ಸಿದ್ದು ಮೂಲಿಮನೆ, ಪ್ರಿಯಾ ಆಚಾರ್ ಪ್ರೀತಿಗೆ 2 ವರ್ಷವಾಗಿದೆ. ಕಿರುತೆರೆಯ ಈ ಜೋಡಿ ಇತ್ತೀಚೆಗೆ ಗ್ರ್ಯಾಂಡ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಗಟ್ಟಿಮೇಳ ಧಾರಾವಾಹಿಯ ನಟಿ ಅದಿತಿ ಮತ್ತು ಪಾರು ಧಾರಾವಾಹಿಯ ಪ್ರೀತು ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲಿದ್ದಾರೆ. ಇಬ್ಬರು ಇತ್ತಿಚೇಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ನಟಿ ಪ್ರಿಯಾ ಅವರು ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿದ್ದು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ನಟಿ ಪ್ರಿಯಾ ಅವರು ಕೈ ತುಂಬ ಮೆಹಂದಿ ಹಚ್ಚಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ. ಗಾಢ ಹಸಿರು ಬಣ್ಣದ ಸ್ಲೀವ್ಲೆಸ್ ಡ್ರೆಸ್ ಧರಿಸಿದ್ದ ಪ್ರಿಯಾ ಅವರು ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದರು. ಸ್ಟೈಲಿಷ್ ನೆಕ್ಲೆಸ್ ಧರಿಸಿದ್ದರು. ಆಪ್ತರೊಂದಿಗೆ ಖುಷಿ ಖುಷಿಯಾಗಿ ಮೆಹಂದಿ ಶಾಸ್ತ್ರವನ್ನು ಎಂಜಾಯ್ ಮಾಡುವ ಫೋಟೋವನ್ನು ನಟಿ ಶೇರ್ ಮಾಡಿದ್ದಾರೆ. ಇದರಲ್ಲಿ ನಟಿಯ ಕೈಗೆ ಮೆಹಂದಿ ಹಚ್ಚುತ್ತಿರುವುದನ್ನು ಕಾಣಬಹುದು. ಫುಲ್ ಸ್ಮೈಲ್ನಲ್ಲಿ ಕಾಣಿಸಿಕೊಂಡ ನಟಿಯ ಜೊತೆ ಮತ್ತಷ್ಟು ಯುವತಿಯರು ಈ ಸಂಭ್ರಮದಲ್ಲಿ ಭಾಗಿಯಾದರು. ಪಿಂಕ್ ಹಾಗೂ ಹಳದಿ ಬಣ್ಣದ ಹಿನ್ನೆಲೆಯಲ್ಲಿ ವಧುವಾಗಿ ಮಿಂಚಿದ್ದಾರೆ ನಟಿ. ಧಮಾಕ ಸಿನಿಮಾದಲ್ಲಿ ಸಿದ್ದು ಮೂಲಿಮನೆ, ಪ್ರಿಯಾ ಆಚಾರ್ ಒಟ್ಟಿಗೆ ನಟಿಸಿದ್ದರು. ಆ ಚಿತ್ರದ ಮೂಲಕವೇ ಇಬ್ಬರಿಗೂ ಪ್ರೀತಿ ಆಗಿದೆ ಎಂದು ಹೇಳಲಾಗ್ತಿದೆ. ಆ ಪ್ರೀತಿಗೆ 2 ವರ್ಷದ ಸಂಭ್ರಮ.