Shah Rukh Khan: ಸೋಫಾ ಬೆಲೆ ಕೇಳಿ ಶಾಕ್ ಆಗಿದ್ರು ಶಾರುಖ್! ಬರಿಗೈಯಲ್ಲಿ ಮರಳಿದ್ರು

Shah Rukh Khan: ಶಾರುಖ್ ಹೆಂಡತಿ ಗೌರಿ ಜೊತೆ ಆಸೆಯಿಂದ ಚಂದದ್ದೊಂದು ಸೋಫಾ ಖರೀದಿಸೋಣ ಎಂದು ಹೋಗಿದ್ರು. ಆದರೆ ಹಣವಿಲ್ಲದೆ ವಾಪಸ್ ಬಂದಿದ್ರು. ಆ ಘಟನೆ ಬಗ್ಗೆ ಕಿಂಗ್ ಖಾನ್ ಏನಂತಾರೆ ಗೊತ್ತಾ?

First published:

  • 18

    Shah Rukh Khan: ಸೋಫಾ ಬೆಲೆ ಕೇಳಿ ಶಾಕ್ ಆಗಿದ್ರು ಶಾರುಖ್! ಬರಿಗೈಯಲ್ಲಿ ಮರಳಿದ್ರು

    ಡಿಸೈನರ್ ಗೌರಿ ಖಾನ್ ಅವರು ಕಾಫಿ ಟೇಬಲ್ ಬುಕ್ ಮೈ ಲೈಫ್ ಇನ್ ಡಿಸೈನ್ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಮುನ್ನುಡಿ ಬರೆದಿದ್ದು ಶಾರುಖ್ ಖಾನ್. ಗೌರಿ ಖಾನ್ ಅವರು ಹೇಗೆ ಡಿಸೈನಿಂಗ್ ಆರಂಭಿಸಿದರು ಎನ್ನುವುದನ್ನು ನಟ ಇದರಲ್ಲಿ ವಿವರಿಸಿದ್ದಾರೆ.

    MORE
    GALLERIES

  • 28

    Shah Rukh Khan: ಸೋಫಾ ಬೆಲೆ ಕೇಳಿ ಶಾಕ್ ಆಗಿದ್ರು ಶಾರುಖ್! ಬರಿಗೈಯಲ್ಲಿ ಮರಳಿದ್ರು

    ಶಾರುಖ್ ಖಾನ್ ಮೊದಲ ಬಾರಿಗೆ ತಾವು ಸೋಫಾ ಕೊಳ್ಳಲು ಹೋದ ಅನುಭವವನ್ನು ಶೇರ್ ಮಾಡಿದ್ದಾರೆ. ಆಗ ಗೌರಿ ಖಾನ್ ಗರ್ಭಿಣಿಯಾಗಿದ್ದರು. ಮೊದಲ ಮಗು ಆರ್ಯನ್ ಖಾನ್ ನಿರೀಕ್ಷೆಯಲ್ಲಿದ್ದರು ಶಾರುಖ್ ಖಾನ್ ಹಾಗೂ ಗೌರಿ ಖಾನ್.

    MORE
    GALLERIES

  • 38

    Shah Rukh Khan: ಸೋಫಾ ಬೆಲೆ ಕೇಳಿ ಶಾಕ್ ಆಗಿದ್ರು ಶಾರುಖ್! ಬರಿಗೈಯಲ್ಲಿ ಮರಳಿದ್ರು

    ಪತ್ನಿಯನ್ನು ಕರೆದುಕೊಂಡು ಶಾರುಖ್ ಖಾನ್ ಅವರು ಸೋಫಾ ಖರೀದಿಸಲು ಹೋಗಿದ್ದರು. ನಾವು ಮೊದಲ ಮನೆ ಖರೀದಿಸಿದ್ದೆವು. ಹಾಗಾಗಿ ಮನೆಗೆ ಅಗತ್ಯ ವಸ್ತುಗಳನ್ನು ಜೋಡಿಸುತ್ತಿದ್ದೆವು. ನಾವು ನಮ್ಮಲ್ಲಿದ್ದ ಹಣದಿಂದ ಸ್ವಲ್ಪ ವಸ್ತುಗಳನ್ನು ಖರೀಸಿದಲು ನಿರ್ಧರಿಸಿದ್ದೆವು ಎಂದಿದ್ದಾರೆ.

    MORE
    GALLERIES

  • 48

    Shah Rukh Khan: ಸೋಫಾ ಬೆಲೆ ಕೇಳಿ ಶಾಕ್ ಆಗಿದ್ರು ಶಾರುಖ್! ಬರಿಗೈಯಲ್ಲಿ ಮರಳಿದ್ರು

    ನಾವಿದ್ದ ಪರಿಸ್ಥಿತಿಯಲ್ಲಿ ನಾವು ಡಿಸೈನರ್ ಸೋಫಾ ಖರೀದಿಸಲು ಸಾಧ್ಯವಿರಲಿಲ್ಲ. ಹಾಗಾಗಿ ಈ ಕೆಲಸವನ್ನು ಗೌರಿಯೇ ಮಾಡಿದರು. ನಾವು ಮೊದಲ ಬಾರಿಗೆ ಸೋಫಾ ಖರೀದಿಸಲು ಹೋಗಿದ್ದೆವು. ಆದರೆ ಅದು ತುಂಬಾ ದುಬಾರಿಯಾಗಿತ್ತು. ಅಲ್ಲಿಂದ ಗೌರಿಯ ಡಿಸೈನಿಂಗ್ ಲೈಫ್ ಶುರುವಾಯಿತು ಎಂದಿದ್ದಾರೆ.

