ಮಾಜಿ ದಂಪತಿಗಳಾದ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ತೆರೆ ಮೇಲೆ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. 2011ರಿಂದ 2016ರವರೆಗೆ ಮಾತ್ರ ದಂಪತಿಗಳಾಗಿದ್ದರು. ಬಳಿಕ ವಿಚ್ಛೇದನ ಪಡೆದರು. ಇವರು ಅಜಾಬ್ ಪ್ರೇಮ್ ಕಿ ಗಜಾಬ್ ಕಹಾನಿ, ಜಗ್ಗ ಜಾಸೂಸ್ ಮತ್ತು ರಾಜನೀತಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಗ್ಗಾ ಜಾಸೂಸ್ ಸಿನಿಮಾ ಬಳಿಕ ಬ್ರೇಕ್ಅಪ್ ಮಾಡಿಕೊಂಡರು. ತೆರೆ ಮೇಲೆ ಮತ್ತು ತೆರ ಹಿಂದೆ ಬೆಸ್ಟ್ ಜೋಡಿ ಎಂದೇ ಕತ್ರಿನಾ-ರಣಬೀರ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದರು.
ಇನ್ನು, ಬಾಲಿವುಡ್ನಲ್ಲಿ ಕತ್ರಿನಾ ಕೈಫ್ ಅವರನ್ನು ಲಾಂಚ್ ಮಾಡಿದ್ದು ನಟ ಸಲ್ಮಾನ್ ಖಾನ್. ಇಬ್ಬರೂ ಸಹ ಒಟ್ಟಿಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟೈಗರ್ ಜಿಂದಾ ಹೈ, ಏಕ್ ಥಾ ಟೈಗರ್, ಪಾರ್ಟ್ನರ್, ಮೈನೆ ಪ್ಯಾರ್ ಕ್ಯುನ್ ಕಿಯಾ ಮತ್ತು ಯುವರಾಜ್ ಸಿನಿಮಾಗಳಲ್ಲಿ ಕತ್ರಿನಾ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕತ್ರಿನಾ ಶೀಘ್ರದಲ್ಲೇ ಸಲ್ಮಾನ್ ಖಾನ್ ಜೊತೆ ಟೈಗರ್ ಜಿಂದಾ ಹೈ 3 ಸಿನಿಮಾ ಮಾಡಲಿದ್ದಾರೆ.