Annamalai IPS: ಸಿನಿಮಾದತ್ತ ಮುಖ ಮಾಡಿದ ಕರ್ನಾಟಕದ ಸಿಂಗಂ, ಒಂದೇ ಒಂದು ರೂಪಾಯಿ ಸಂಭಾವನೆ ಪಡೆದ ಅಣ್ಣಾಮಲೈ
Annamalai In film: ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಯಾರಿಗೂ ತಿಳಿಯದಂತೆ ಚಿತ್ರವೊಂದರಲ್ಲಿ ನಟಿಸಿದ್ದಾರಂತೆ.
ಕರ್ನಾಟಕದಲ್ಲಿ ಖಡಕ್ ಆಫಿಸರ್ ಆಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ ಅವರು, ಇಲ್ಲಿ ತಮ್ಮ ಕಾರ್ಯವೈಖರಿ ಮೂಲಕ ಮನೆಮಾತಾಗಿದ್ದರು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಅಭಿಮಾನಿಗಳನ್ನು ಹೊಂದಿದ್ದರು.
2/ 8
ಸ್ವಯಂ ನಿವೃತ್ತಿ ಪಡೆದು ರಾಜಕೀಯದತ್ತ ಮುಖ ಮಾಡಿದ್ದ ಅಣ್ಣಾಮಲೈ ಅವರು , ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಫುಲ್ ಬ್ಯುಸಿ ಇದ್ದಾರೆ. ಆದರೂ ಕೂಡ ಒಂದು ಚಿತ್ರಕ್ಕೆ ಬಣ್ಣ ಹೆಚ್ಚಿದ್ದು, ಯಾರಿಗೂ ತಿಳಿಯದಂತೆ ಶೂಟಿಂಗ್ ಸಹ ಮುಗಿಸಿದ್ದಾರೆ.
3/ 8
ಅರಬ್ಬಿ ಎನ್ನುವ ಚಿತ್ರದಲ್ಲಿ ಮಾಜಿ ಅಧಿಕಾರಿ ಕಾಣಿಸಿಕೊಳ್ಳುತ್ತಿದ್ದು, ಇದರಲ್ಲಿ ಸ್ವಿಮ್ಮಿಂಗ್ ಕೋಚ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇದು ನೈಜ ಜೀವನ ಆಧಾರಿತ ಕತೆಯಾಗಿದೆ ಎನ್ನಲಾಗುತ್ತಿದೆ.
4/ 8
ಎರಡು ಕೈಗಳಿಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಜು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಕೆ.ಎಸ್. ವಿಶ್ವಾಸ್ ಅವರ ಜೀವನವನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.
5/ 8
ಇನ್ನು ವಿಶೇಷತೆ ಎಂದರೆ ಅಣ್ಣಾಮಲೈ ಅವರು ಈ ಚಿತ್ರದಲ್ಲಿ ನಟಿಸಲು ಕೇವಲ ಒಂದು ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಮೊದಲ ಬಾರಿಗೆ ತೆರೆ ಮೇಲೆ ಬರುತ್ತಿರುವ ಸಿಂಗಂ ನೋಡಲು ಅಭಿಮಾನಿಗಲಳು ಸಹ ಕಾಯುತ್ತಿದ್ದಾರೆ.
6/ 8
ಇನ್ನು ಈ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿ ವಿಶ್ವಾಸ್ ಅವರೇ ಅವರ ಪಾತ್ರವನ್ನು ಮಾಡುತ್ತಿದ್ದು, ಅವರ ಕೋಚ್ ಆಗಿ ಅಣ್ಣಾಮಲೈ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಈ ಚಿತ್ರದ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಿದ್ದವಾಗಿದೆ.
7/ 8
ಅಲ್ಲದೇ ಚಿತ್ರತಂಡದ ಪ್ರಕಾರ ಅಣ್ಣಾಮಲೈ ಅವರನ್ನು ಈ ಕತೆ ಹೇಳಿ, ಕೋಚ್ ಪಾತ್ರದಲ್ಲಿ ನಟಿಸುವಂತೆ ಕೇಳಿದಾಗ ಒಂದು ಕ್ಷಣವೂ ಯೋಚಿಸದೆ, ಒಪ್ಪಿಕೊಂಡು ಶೂಟಿಂಗ್ ಮುಗಿಸಿದ್ದಾರೆ ಎಂದಿದ್ದಾರೆ.
8/ 8
ನಿಜಕ್ಕೂ ಇದೊಂದು ವಿಭಿನ್ನ ಕತೆಯುಳ್ಳ ಚಿತ್ರವಾಗಿದ್ದು, ದೇಶಕ್ಕೆ ಕೀರ್ತಿ ತಮದುಕೊಟ್ಟ ವಿಶ್ವಾಸ್ ಅವರ ಬದುಕನ್ನ ಜನರ ಮುಂದೆ ತೋರಿಸುವ ಪ್ರಯತ್ನವನ್ನು ಚಿತ್ರತಂಡ ಮಾಡುತ್ತಿದೆ.