    MORE
    GALLERIES

  • 58

    Shah Rukh Khan: ಸೋಫಾ ಬೆಲೆ ಕೇಳಿ ಶಾಕ್ ಆಗಿದ್ರು ಶಾರುಖ್! ಬರಿಗೈಯಲ್ಲಿ ಮರಳಿದ್ರು

    ನಾನು ಎಲ್ಲೋ ಹೊರಗಡೆ ಹೋಗಿದ್ದಾಗ ಲೆದರ್ ಖರೀದಿಸಿಕೊಂಡು ಬಂದೆ. ನಂತರ ಬಡಗಿ ಬಳಿ ಒಂದು ಸೋಫಾ ಮಾಡಿಸಿದೆವು. ಇದಕ್ಕಾಗಿ ಗೌರಿ ಖಾನ್ ನೋಟ್​ಬುಕ್​ನಲ್ಲಿ ಒಂದು ಡಿಸೈನ್ ರೆಡಿ ಮಾಡಿದ್ದರು ಎಂದಿದ್ದಾರೆ ಶಾರುಖ್ ಖಾನ್.

    MORE
    GALLERIES

  • 68

    Shah Rukh Khan: ಸೋಫಾ ಬೆಲೆ ಕೇಳಿ ಶಾಕ್ ಆಗಿದ್ರು ಶಾರುಖ್! ಬರಿಗೈಯಲ್ಲಿ ಮರಳಿದ್ರು

    ಹೊಸ ಮನೆ ಮನ್ನತ್ ಖರೀದಿಸಿದಾಗ ಕೈಯಲ್ಲಿದ್ದ ಹಣವೆಲ್ಲ ಖಾಲಿಯಾಗಿತ್ತು. ಆ ಸಂದರ್ಭ ಮನೆಯಲ್ಲಿ ಡಿಸೈನ್ ಮಾಡಲು ಹಣವಿರಲಿಲ್ಲ. ಹಾಗಾಗಿ ಮತ್ತೆ ಗೌರಿ ಖಾನ್ ಡಿಸೈನರ್ ಕೆಲಸವನ್ನು ಮಾಡಬೇಕಾಯಿತು. ನಿಧಾನವಾಗಿ ಮನೆಗೆ ಅಗತ್ಯವಸ್ತುಗಳನ್ನು ಸೇರಿಸಿ ಅದನ್ನು ಬಂಗಲೆಯಾಗಿ ಬದಲಾಯಿಸಿದೆವು ಎಂದಿದ್ದಾರೆ ನಟ.

    MORE
    GALLERIES

  • 78

    Shah Rukh Khan: ಸೋಫಾ ಬೆಲೆ ಕೇಳಿ ಶಾಕ್ ಆಗಿದ್ರು ಶಾರುಖ್! ಬರಿಗೈಯಲ್ಲಿ ಮರಳಿದ್ರು

    ಅಷ್ಟು ದೊಡ್ಡ ಮನೆಗೆ ತಾನೇ ಡಿಸೈನ್ ಮಾಡಿದ್ದಕ್ಕಾಗಿ ಗೌರಿ ಖಾನ್ ಅವರನ್ನು ಅವರ ಸ್ನೇಹಿತರು ಹಾಗೂ ಸಂಬಂಧಿಕರು ಹೊಗಳಿದ್ದರು. ನಂತರ ಗೌರಿ ಖಾನ್ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಲೇ ಇದ್ದಾರೆ. ಡಿಸೈನರ್​ಗೆ ಬೇಕಾದ ಅಗತ್ಯ ವಿಚಾರಗಳನ್ನು ನಿಧಾನವಾಗಿ ಕಲಿಯಲಾರಂಭಿಸಿದರು ಎಂದು ನಟ ಪತ್ನಿ ಬಗ್ಗೆ ಹೇಳಿದ್ದಾರೆ.

    MORE
    GALLERIES

  • 88

    Shah Rukh Khan: ಸೋಫಾ ಬೆಲೆ ಕೇಳಿ ಶಾಕ್ ಆಗಿದ್ರು ಶಾರುಖ್! ಬರಿಗೈಯಲ್ಲಿ ಮರಳಿದ್ರು

    ಗೌರಿ ಖಾನ್ ಈ ಹಿಂದೆ ಡ್ರೀಮ್ ಹೋಮ್ಸ್ ವಿತ್ ಗೌರಿ ಖಾನ್ ಎಂಬ ಶೋ ನಡೆಸುತ್ತಿದ್ದರು. ಅದರಲ್ಲಿ ಅವರು ಸೆಲೆಬ್ರಿಟಿಗಳ ಮನೆಯನ್ನು ರೀ ಡಿಸೈನ್ ಮಾಡಿಕೊಡುತ್ತಿದ್ದರು. ಇನ್ನು ಇವರ ಡಿಸೈನ್​ಗಳನ್ನು ನೆಟ್ಟಿಗರು ನೆಟ್​ಫ್ಲಿಕ್ಸ್​ನಲ್ಲಿ ಬಂದ ಫ್ಯಾಬುಲಸ್ ಲೈಫ್ ಆಫ್ ಬಾಲಿವುಡ್ ವೈವ್ಸ್​ನಲ್ಲಿ ನೋಡಿದ್ದಾರೆ.

    MORE
    GALLERIES