Ganesh: ಅಭಿಮಾನಿಗಳಲ್ಲಿ ಪ್ರೀತಿಯಿಂದ ಮನವಿ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್..!
Ganesh Birthday: ಸಿನಿಮಾ ಚಿತ್ರೀಕರಣದಲ್ಲಿದ್ದರೂ ಅಭಿಮಾನಿಗಳಿಗಾಗಿ ಒಂದೊಂದು ಅಪ್ಡೇಟ್ ಕೊಡುವ ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ಹೊಸ ಪೋಸ್ಟ್ ಮಾಡಿದ್ದಾರೆ. ಪ್ರೀತಿಯಿಂದ ತಮ್ಮ ಗೋಲ್ಡನ್ ಅಭಿಮಾನಿಗಳಲ್ಲಿ ಒಂದು ಮನವಿ ಸಹ ಮಾಡಿದ್ದಾರೆ. (ಚಿತ್ರಗಳು ಕೃಪೆ: ಗಣೇಶ್ ಇನ್ಸ್ಟಾಗ್ರಾಂ ಖಾತೆ)
ಬಹಳ ಸಮಯದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗಳಿಗಾಗಿ ಒಂದು ಪುತ್ರ ಬರೆದಿದ್ದಾರೆ.
2/ 11
ಗಣೇಶ್ ಅವರು ಅಭಿಮಾನಿಗಳಲ್ಲಿ ಪ್ರೀತಿಯಿಂದ ಒಂದು ಪುಟ್ಟ ಮನವಿ ಮಾಡಿದ್ದಾರೆ.
3/ 11
ಅಷ್ಟಕ್ಕೂ ಗಣೇಶ್ ಅವರು ಮಾಡಿರುವ ಮನವಿ ಆದರೂ ಏನು ಅಂತೀರಾ..?
4/ 11
ಅದು ಗಣೇಶ್ ಅವರ ಹುಟ್ಟುಹಬ್ಬದ ಕುರಿತಾದ ಮನವಿಯಾಗಿದೆ.
5/ 11
ಅದು ಈ ಸಲ ತಮ್ಮ ಹುಟ್ಟುಹಬ್ಬವನ್ನು ಗಣೇಶ್ ಅವರು ಆಚರಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
6/ 11
ಸದ್ಯಕ್ಕೆ ಇರುವ ಪರಿಸ್ಥಿತಿಯಲ್ಲಿ ಸಂಭ್ರಮಿಸಲು ಮನಸ್ಸಾಗುತ್ತಿಲ್ಲ. ಜನರು ಸಂಕಷ್ಟ ಹಾಗೂ ನೋವಿನಲ್ಲಿದ್ದಾರೆ. ಈ ಕಾರಣದಿಂದಾಗಿ ಈ ಸಲ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
7/ 11
ಪ್ರತಿ ಸಲ ನನ್ನ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸಿ, ನನ್ನನ್ನು ಹರಸಿ, ಆರ್ಶೀವದಿಸುತ್ತಿದ್ದ ಅಭಿಮಾನಿಗಳು ಈ ಸಲ ಮನೆಯ ಬಹಳಿ ಬಂದು ಹುಟ್ಟುಹಬ್ಬ ಆಚರಿಸಬೇಡಿ ಎಂದು ಮನವಿ ಮಾಡಿದ್ದಾರೆ.
8/ 11
ಸಿನಿಮಾ ಚಿತ್ರೀಕರಣ ನಿಮಿತ್ತ ನಾನು ಊರಿನಿಂದ ಹೊರಗೆ ಇರುತ್ತೇನೆ. ಹೀಗಾಗಿ ಯಾರೂ ಮನೆಗಳ ಬಳಿ ಬಂದು ಕಾಯಬೇಡಿ ಎಂದೂ ಕೇಳಿಕೊಂಡಿದ್ದಾರೆ.
9/ 11
ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುತ್ತಿದ್ದ ಹಣವನ್ನು ಸಂಕಷ್ಟದಲ್ಲಿರುವವರಿಗೆ ಕೊಟ್ಟು ನೆರವಾಗಿ ಎಂದು ಹೇಳಿದ್ದಾರೆ.
10/ 11
ಗಣೇಶ್ ಅವರ ಹುಟ್ಟುಹಬ್ಬ ಜುಲೈ 2ರಂದು. ಹುಟ್ಟುಹಬ್ಬಕ್ಕೆ ಇನ್ನು 3 ದಿನಗಳು ಬಾಕಿ ಇದೆ.
11/ 11
ಗಣೇಶ್ ಅವರ ಸಿನಿಮಾ ವಿಷಯಕ್ಕೆ ಬರುವುದಾದರೆ, ಸಖತ್, ಗಾಳಿಪಟ 2 ಹಾಗೂ ತ್ರಿಬಲ್ ರೈಡಿಂಗ್ ಚಿತ್ರಗಳ ಕೆಲಸಗಳು ನಡೆಯುತ್ತಿವೆ.