ಹ್ಯೂಮನ್: ಮೆಡಿಕಲ್ ಮಾಫಿಯಾ ಹಾಗೂ ಆಸ್ಪತ್ರೆಯಲ್ಲಿನ ಡ್ರಗ್ ಪ್ರಯೋಗಗ ಹಾಗೂ ಆಸ್ಪತ್ರೆಯಲ್ಲಿ ನಡೆಯುವ ರಾಜಕೀಯವನ್ನು ಸನ್ನಿವೇಶ ಸಿ ತಯಾರಾಗಿದ್ದ ಸಿನಿಮಾ ನೈಜ ಘಟನೆಯಾಧಾರಿತ ಸಿನಿಮಾ ಆಗಿದೆ. ಇಬ್ಬರು ಮಹಿಳೆಯರು ತಮ್ಮ ಕರ್ತವ್ಯ ಹಾಗೂ ನೈತಿಕತೆ ಯೊಂದಿಗೆ ಹೋರಾಡುವ ಕಥೆಯನ್ನು ಒಳಗೊಂಡಿದೆ.. ಜನವರಿ 14ರಂದು ಈಗಾಗಲೇ ಓಟಿಟಿಯಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಸಾಕಷ್ಟು ಜನರ ಗಮನ ಸೆಳೆದಿದೆ.
ಪಂಚಾಯತ್ ಸೀಸನ್ 2: ಪಂಚಾಯತ್ ಸೀಸನ್ 1 ರ ಮುಂದುವರಿದ ಭಾಗವೇ ಪಂಚಾಯತ್ ಸೀಸನ್ 2.. ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ಪಂಚಾಯತ್ ಸೀಸನ್ 1 ನಲ್ಲಿ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಕನಸು ಕಂಡಿದ್ದ ಹುಡುಗನ ಅನಿವಾರ್ಯ ಕಾರಣಗಳಿಂದ ಪಂಚಾಯತ್ ಕಾರ್ಯದರ್ಶಿಯಾಗಿ ಉಳಿದುಕೊಳ್ಳುವ ಕಥಾವಸ್ತುವಿನ ಅಂದರಾ ಬಂದಿದೆ.. ಏಪ್ರಿಲ್ನಲ್ಲಿ ಮತ್ತೆ ಅಮೆಜಾನ್ ಪ್ರೈಮ್ ನಲ್ಲಿ ಮುಂದುವರೆದ ಭಾಗ ಬಿಡುಗಡೆ ಆಗಲಿದೆ.
ಶಭಾಷ್ ಮಿಥು: ಶಭಾಷ್ ಮಿಥು ಈ ಚಿತ್ರವು ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ತಾಪ್ಸಿ ಪನ್ನು ಮುಖ್ಯ ಭೂಮಿಕೆಯಲ್ಲಿದ್ದಾರೆ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಇದನ್ನು ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದಾರೆ. ಈ ಸಿನಿಮಾ ಭಾರತದ ಮಹಿಳಾ ಕ್ರಿಕೆಟಿಗರ ಜೀವನಾಧಾರಿತ ಮೊದಲ ಬಯೋಪಿಕ್ ಸಿನಿಮಾ ಆಗಿದೆ..