MM Keeravani: ಕನ್ನಡಕ್ಕೂ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ ಗೋಲ್ಡನ್ ಗ್ಲೋಬ್ ವಿನ್ನರ್! ಎಂಎಂ ಕೀರವಾಣಿಯ ಮೂಸಿಕ್ ಮೋಡಿ
RRR ಸಿನಿಮಾ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ (MM Keeravani) ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದು ವಿಶ್ವಮಟ್ಟದಲ್ಲಿ ಮಿಂಚಿದ್ದಾರೆ. ಇವರು ಕೇವಲ ಟಾಲಿವುಡ್ ಸಿನಿಮಾಗಳಿ ಮಾತ್ರವಲ್ಲ ಕನ್ನಡ ಸಿನಿಮಾಗಳಿಗೂ ಸಹ ಮೂಸಿಕ್ ಕಂಪೋಸ್ ಮಾಡಿದ್ದಾರೆ.
RRR ಸಿನಿಮಾದ ನಾಟು ನಾಟು ಹಾಡಿಗೆ ಅತ್ಯುತ್ತಮ ಒರಿಜಿನಲ್ ಸಾಂಗ್’ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದೆ ಕನ್ನಡದ ಅನೇಕ ಸಿನಿಮಾಗಳಿಗೆ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ.
2/ 8
1990 ರಿಂದಲೂ ಸಿನಿಮಾ ರಂಗದಲ್ಲಿರುವ ಎಂಎಂ ಕೀರವಾಣಿ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಕನ್ನಡದಲ್ಲೂ ಸ್ಟಾರ ಹೀರೋಗಳ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
3/ 8
ಕನ್ನಡದಲ್ಲಿ ವಿಷ್ಣುವರ್ಧನ್ ಅಭಿನಯದ ಜಮೀನ್ದಾರು, ಅಪ್ಪಾಜಿ ಸಿನಿಮಾಗೂ ಅವರೇ ಸಂಗೀತ ನೀಡಿದ್ದಾರೆ. ಸಿನಿಮಾ ಹಾಡುಗಳು ಸಹ ಸೂಪರ್ ಹಿಟ್ ಆಗಿತ್ತು.
4/ 8
ವಿಜಯ್ ರಾಘವೇಂದ್ರ ಅಭಿನಯದ ಕಲ್ಲರಳಿ ಹೂವಾಗಿ ಚಿತ್ರಕ್ಕೂ ಅವರೇ ಸಂಗೀತ ನಿರ್ದೇಶಕರಾಗಿದ್ದಾರೆ.
5/ 8
ಭೈರವ, ಸ್ವಾತಿ, ಕರ್ನಾಟಕ ಸುಪುತ್ರ, ದೀಪಾವಳಿ ಸಿನಿಮಾಗಳಿಗೆ ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದು, ಕನ್ನಡಕ್ಕೂ ಅನೇಕ ಸೂಪರ್ ಹಿಟ್ ಸಾಂಗ್ ಗಳನ್ನು ನೀಡಿದ್ದಾರೆ.
6/ 8
ತೆಲುಗಿನಿಂದ ರಿಮೇಕ್ ಆದ ಮರ್ಯಾದೆ ರಾಮಣ್ಣ ಹಾಗೂ ಸುದೀಪ್ ಅಭಿನಯದ ವೀರ ಮದಕರಿ ಚಿತ್ರಕ್ಕೆ ಸಂಗೀತ ನೀಡಿದ್ದು ಕೂಡ ಎಂಎಂ ಕೀರವಾಣಿಯವರೇ ಆಗಿದ್ದಾರೆ.
7/ 8
ಈ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದಿಗ್ಗಜ ನಟ ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕರು ಶಹಭಾಷ್ ಎಂದಿದ್ದಾರೆ.
8/ 8
ರಾಜಮೌಳಿ ಮೊದಲ ಬಾರಿಗೆ ನಿರ್ದೇಶನ ಮಾಡಿದ ‘ಸ್ಟೂಡೆಂಟ್ ನಂ.1’ ಸಿನಿಮಾದಿಂದ ಹಿಡಿದು ಕಳೆದ ವರ್ಷ ತೆರೆಕಂಡ ‘ಆರ್ಆರ್ಆರ್’ ಚಿತ್ರದವರೆಗೆ ಎಲ್ಲ ಸಿನಿಮಾಗಳಿಗೂ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ.