Amulya: ನಟಿ ಅಮೂಲ್ಯ ಬಾಳಲ್ಲಿ 'ಚೆಲುವಿನ ಚಿತ್ತಾರ'! ತಾಯ್ತನದ ಸಂಭ್ರಮಕ್ಕೆ 2 ತಿಂಗಳು
'ತಾಯ್ತನದ ಸಂಭ್ರಮಕ್ಕೆ 2 ತಿಂಗಳು. ಇದು ನನಗೆ ಜೀವನದ ಬಹು ನಿರೀಕ್ಷತ ಜರ್ನಿ ಆಗಿರಲಿದೆ. ಅವಳಿ ಮಕ್ಕಳಿಗೆ ತಾಯಿ ಆಗುತ್ತಿದ್ದೇನೆ ಎಂದು ಗೊತ್ತಾದಾಗ ಸಂತೋಷ ತಡೆದುಕೊಳ್ಳಲು ಆಗಲಿಲ್ಲ' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ
ಸ್ಯಾಂಡಲ್ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ (Amulya) ಮತ್ತು ಜಗದೀಶ್ (Jagadish RC) ಮಾರ್ಚ್ 1ರಂದು ಕುಟುಂಬಕ್ಕೆ ಅವಳಿ ಗಂಡು ಮಕ್ಕಳನ್ನು ಬರ ಮಾಡಿಕೊಂಡರು.(ಕೃಪೆ- ಅಮೂಲ್ಯ ಇನ್ಸ್ಟಾಗ್ರಾಂ)
2/ 7
ಇದಾದ ಬಳಿಕ ಗೋಲ್ಡನ್ ಕ್ವೀನ್ ಅಮುಲ್ಯ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಇದೀಗ ಅಮೂಲ್ಯ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.(ಕೃಪೆ- ಅಮೂಲ್ಯ ಇನ್ಸ್ಟಾಗ್ರಾಂ)
3/ 7
ನಟಿ ಅಮೂಲ್ಯ ಎರಡು ತಿಂಗಳ ನಂತರ ಸ್ಪೆಷಲ್ ಫೋಟೋಶೂಟ್ (Photoshoot) ಹಂಚಿಕೊಂಡು ತಾಯ್ತನದ ಬಗ್ಗೆ ಬರೆದುಕೊಂಡಿದ್ದಾರೆ.(ಕೃಪೆ- ಅಮೂಲ್ಯ ಇನ್ಸ್ಟಾಗ್ರಾಂ)
4/ 7
'ತಾಯ್ತನದ ಸಂಭ್ರಮಕ್ಕೆ 2 ತಿಂಗಳು. ಇದು ನನಗೆ ಜೀವನದ ಬಹು ನಿರೀಕ್ಷತ ಜರ್ನಿ ಆಗಿರಲಿದೆ. ಅವಳಿ ಮಕ್ಕಳಿಗೆ ತಾಯಿ ಆಗುತ್ತಿದ್ದೇನೆ ಎಂದು ಗೊತ್ತಾದಾಗ ಸಂತೋಷ ತಡೆದುಕೊಳ್ಳಲು ಆಗಲಿಲ್ಲ' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ. (ಕೃಪೆ- ಅಮೂಲ್ಯ ಇನ್ಸ್ಟಾಗ್ರಾಂ)
5/ 7
'ಈ ಕ್ಷಣದ ಸಂತಸಕ್ಕಿಂತ ನನಗೆ ಬೇರೊಂದಿಲ್ಲ. ಗರ್ಭದಲ್ಲಿ ಪುಟ್ಟ ಕಂದಮ್ಮಗಳ ಕಾಲುಗಳು ಒದೆತೆಗಳು ಈಗ ನನ್ನ ಗರ್ಭಾವಸ್ಥೆಯ ಎಲ್ಲಾ ಸವಾಲುಗಳನ್ನು ಮರೆತುಬಿಡುವಂತೆ ಮಾಡಿದೆ' ಎಂದು ಗೋಲ್ಡನ್ ಕ್ವೀನ್ ಬರೆದುಕೊಂಡಿದ್ದಾರೆ.(ಕೃಪೆ- ಅಮೂಲ್ಯ ಇನ್ಸ್ಟಾಗ್ರಾಂ)
6/ 7
'ನನ್ನ ಬೇಬಿ ಬಂಪ್ನ (Baby Bump) ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಆದರೆ ನಿಜ ಹೇಳಬೇಕು ಅಂದ್ರೆ ಒಂದೇ ಸಮಯಕ್ಕೆ ಪ್ರೀತಿ ಮತ್ತು ಭಯ ಹೆಚ್ಚಾಗುತ್ತಿದೆ' ಎಂದಿದ್ದಾರೆ. (ಕೃಪೆ- ಅಮೂಲ್ಯ ಇನ್ಸ್ಟಾಗ್ರಾಂ)
7/ 7
'ಇಡೀ ಪ್ರಪಂಚದ ಎದುರು ತಾಯಿ ಧೈರ್ಯವಾಗಿರುತ್ತಾರೆ ಆದರೆ ಗುಲಾಬಿ ಮತ್ತು ಅದರ ಮುಳ್ಳುಗಳ ಜರ್ನಿ ಬಗ್ಗೆ ಆಕೆಗೆ ಮಾತ್ರ ಗೊತ್ತು' ಎಂದು ಅಮೂಲ್ಯ ಹೇಳಿದ್ದಾರೆ. (ಕೃಪೆ- ಅಮೂಲ್ಯ ಇನ್ಸ್ಟಾಗ್ರಾಂ)