Jayanthi - Anu Prabhakar: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಜಯಂತಿ ಅವರು ಇಹಲೋಕ ತ್ಯಜಿಸಿದ್ದಾರೆ. 76 ವರ್ಷದ ನಟಿಯ ಅಗಲಿಕೆಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ಜಯಂತಿ ಅವರ ಮಾಜಿ ಸೊಸೆ ಅನು ಪ್ರಭಾಕರ್ ಅವರು ಸಹ ಅಮ್ಮನಂತಿದ್ದ ಮಾಜಿ ಅತ್ತೆಯ ಅಗಲಿಕೆಗೆ ಕಂಬನಿ ಮಿಡಿದಿದ್ದು, ಭಾವುಕರಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಸ್ಯಾಂಡಲ್ವುಡ್ನ ಹಿರಿಯ ನಟಿ ಜಯಂತಿ ಅವರ ಅಗಲಿಕೆಗೆ ಗಣ್ಯರು, ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
2/ 10
ಜಯಂತಿ ಅವರ ಮಾಜಿ ಸೊಸೆ ಅನು ಪ್ರಭಾಕರ್ ಅವರೂ ನಟಿಯ ಅಗಲಿಕೆಗೆ ಭಾವುಕ ವಿದಾಯ ಹೇಳಿದ್ದಾರೆ.
3/ 10
ನಿಮ್ಮ ಜೊತೆ ಕಳೆದಂತ ಪ್ರತಿ ಕ್ಷಣಾ ಸದಾ ನನ್ನ ಮನಸು ಹಾಗು ಹೃದಯದಲ್ಲಿ ಇರುತ್ತೆ Mom... ನಿಮ್ಮಿಂದ ಕಲೆತ ಜೀವನದ ಪಾಠಗಳು ನಾನು ಎಂದು ಮರೆಯೋಲ್ಲ ಎಂದು ಕಂಬನಿ ಮಿಡಿದಿದ್ದಾರೆ ಅನು ಪ್ರಭಾಕರ್.
4/ 10
ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಈ ವಿಷಯದಬಗ್ಗೆ ಎಷ್ಟೋ ಸರಿ ನನ್ನ ಹತ್ತಿರ ಮಾತಾಡಿದ್ರಿ .... ಅಮ್ಮಮ್ಮ ಜೊತೆ ನೆಮ್ಮದಿಯಿಂದ ಇರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನು ಪ್ರಭಾಕರ್ ಇನ್ಸ್ಟಾಗ್ರಾಂನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
5/ 10
2002ರಲ್ಲಿಜಯಂತಿ ಅವರ ಮಗ ಕೃಷ್ಣ ಕುಮಾರ್ ಅವರ ಜತೆ ಅನು ಪ್ರಭಾಕರ್ ವಿವಾಹವಾಗಿತ್ತು. 2014ರಲ್ಲಿ ವಿಚ್ಚೇದನ ಪಡೆಯುವ ಮೂಲಕ ದೂರಾದರು.
6/ 10
ಕೃಷ್ಣ ಕುಮಾರ್ ಅವರ ಜತೆಗಿನ 12 ವರ್ಷದ ದಾಂಪತ್ಯಕ್ಕೆ ವಿದಾಯ ಹೇಳಿದ ನಂತರ 2016ರಲ್ಲಿ ರಘು ಮುಖರ್ಜಿ ಜೊತೆ ಅನು ಪ್ರಭಾಕರ್ ಮತ್ತೆ ಮದುವೆಯಾದರು.
7/ 10
ಅನು ಪ್ರಭಾಕರ್ ಹಾಗೂ ಕೃಷ್ಣ ಕುಮಾರ್ ಅವರ ವಿಚ್ಛೇದನದ ಬಗ್ಗೆ ಯಾವಾಗ ಕೇಳಿದರೂ ಜಯಂತಿ ಅವರ ಉತ್ತರ ಕೇವಲ ಕಣ್ಣೀರಾಗಿತ್ತು.
8/ 10
ನಟ ರಘು ಮುಖರ್ಜಿ ಸಹ ನಟಿಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
9/ 10
ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ಅವರಿಗೆ ಮುದ್ದಾದ ಮಗಳು ಇದ್ದಾರೆ.
10/ 10
ಮಗಳ ಆರೈಕೆಯ ಜತೆಗೆ ಬಣ್ಣದ ಬದುಕನ್ನೂ ಮುಂದುವರೆಸುತ್ತಿದ್ದಾರೆ ಅನು ಪ್ರಭಾಕರ್.