The Kerala Story ವೀಕ್ಷಣೆಗೆ 15-16 ವರ್ಷದ ಹುಡುಗಿಯರಿಗೆ ಸರ್ಕಾರ ವ್ಯವಸ್ಥೆ ಮಾಡಲಿ! ಬಿಜೆಪಿ ನಾಯಕರ ಆಗ್ರಹ

ಸರ್ಕಾರವು 'ದಿ ಕೇರಳ ಸ್ಟೋರಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಬೇಕು. ಜೊತೆಗೆ ನಗರದಲ್ಲಿ 15 ಮತ್ತು 16ರ ವಯೋಮಾನದ ಹುಡುಗಿಯರು ಚಿತ್ರ ವೀಕ್ಷಿಸಲು ವಿಶೇಷ ಪ್ರದರ್ಶನ ಆಯೋಜನೆ ಮಾಡಬೇಕು ಎಂದು ಬಿಜೆಪಿ ಘಟಕ ಒತ್ತಾಯಿಸಿದೆ.

First published:

  • 17

    The Kerala Story ವೀಕ್ಷಣೆಗೆ 15-16 ವರ್ಷದ ಹುಡುಗಿಯರಿಗೆ ಸರ್ಕಾರ ವ್ಯವಸ್ಥೆ ಮಾಡಲಿ! ಬಿಜೆಪಿ ನಾಯಕರ ಆಗ್ರಹ

    ಬಿಡುಗಡೆಯಾದ ದಿನದಿಂದಲೂ ದಿ ಕೇರಳ ಸ್ಟೋರಿ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಅಲ್ಲದೇ ಚಿತ್ರದ ಬಗ್ಗೆ ಪರ ಮತ್ತು ವಿರೋಧ ಚರ್ಚೆಗಳು ಜೋರಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಬಗ್ಗೆ ಹಲವು ರೀತಿಯ ಅಭಿಪ್ರಾಯ, ಕಾಮೆಂಟ್ ಮಾಡಲಾಗ್ತಿದೆ. ಜೊತೆಗೆ ಚಿತ್ರವನ್ನು ಕಾಶ್ಮೀರ ಫೈಲ್ಸ್ ಸಿನಿಮಾದ ಮತ್ತೊಂದು ಭಾಗವೆಂದು ಹೋಲಿಕೆ ಕೂಡ ಮಾಡಲಾಗಿದೆ.

    MORE
    GALLERIES

  • 27

    The Kerala Story ವೀಕ್ಷಣೆಗೆ 15-16 ವರ್ಷದ ಹುಡುಗಿಯರಿಗೆ ಸರ್ಕಾರ ವ್ಯವಸ್ಥೆ ಮಾಡಲಿ! ಬಿಜೆಪಿ ನಾಯಕರ ಆಗ್ರಹ

    ಸದ್ಯ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ದಿ ಕೇರಳ ಸ್ಟೋರಿ ಸಿನಿಮಾ ಸಾಮಾಜಿಕ ಮತ್ತು ರಾಜಕೀಯ ತಿರುವು ಸಹ ಪಡೆದುಕೊಳ್ಳುತ್ತಿದೆ. ಈಗ ದೆಹಲಿ ಬಿಜೆಪಿ ಘಟಕವು ಚಿತ್ರಕ್ಕೆ ಸಂಬಂಧಪಟ್ಟಂತೆ ದೆಹಲಿ ಸರ್ಕಾರಕ್ಕೆ ಮನವಿಯೊಂದನ್ನು ಮಾಡಿದೆ.

    MORE
    GALLERIES

  • 37

    The Kerala Story ವೀಕ್ಷಣೆಗೆ 15-16 ವರ್ಷದ ಹುಡುಗಿಯರಿಗೆ ಸರ್ಕಾರ ವ್ಯವಸ್ಥೆ ಮಾಡಲಿ! ಬಿಜೆಪಿ ನಾಯಕರ ಆಗ್ರಹ

    ಆಮ್ ಆದ್ಮಿ ಸರ್ಕಾರ ಅಂದ್ರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರವು ದಿ ಕೇರಳ ಸ್ಟೋರಿ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕು. ಜೊತೆಗೆ ನಗರದಲ್ಲಿ 15 ಮತ್ತು 16ರ ವಯೋಮಾನದ ಹುಡುಗಿಯರು ಚಿತ್ರ ವೀಕ್ಷಿಸಲು ವಿಶೇಷ ಪ್ರದರ್ಶನ ಆಯೋಜನೆ ಮಾಡಬೇಕು ಎಂದು ದೆಹಲಿ ಬಿಜೆಪಿ ಘಟಕ ಭಾನುವಾರ ಒತ್ತಾಯಿಸಿದೆ.

