ಬಾಲಿವುಡ್ನಲ್ಲಿ ಹೀರೋಗಳು ಎಷ್ಟು ಹೆಸರು ಮಾಡಿದ್ದಾರೋ, ನಟಿಯರು ಅಷ್ಟೇ ಹೆಸರು ಮಾಡಿದ್ದಾರೆ. ಮಹಿಳೆಯರು ಪುರುಷರಿಗಿಂತ ಕಡಿಮೆಯಿಲ್ಲ ಎಂದು ಅವರು ಸಾಬೀತುಪಡಿಸಿದ್ದಾರೆ. ಸಿನಿಮಾರಂಗದಲ್ಲಿ ತಮ್ಮ ಟ್ರೇಡ್ ಮಾರ್ಕ ಸೃಷ್ಟಿ ಮಾಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಮದುವೆ ಎನ್ನುವ ಪದವನ್ನೇ ಮರೆತುಬಿಟ್ಟಿದ್ದಾರೆ.40 ರಿಂದ 45 ವರ್ಷ ವಯಸ್ಸಿನ ನಂತರವೂ ತಮ್ಮ ಬ್ಯಾಚುಲರ್ಹುಡ್ ಅನ್ನು ಆನಂದಿಸುತ್ತಿರುವ ಕೆಲವು ನಟಿಯರಿದ್ದಾರೆ. ಇಲ್ಲಿ ನಾವು ನಿಮಗೆ ಇನ್ನೂ ಮದುವೆಯಾಗದ ಬಾಲಿವುಡ್ ಬೆಡಗಿಯರ ಬಗ್ಗೆ ಹೇಳಲಿದ್ದೇವೆ.
ಸುಶ್ಮಿತಾ ಸೇನ್ ಎಲ್ಲ ರೀತಿಯಲ್ಲೂ ಬಾಲಿವುಡ್ನಲ್ಲಿ ಹವಾ ಸೃಷ್ಟಿಸಿದ್ದಾರೆ. ಕೆಲವರ ಜೊತೆ ಡೇಟಿಂಗ್ ಮಾಡ್ತಿದ್ದ ಸುಶ್ಮಿತಾ ಸೇನ್ ಇನ್ನೂ ಮದುವೆಯಾಗಿಲ್ಲ. 46 ನೇ ವಯಸ್ಸಿನಲ್ಲಿ, ಸುಶ್ಮಿತಾ ಸೇನ್ ತನ್ನ ಪ್ರೇಮ ಪ್ರಕರಣದ ಬಗ್ಗೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಬಾಯ್ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು.ನ ಟಿ ರೆನೀ ಮತ್ತು ಅಲಿಸಾ ಎಂಬ ಇಬ್ಬರು ಸುಂದರ ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದಾರೆ.
ತನಿಶಾ ಮುಖರ್ಜಿ ಅವರು ನಟನೆಗಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಟುವಟಿಕೆಯಿಂದಾಗಿ ಚರ್ಚೆಯಲ್ಲಿದ್ದಾರೆ. ತನಿಶಾ 2003 ರಲ್ಲಿ ಬಿಡುಗಡೆಯಾದ 'ಶ್...' ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಇದರ ನಂತರ ಅವರು 'ನೀಲ್ ಎನ್ ನಿಕ್ಕಿ', 'ಸರ್ಕಾರ್', 'ಟ್ಯಾಂಗೋ ಚಾರ್ಲಿ' ಮತ್ತು 'ಒನ್ ಟೂ ತ್ರೀ' ಚಿತ್ರಗಳಲ್ಲಿ ಕೆಲಸ ಮಾಡಿದರು. 43ರ ಹರೆಯದ ತನಿಶಾ ಮುಖರ್ಜಿ, ಬಹುಕಾಲದಿಂದ ಸಿನಿಮಾದಿಂದ ದೂರ ಉಳಿದಿದ್ದು, ಈಗಲೂ ಅವಿವಾಹಿತೆ.
23 ಮಾರ್ಚ್ 1987 ರಂದು ಜನಿಸಿದ ಬಾಲಿವುಡ್ ಕ್ವೀನ್ ಕಂಗನಾ ರನೌತ್ ಈಗಷ್ಟೇ 35 ದಾಟಿದ್ದಾರೆ. ಇಂಡಸ್ಟ್ರಿಯ ಕೂಲ್ ನಟಿಯರಲ್ಲಿ ಕಂಗನಾ ಕೂಡ ಒಬ್ಬರು. ಅವರು ಇನ್ನೂ ಅವಿವಾಹಿತೆ. ಆದರೆ ಕಂಗನಾ ಅವರ ಇತ್ತೀಚಿನ ಹೇಳಿಕೆಗಳನ್ನು ನೋಡಿದರೆ, ಅವರು ನಿಧಾನವಾಗಿ ಮದುವೆಯ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ ಆದರೆ ಯಾವಾಗ ಮತ್ತು ಯಾರೊಂದಿಗೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ನರ್ಗಿಸ್ ಫಕ್ರಿ ಅವರು 'ಮೈನ್ ತೇರಾ ಹೀರೋ' ಮತ್ತು 'ರಾಕ್ಸ್ಟಾರ್' ಚಿತ್ರಗಳಲ್ಲಿನ ಅತ್ಯುತ್ತಮ ನಟನೆಗೆ ಹೆಸರುವಾಸಿಯಾಗಿದ್ದಾರೆ. 20 ಅಕ್ಟೋಬರ್ 1979 ರಂದು ಜನಿಸಿದ ನರ್ಗೀಸ್ ಫಕ್ರಿ ಅವರು 41 ವರ್ಷ ದಾಟಿದರು, ಆದರೂ ಅವರು ಇನ್ನೂ 25 ವರ್ಷದ ಹುಡುಗಿಯಂತೆ ಕಾಣುತ್ತಾರೆ. ನಟ ಉದಯ್ ಚೋಪ್ರಾ ಅವರೊಂದಿಗೆ 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ನರ್ಗಿಸ್ , ಮದುವೆಯಾಗಿರಲಿಲ್ಲ. ಉದಯ್ ಜೊತೆಗಿನ ಬ್ರೇಕ್ ಅಪ್ ನಂತರ ನರ್ಗಿಸ್ ನ್ಯೂಯಾರ್ಕ್ ಗೆ ತೆರಳಿದ್ದರು.