿಡಿಯೋ ಕೂಡ ಒಟಿಟಿಯಲ್ಲಿ ಪ್ರಸಾರವಾಗ್ತಿದೆ. ನಯನತಾರಾ-ವಿಘ್ನೇಶ್ ಶಿವನ್ ಮದುವೆ ಡಾಕ್ಯುಮೆಂಟ್ರಿ ಕೂಡ ನೆಟ್ ಫ್ಲೆಕ್ಸ್ನಲ್ಲಿ ಬಿಡುಗಡೆ ಆಗುತ್ತೆ ಎನ್ನಲಾಗ್ತಿದೆ.
ಈ ಮೊದಲು ಕತ್ರಿನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಲ್ ಮದುವೆ ವಿಡಿಯೋ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎನ್ನಲಾಗಿತ್ತು. ಆದ್ರೆ ಪ್ರಸಾರವಾಗಿಲ್ಲ ಇದೀಗ ಹನ್ಸಿಕಾ ಮ್ಯಾರೇಜ್ ಸ್ಟೋರಿ ಒಟಿಟಿಯಲ್ಲಿ ಬರಲು ರೆಡಿಯಾಗಿದೆ.
2/ 8
ಈಗ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಹಾಗೂ ಸೊಹೈಲ್ ಕತುರಿಯಾ ಮದುವೆ ವಿಡಿಯೋ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ನಲ್ಲಿ ರಿಲೀಸ್ ಆಗಲಿದೆ. ಈ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
3/ 8
ಕಳೆದ ವರ್ಷ ಡಿಸೆಂಬರ್ 4ರಂದು ಹನ್ಸಿಕಾ ಹಾಗೂ ಸೊಹೈಲ್ ಮದುವೆ ಆಗಿದ್ದರು. ಅದ್ದೂರಿಯಾಗಿ ಮದುವೆ ಶಾಸ್ತ್ರಗಳು ನಡೆದಿದ್ದವು. ಮದುವೆ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಆಗಲಿದೆ.
4/ 8
ನಟಿ ಹನ್ಸಿಕಾ ಕೂಡ ಮದುವೆ ವಿಡಿಯೋ ಹಾಟ್ ಸ್ಟಾರ್ನಲ್ಲಿ ಪ್ರಸಾರವಾಗುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
5/ 8
ಹನ್ಸಿಕಾ ಮದುವೆ ವಿಡಿಯೋಗೆ ಲವ್ ಶಾದಿ ಡ್ರಾಮಾ ಎಂದು ಹೆಸರು ಇಡಲಾಗಿದೆ. ಇದೀಗ ಫಸ್ಟ್ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ.
6/ 8
ಡಿಸ್ನಿ ಪ್ಲಸ್ ಹಾಟ್ ಸ್ಟಾರ್ನಲ್ಲಿ ಲವ್ ಶಾದಿ ಡ್ರಾಮಾ ರಿಲೀಸ್ ಆಗಿದ್ದು, ಕಾರ್ಯಕ್ರಮದ ಪ್ರಸಾರ ದಿನಾಂಕ ಇನ್ನಷ್ಟೇ ಹೊರಬೀಳಲಿದೆ.
7/ 8
31ನೇ ವಯಸ್ಸಿಗೆ ಹನ್ಸಿಕಾ ಮೋಟ್ವಾನಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಬಾಲನಟಿಯಾಗಿಯೇ ಹನ್ಸಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟರು.
8/ 8
ಹೃತಿಕ್ ರೋಷನ್ ನಟನೆಯ ‘ಕೋಯಿ ಮಿಲ್ ಗಯಾ’ ಸಿನಿಮಾದಲ್ಲಿ ಅವರು ನಟಿಸಿ ಗಮನ ಸೆಳೆದಿದ್ದರು. ತಮಿಳು, ತೆಲುಗು, ಮಲಯಾಳಂ, ಕನ್ನಡದಲ್ಲಿ ಅಭಿನಯಿಸಿ ಜನಪ್ರಿಯತೆ ಹೆಚ್ಚಿಸಿಕೊಂಡರು. ಒಟ್ಟು 50 ಸಿನಿಮಾಗಳಲ್ಲಿ ನಟಿ ಹನ್ಸಿಕಾ ಅಭಿನಯಿಸಿದ್ದಾರೆ.