ಹನ್ಸಿಕಾ ಮೊಟ್ವಾನಿ ಮದುವೆ ಸಂಭ್ರಮದಲ್ಲಿದ್ದಾರೆ. ಸೌತ್ನ ಸ್ಟಾರ್ ನಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರ ಮದುವೆಯ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿವೆ.
ಬಿಂದಾಸ್ ನಟಿ ಹನ್ಸಿಕಾ ಮೊಟ್ವಾನಿ ಡಿಸೆಂಬರ್ 4ರಂದು ಬಾಯ್ ಫ್ರೆಂಡ್ ಸೋಹೇಲ್ ಕಥುರಿಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
2/ 7
ರಾಜಸ್ಥಾನದಲ್ಲಿ ಗುರುವಾರದಂದು ವಿವಾಹ ಪೂರ್ವ ಕಾರ್ಯಕ್ರಮಗಳು ನಡೆದಿವೆ. ಮೆಹೆಂದಿ ಸಮಾರಂಭದ ನಂತರ ಮರುದಿನ ಸೂಫಿ ರಾತ್ರಿಯೂ ನಡೆದಿದೆ.
3/ 7
ಶನಿವಾರದಂದು ನಟಿ ತನ್ನ ಸಂಗೀತ್ ಕಾರ್ಯಕ್ರಮವನ್ನು ಕುಟುಂಬ ಮತ್ತು ಸ್ನೇಹಿತರ ಜೊತೆ ಸಂಭ್ರಮದಿಂದ ಆಚರಿಸಿದ್ದಾರೆ. ವರನೊಂದಿಗೆ ಗ್ರ್ಯಾಂಡ್ ಡ್ಯಾನ್ಸ್ ಕೂಡಾ ಮಾಡಿದ್ದಾರೆ.
4/ 7
ಸಂಗೀತ ಸಮಾರಂಭದಿಂದ ಹಲವಾರು ಫೋಟೋಗಳು ಮತ್ತು ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ನಟಿ ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು.
5/ 7
ಹನ್ಸಿಕಾ ಅವರ ಕೆಲವು ರೊಮ್ಯಾಂಟಿಕ್ ಸಾಂಗ್ಗಳಿಗೆ ಹೆಜ್ಜೆ ಹಾಕಿದರು. ಭಾವಿ ಪತಿಯೊಂದಿಗೆ ತುಂಬಾ ಖುಷಿಯಾಗಿ ಕಂಡುಬರುತ್ತಿದ್ದರು ಹನ್ಸಿಕಾ.
6/ 7
ನಟಿ ಹನ್ಸಿಕಾ ಅವರು ಅರಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ವೈಟ್ ಔಟ್ಫಿಟ್ನಲ್ಲಿ ಕಂಡುಬಂದರು. ಈ ಫೋಟೋದಲ್ಲಿ ನಟಿಯ ಮೆಹಮದಿ ರಂಗನ್ನೂ ಕಾಣಬಹುದು.
7/ 7
ಹಂಸಿಕಾ ಮೋಟ್ವಾನಿ ಮತ್ತು ಸೊಹೇಲ್ ಖತುರಿಯಾ ಡಿಸೆಂಬರ್ 4 ರಂದು ಜೈಪುರ ಬಳಿಯ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ವಿವಾಹವಾಗಲಿದ್ದಾರೆ. ದಂಪತಿಗಳು ಸಾಂಪ್ರದಾಯಿಕ ಸಿಂಧಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.