Bollywood Size Zero: ಶಿಲ್ಪಿ ಕೆತ್ತಿದ ಶಿಲ್ಪದಂತಿರುವ ಈ ತಾರೆಯರು ಮೊದಲು ಹೇಗಿದ್ದರು ಗೊತ್ತೆ..?
Bollywood Size Zero: ದೇಹದ ತೂಕದ ಸಮಸ್ಯೆ ಕೇವಲ ಸಾಮಾನ್ಯ ಜನರದ್ದೇನಲ್ಲ. ಇದು ಸಿನಿಮಾ ತಾರೆಯರನ್ನೂ ಬಿಟ್ಟಿಲ್ಲ. ಅವರೂ ಸಿನಿಮಾಗಳಿಗೆ ಬರುವ ಮುನ್ನ ದಪ್ಪಗಿದ್ದವರೆ. ಹೌದು, ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಮೊದಲು ದೇಹದ ತೂಕ ಇಳಿಸಿಕೊಂಡ ತಾರೆಯರ ವಿವರ ಇಲ್ಲಿದೆ.
ಬಾಲಿವುಡ್ನ ಬೇಡಿಕೆಯ ನಟಿ ಸಾರಾ ಅಲಿ ಖಾನ್ ಸದ್ಯ ಹುಡುಗರ ಅಚ್ಚುಮೆಚ್ಚಿನ ನಟಿ. ಈಕೆ ಸಿನಿಮಾಗಳಿಗೆ ಬರುವ ಮೊದಲು 90 ಕೆ.ಜಿ. ತೂಕ ಇದ್ದರು. ನಂತರ ಸಿನಿಮಾಗಾಗಿ ಸಪೂರವಾಗಿದ್ದಾರೆ.
3/ 12
ನೋಡೋಕೆ ತೆಳ್ಳಗೆ ಬೆಳ್ಳಗೆ ಕಡೆದಿಟ್ಟ ಶಿಲ್ಪದಂತಿರುವ ಅಲಿಯಾ ಭಟ್ ಸಹ ಹಿಂದೆ ದಪ್ಪಗಿದ್ದರು. ಅವರ ಮೊದಲ ಸಿನಿಮಾ 'ಸ್ಟುಡೆಂಟ್ ಆಫ್ ದಿ ಇಯರ್' ಸಿನಿಮಾಗಾಗಿ 16 ಕೆ.ಜಿ. ತೂಕ ಇಳಿಸಿಕೊಂಡರು.
4/ 12
ಕರೀನಾ ಕಪೂರ್ ಸಿನಿಮಾಗೆ ಬರುವ ಮೊದಲೂ ದಪ್ಪಗಿದ್ದರು. ನಂತರ ಬಿ-ಟೌನ್ನಲ್ಲಿ ಸೈಜ್ ಝೋರೊ ಟ್ರೆಂಡ್ ಹುಟ್ಟುಹಾಕಿದರು. ಇದಾದ ಮೇಲೆ ವಿವಾಹವಾಗಿ ಗರ್ಭವತಿಯಾದ ನಂತರ ಮತ್ತೆ ದೇಹದ ತೂಕ ಹೆಚ್ಚಿತ್ತು. ಅದನ್ನೂ ಅವರು ನಿಧಾನವಾಗಿ ಇಳಿಸಿಕೊಂಡು ಮೊದಲಿನಂತೆ ಸಿಕ್ಕಾಪಟ್ಟೆ ಫಿಟ್ ಆಗಿದ್ದಾರೆ.
5/ 12
ವಿದೇಶದಲ್ಲಿ ವ್ಯಾಸಂಗ ಮಾಡಿ ಭಾರತಕ್ಕೆ ಬಂದಯ ಯಶ್ ರಾಜ್ ಫಿಲ್ಮ್ಸ್ ಕಚೇರಿಯಲ್ಲಿ ಕೆಲಸ ಮಾಡಲಾರಂಭಿಸಿದರು. ಆಗ ಅವರ ತೂಕ 90 ಕೆ.ಜಿ. ದಾಟಿತ್ತು. ಸಿನಿಮಾಗಾಗಿ ಅದನ್ನು ಇಳಿಸಿಕೊಂಡರಾದರೂ, ಅದರು ಅವರಿಗೆ ಸರಿಕಾಣಲಿಲ್ಲ. ನಂತರ ಪರಿಣಿತಿ ದೇಹವನ್ನು ದಂಡಿಸಿ ಸೈಜ್ ಝೋರೊ ಆದರು.
