ನವಾಜುದ್ದೀನ್ ಸಿದ್ದಿಕಿ: ಅತ್ಯಂತ ಪ್ರತಿಭಾವಂತ ನವಾಜುದ್ದೀನ್ ಸಿದ್ದಿಕಿ ಅವರು 'ಬದ್ಲಾಪುರ್', 'ಸೇಕ್ರೆಡ್ ಗೇಮ್ಸ್', 'ಗ್ಯಾಂಗ್ಸ್ ಆಫ್ ವಾಸೇಪುರ್' ಮುಂತಾದ ಸಿನಿಮಾ ಹಾಗೂ ಆಫ್ಬೀಟ್ ಪಾತ್ರಗಳನ್ನು ಮಾಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಮಸಾಲಾ ಸಿನಿಮಾ ‘ಕಿಕ್’ನಲ್ಲಿ ವಿಲನ್ ಪಾತ್ರದಲ್ಲಿ ನಟಿಸುವ ಮೂಲಕ ಹಲವು ನಟರನ್ನು ಮೀರಿಸಿದ್ದಾರೆ. ಅವರು ಹಿಂದಿ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು.