Hansika Motwani: ಅಪ್ಪು ಹೀರೋಯಿನ್ ಮದ್ವೆ! ಕತ್ರೀನಾರಂತೆಯೇ ದೊಡ್ಡ ಕೋಟೆಯಲ್ಲಿ ಹನ್ಸಿಕಾ ವಿವಾಹ
Hansika Motwani: ಟಾಲಿವುಡ್ ನಟಿ ಹನ್ಸಿಕಾ ಮೊಟ್ವಾನಿ ಅವರು ಮದುವೆಯಾಗುತ್ತಿದ್ದಾರೆ. ಅಪ್ಪು ಹೀರೋಯಿನ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಕತ್ರೀನಾ ಕೈಫ್ ಥರಾನೇ ದೊಡ್ಡ ಕೋಟೆಯಲ್ಲಿ ಅದ್ಧೂರಿ ಮದುವೆ ನಡೆಯಲಿದೆ.
ಹನ್ಸಿಕಾ ಮೋಟ್ವಾನಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತುಂಬಾ ಕಡಿಮೆ ಮಾತನಾಡುತ್ತಾರೆ. ಅವರ ಪರ್ಸನಲ್ ಸುದ್ದಿ ಶೇರ್ ಮಾಡುವುದಿಲ್ಲ.
2/ 7
ಆದರೂ ಇತ್ತೀಚಿನ ಸುದ್ದಿ ನೋಡಿದರೆ, ನಟಿ ಈ ವರ್ಷ ಡಿಸೆಂಬರ್ನಲ್ಲಿ ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
3/ 7
ಇಂಡಿಯಾ ಟಿವಿ ಪ್ರಕಾರ, 450 ವರ್ಷಗಳಷ್ಟು ಹಳೆಯದಾದ ಕೋಟೆಯಲ್ಲಿ ಹನ್ಸಿಕಾ ಅದ್ದೂರಿ ರಾಯಲ್ ವೆಡ್ಡಿಂಗ್ ನಡೆಯಲಿದೆ ಎನ್ನಲಾಗಿದೆ.
4/ 7
ಸದ್ಯ ನಟಿಯ ಮದುವೆ ದಿನಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಮದುವೆಗೆ ಸ್ಥಳವನ್ನು ಸಿದ್ಧಪಡಿಸಲಾಗುತ್ತಿದ್ದು, ಅತಿಥಿಗಳಿಗಾಗಿ ಕೊಠಡಿಗಳನ್ನು ಸಿದ್ಧಪಡಿಸುವ ಕಾರ್ಯವೂ ನಡೆಯುತ್ತಿದೆ.
5/ 7
ಆದರೆ ಹನ್ಸಿಕಾ ಅವರ ಮದುವೆಯ ಡೇಟ್ ಮತ್ತು ಅವರ ಪತಿ ವಿವರಗಳು ಇನ್ನೂ ತಿಳಿದುಬಂದಿಲ್ಲ. ಹನ್ಸಿಕಾ ಅವರು ತಮ್ಮ 50 ನೇ ಚಿತ್ರ ಮಹಾ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ.
6/ 7
ಅವರು ಅಭಿಮಾನಿಗಳು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸಿ ಭಾವನಾತ್ಮಕ ಪೋಸ್ಟ್ ಹಾಕಿದ್ದರು. ತನ್ನ ಪ್ರೀತಿಯ ಅಭಿಮಾನಿಗಳಿಲ್ಲದೆ ತನ್ನ ಕುಟುಂಬ ಅಪೂರ್ಣವಾಗಿದೆ ಎಂದು ಅವರು ಹೇಳಿದರು. ಸಿನಿಮಾ ಎಂದರೆ ತನಗೆ ಸರ್ವಸ್ವ ಮತ್ತು ಅಭಿಮಾನಿಗಳ ಬೇಷರತ್ತಾದ ಪ್ರೀತಿ ಮತ್ತು ಬೆಂಬಲವಿಲ್ಲದೆ 50 ಚಿತ್ರಗಳನ್ನು ಪೂರ್ಣಗೊಳಿಸುವುದು ಸುಲಭವಲ್ಲ ಎಂದು ಅವರು ಹೇಳಿದರು.
7/ 7
ಹನ್ಸಿಕಾ ಅವರು ಮಹಾ, ಪಾಲುದಾರ, ರೌಡಿ ಬೇಬಿ, ಮೈ ನೇಮ್ ಈಸ್ ಶೃತಿ ಸಿನಿಮಾ ರಿಲೀಸ್ಗೆ ಕಾಯುತ್ತಿದ್ದಾರೆ. ನಟಿ ಕನ್ನಡದಲ್ಲಿ ಬಿಂದಾಸ್ ಸಿನಿಮಾದಲ್ಲಿ ಅಪ್ಪು ಹಿರೋಯಿನ್ ಆಗಿದ್ದರು.