Hansika Motwani: ಹನ್ಸಿಕಾ ಟ್ರೋಲ್! ಸೀರೆ ಹೊಸದು, ಮದುವೆ ಗಂಡು ಹಳಬ ಎಂದ ನೆಟ್ಟಿಗರು
ನಟಿ ಹನ್ಸಿಕಾ ಮೊಟ್ವಾನಿ ಅವರು ಪ್ರೀ ವೆಡ್ಡಿಂಗ್ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಫೋಟೋಗಳು ಈಗ ವೈರಲ್ ಆಗಿವೆ. ಆದರೆ ನೆಟ್ಟಿಗರು ಹನ್ಸಿಕಾರನ್ನು ಟ್ರೋಲ್ ಮಾಡುತ್ತಿದ್ದಾರೆ.
ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಹನ್ಸಿಕಾ ಮೊಟ್ವಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಡಿಸೆಂಬರ್ 4 ರಂದು ಗೆಳೆಯ ಮತ್ತು ಉದ್ಯಮಿ ಸೊಹೈಲ್ ಖತುರಿಯಾ ಅವರನ್ನು ವಿವಾಹವಾದರು. ನಟಿ ತಮ್ಮ ವಿವಾಹದ ಕೆಲವು ಫೋಟೋಸ್ ಹಂಚಿಕೊಂಡಿದ್ದಾರೆ.
2/ 8
ಮದುವೆಯಾದ 4 ದಿನಗಳ ನಂತರ ಹನ್ಸಿಕಾ ಮೊಟ್ವಾನಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರನ್ನು ಬ್ರೈಟ್ ಕೆಂಪು ಸೀರೆಯಲ್ಲಿ ಕಾಣಬಹುದು.
3/ 8
ಸಿಂಧಿ ಪದ್ಧತಿಯಂತೆ ಹನ್ಸಿಹಾ ಹಾಗೂ ಸೊಹೈಲ್ ಅವರ ವಿವಾಹ ಕಾರ್ಯಕ್ರಮ ನಡೆದಿದೆ. ಕುಟುಂಬಸ್ಥರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು.
4/ 8
ಇದು ನಟಿಯ ಮೊದಲ ಮದುವೆಯಾಗಿರಬಹುದು. ಆದರೆ ಇದು ಸೊಹೈಲ್ ಅವರ ಎರಡನೇ ಮದುವೆ. ಅವರ ಮೊದಲ ಹೆಂಡತಿಯ ಹೆಸರು ರಿಂಕೆ ಬಜಾಜ್. ಅವರು ಹನ್ಸಿಕಾ ಅವರನ್ನು ಎರಡನೇ ಬಾರಿಗೆ ಮದುವೆಯಾಗಿದ್ದಾರೆ.
5/ 8
ಸೊಹೈಲ್ ಕಥುರಿಯಾ ಅವರ ಮೊದಲ ಪತ್ನಿ ಹನ್ಸಿಕಾ ಅವರ ಉತ್ತಮ ಸ್ನೇಹಿತೆಯಾಗಿದ್ದರು. ಹನ್ಸಿಕಾ ಜೊತೆಗಿನ ಸಂಬಂಧ ಆರಂಭವಾಗುವ ಮೊದಲೇ ಸೊಹೈಲ್ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು.
6/ 8
ಆದರೆ ಬಳಕೆದಾರರು ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ನಿಮ್ಮ ಮದುವೆ ಸೀರೆ ಹೊಸದು, ಆದರೆ ಗಂಡ ಮಾತ್ರ ಹಳಬನೇಕೆ ಎಂದು ಕಾಲೆಳೆದಿದ್ದಾರೆ ನೆಟ್ಟಿಗರು.
7/ 8
ನಟಿ ವಿವಾಹ ಪೂರ್ವ ಕಾರ್ಯಕ್ರಮಗಳ ಫೋಟೋಗಳನ್ನು ಹಂಚಿಕೊಂಡಿದ್ದು ಫೋಟೋಗಳು ಈಗ ವೈರಲ್ ಆಗಿವೆ. ನಟಿ ಇನ್ನೂ ಮದುವೆ ಫೋಟೊಗಳು ಅಷ್ಟಾಗಿ ಪೋಸ್ಟ್ ಮಾಡಿಲ್ಲ.
8/ 8
ಗೆಳತಿಯ ಜೀವನವನ್ನೇ ಹಾಳು ಮಾಡಿ ಅವರ ಪತಿಯನ್ನೇ ಮದುವೆಯಾಗಿದ್ದಾರೆ ಎಂದು ಬಹಳಷ್ಟು ಜನರು ನಟಿಯನ್ನು ಟ್ರೋಲ್ ಮಾಡಿದ್ದರು. ಆದರೆ ಸೊಹೈಲ್ ಮೊದಲೇ ವಿಚ್ಛೇದನೆ ಕೊಟ್ಟಿದ್ದರು.