ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋ ಮೂಲಕ ಎಲ್ಲರನ್ನೂ ನಗಿಸಿದ್ದ ಪ್ರಿಯಾಂಕಾ ಕಾಮತ್ ತಮ್ಮ ನೆಚ್ಚಿನ ಹುಡುಗನ ಜೊತೆ ಎಂಗೇಜ್ ಆಗಿದ್ದಾರೆ. ಶೀಘ್ರದಲ್ಲೇ ಮದುವೆ ಆಗಲಿದ್ದಾರೆ.
2/ 8
ಪ್ರಿಯಾಂಕಾ ಕಾಮತ್ ನೋಡಲು ಕ್ಯೂಟ್ ಆಗಿದ್ದು, ತಮ್ಮ ಅದ್ಭತ ನಟನೆಯ ಮೂಲಕ ಜನರನ್ನು ನಗಿಸಿದ್ದಾರೆ. ಉದ್ದ ಜಡೆಯ ಚೆಲುವೆ ಈ ಪ್ರಿಯಾಂಕಾ.
3/ 8
ಮಜಾಭಾರತದಲ್ಲಿ ಎಲ್ಲರನ್ನೂ ನಗಿಸಿದ್ದ ಪ್ರಿಯಾಂಕಾ, ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಮತ್ತೊಮ್ಮೆ ಮಿಂಚಿದ್ದರು. ಕಲಾವಿದ ಅಲ್ಲದ ಪ್ರಶಾಂತ್ ಅವರಿಗೆ ಹಾಸ್ಯ ಮಾಡುವುದನ್ನು ಕಲಿಸಿ ಕೊಟ್ಟಿದ್ದರು.
4/ 8
ಪ್ರಶಾಂತ್ ಅವರು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಅವರನ್ನು ಪ್ರೀತಿಸುವುದಾಗಿ ಹೇಳಿದ್ದರು. ಅಲ್ಲದೇ ಗೋಲ್ಡ್ ಚೈನ್ ಸಹ ಕೊಟ್ಟಿದ್ದರು. ಆದ್ರೆ ಪ್ರಿಯಾಂಕಾ ತಾವು ಬೇರೆಯವರನ್ನು ಪ್ರೀತಿಸುವುದಾಗಿ ಹೇಳಿದ್ದರು.
5/ 8
ಪಿಕೆ ಅವರು ತಾವು ಬಹುಕಾಲದಿಂದ ಪ್ರೀತಿಸುತ್ತಿದ್ದ ಅಮಿತ್ ನಾಯಕ್ ಜೊತೆ ಮನೆಯವರ ಎದುರು ಉಂಗುರ ಬದಲಾಯಿಸಿಕೊಂಡಿದ್ದಾರೆ. ಅಮಿತ್ ನಾಯಕ್ ಮೂಲತಃ ಕುಂದಾಪುರದವರು. ಮೆಕ್ಯಾನಿಕಲ್ ಎಂಜಿನಿಯರ್ ಓದಿದ್ದಾರೆ.
6/ 8
ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ. ಪ್ರಿಯಾಂಕಾ ಕಾಮತ್ ತುಂಬಾ ಖುಷಿಯಾಗಿದ್ದಾರೆ. ಇಷ್ಟು ದಿನದ ಪ್ರೀತಿ ಬಂಧಕ್ಕೆ, ಮದುವೆ ಬಂಧನವಾಗುತ್ತಿದೆ ಎಂದಿದ್ದಾರೆ.
7/ 8
ಅಮಿತ್ ನಾಯಕ್ ಪ್ರಿಯಾಂಕಾಗೆ ಎಲ್ಲಾ ವಿಚಾರದಲ್ಲೂ ತುಂಬಾ ಬೆಂಬಲವಾಗಿ ನಿಂತಿದ್ದಾರೆ. ಕಷ್ಟ ಕಾಲದಲ್ಲಿ ನನ್ನ ಹುಡುಗ ಸದಾ ಇದ್ದಾರೆ ಎಂದು ಪಿಕೆ ಹೇಳಿಕೊಂಡಿದ್ದರು.
8/ 8
ಇಬ್ಬರ ಜೋಡಿ ನೋಡಲು ಸುಂದರವಾಗಿದೆ. ನಿಮ್ಮ ಪ್ರೀತಿ ಹೀಗೆ ಮುಂದುವರೆಯಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ. ಆದಷ್ಟು ಬೇಗ ಮದುವೆ ದಿನಾಂಕ ತಿಳಿಸಿ ಎಂದಿದ್ದಾರೆ.