6/ 12
ಶತ್ರುಗನ್ ಸಿನ್ಹಾ ಅವರ ಮುದ್ದಿನ ಮಗಳು ಸೋನಾಕ್ಷಿ ಸಿನಿಮಾಗಾಗಿ 30 ಕೆ.ಜಿ. ತೂಕ ಇಳಿಸಿಕೊಂಡರು. ನಂತರವೇ ಅವರು 'ದಬಂಗ್'ನಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದು.
7/ 12
ಬಾಲಿವುಡ್ನ ಸ್ಟೈಲ್ ಐಕಾನ್ ಎಂದೇ ಕರೆಸಿಕೊಳ್ಳುವ ಟ್ರೆಂಡಿ ನಟಿ ಸೋನಮ್ ಸಹ ಸಿನಿಮಾಗಾಗಿ ದೇಹದ ತೂಕ ಇಳಿಸಿಕೊಂಡವರೆ.
8/ 12
'ಧಮ್ ಲಗಾಕೆ ಹೈಯ್ಯಾ' ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದ ನಟಿ ಭೂಮಿ ಪಡ್ನೆಕರ್ ನಂತರ ಮತ್ತೊಂದು ಸಿನಿಮಾಗಾಗಿ 27 ಕೆ.ಜಿ. ತೂಕ ಇಳಿಸಿಕೊಂಡರು.
9/ 12
ಸಲ್ಮಾನ್ ಖಾನ್ ಜತೆ ಅಭಿನಯಿಸಿದ್ದ ನಟಿ ಜರೀನ್ ಖಾನ್ ಜೂನಿಯರ್ ಐಶ್ವರ್ಯಾ ಎಂದೇ ಖ್ಯಾತರಾದವರು. ಇವರು ಸಿನಿಮಾಗೆ ಬರಲೆಂದು 58 ಕೆ.ಜಿ. ತೂಕ ಇಳಿಸಿಕೊಂಡಿದ್ದರಂತೆ.
10/ 12
ಬೋನಿ ಕಪೂರ್ ಅವರ ಮಗ ಅರ್ಜುನ್ ಕಪೂರ್ ಸಿನಿಮಾಗಾಗಿ ಸತತ ಮೂರು ವರ್ಷಗಳ ಕಾಲ ಕಷ್ಟಪಟ್ಟು 50 ಕೆ.ಜಿ. ತೂಕ ಇಳಿಸಿಕೊಂಡಿದ್ದರಂತೆ. ಇವರಿಗೆ ಈ ಕೆಲಸದಲ್ಲಿ ಸಹಾಯ ಹಾಗೂ ಮಾರ್ಗದರ್ಶನ ನೀಡಿದ್ದು ಬ್ಯಾಡ್ಬಾಯ್ ಸಲ್ಮಾನ್ ಖಾನ್ ಅಂತೆ.
11/ 12
ನಟ ಜಾಕಿ ಭಗ್ನಾನಿ ಸಹ ಸಿನಿಮಾಗಾಗಿ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು.
12/ 12
ಗಾಯಕ ಅದ್ನಾನ್ ಸಮಿ ಅವರ 'ಲಿಫ್ಟ್ ಕರಾದೆ...' ಆಲ್ಬಂ ನೋಡಿದರೆ ಅವರು ಎಷ್ಟು ದಪ್ಪಗಿದ್ದರು ಎಂದು ತಿಳಿಯುತ್ತದೆ. 206 ಕೆ.ಜಿ. ಇದ್ದವರು ಅವರು ನಂತರ ಚಿಕಿತ್ಸೆ ಪಡೆದು 130 ಕೆ.ಜಿ. ತೂಕವನ್ನು ಇಳಿಸಿಕೊಂಡರು.