ಘಟನೆ ಬಗ್ಗೆ ವಿವರಿಸಿದ ನಟಿ, ನನ್ನನ್ನು ತಮಾಷೆ ಮಾಡ್ತಿದ್ದೀರಾ? ನಾನು ಮನೆಯೊಳಗೆ ಇದ್ದೆ. ಎಂದಿನಂತೆಯೇ ಮಧ್ಯಾಹ್ನದ ವೇಳೆ. ಲಿವಿಂಗ್ ರೂಮ್ನಲ್ಲಿ ಕುಳಿತಿದ್ದೆ. ಯಾರೋ ನನ್ನನ್ನು ನೋಡುವ ಭಾಸವಾಯಿತು. ನೋಡುವಾಗ ಎದುರಿನ ಕಟ್ಟದಲ್ಲಿ ಇಬ್ಬರು ನಿಂತು ನನ್ನತ್ತ ಕ್ಯಾಮೆರಾ ಫೋಕಸ್ ಮಾಡಿದ್ದರು. ಇದು ಸರಿಯಾ? ಇದು ಖಾಸಗಿತನದ ಮೇಲಿನ ಅತಿಕ್ರಮಣ. ನೀವು ದಾಟಬಾರದ ಒಂದು ಗೆರೆ ಇದೆ. ಆದರೆ ಈಗ ನೀವು ಆ ಎಲ್ಲ ಲೈನ್ ಕ್ರಾಸ್ ಮಾಡಿದ್ದೀರಿ ಎಂದಿದ್ದಾರೆ.