    MORE
    GALLERIES

  • 47

    The Kerala Story ವೀಕ್ಷಣೆಗೆ 15-16 ವರ್ಷದ ಹುಡುಗಿಯರಿಗೆ ಸರ್ಕಾರ ವ್ಯವಸ್ಥೆ ಮಾಡಲಿ! ಬಿಜೆಪಿ ನಾಯಕರ ಆಗ್ರಹ

    ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಅವರು ದಿ ಕೇರಳ ಸ್ಟೋರಿ ಸಿನಿಮಾದ ಪ್ರದರ್ಶನದ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ 15 ಮತ್ತು 16ರ ವಯೋಮಾನದ ಹುಡುಗಿಯರು ಚಿತ್ರ ವೀಕ್ಷಿಸಲು ವಿಶೇಷ ಪ್ರದರ್ಶನ ಆಯೋಜನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    MORE
    GALLERIES

  • 57

    The Kerala Story ವೀಕ್ಷಣೆಗೆ 15-16 ವರ್ಷದ ಹುಡುಗಿಯರಿಗೆ ಸರ್ಕಾರ ವ್ಯವಸ್ಥೆ ಮಾಡಲಿ! ಬಿಜೆಪಿ ನಾಯಕರ ಆಗ್ರಹ

    ಜೊತೆಗೆ ದಿ ಕೇರಳ ಸ್ಟೋರಿ ಚಿತ್ರವು ಲವ್ ಜಿಹಾದ್, ಧಾರ್ಮಿಕ ಮತಾಂತರ ಮತ್ತು ಮುಗ್ಧ ಹುಡುಗಿಯರನ್ನು ಭಯೋತ್ಪಾದನೆಗೆ ತಳ್ಳುವ ಗಂಭೀರ ವಿಷಯದ ಮೇಲೆ ಆಧಾರಿತವಾಗಿದೆ ಎಂದು ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸ್ವತಃ ಚಿತ್ರ ವೀಕ್ಷಿಸಬೇಕು ಹಾಗೂ ಪ್ರಚಾರ ಮಾಡಬೇಕು. ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಹೇಳಿದ್ದಾರೆ.

    MORE
    GALLERIES

  • 67

    The Kerala Story ವೀಕ್ಷಣೆಗೆ 15-16 ವರ್ಷದ ಹುಡುಗಿಯರಿಗೆ ಸರ್ಕಾರ ವ್ಯವಸ್ಥೆ ಮಾಡಲಿ! ಬಿಜೆಪಿ ನಾಯಕರ ಆಗ್ರಹ

    ದಿ ಕೇರಳ ಸ್ಟೋರಿ ಚಿತ್ರದ ವೀಕ್ಷಣೆಗೆ ಕೇವಲ ವಯಸ್ಕರರು ಮಾತ್ರ ವೀಕ್ಷಿಸಲು 'ಎ' ಪ್ರಮಾಣಪತ್ರ ನೀಡಲಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ 15 ರಿಂದ 16 ವರ್ಷ ವಯಸ್ಸಿನ ಹುಡುಗಿಯರಿಗೆ ಗಂಭೀರ ಮತ್ತು ಅಪಾಯಕಾರಿಯಾಗಿದೆ. ಹಾಗಾಗಿ ಸಿಎಂ ಅವರು ಚಲನಚಿತ್ರ ಸೆನ್ಸಾರ್ ಮಂಡಳಿಯನ್ನು ಸಂಪರ್ಕಿಸಿ ‘ಯು/ಎ’ ಪ್ರಮಾಣಪತ್ರ ಪಡೆಯಬೇಕು. ಇದು ಹುಡುಗಿಯರಲ್ಲಿ ಅರಿವು ಮೂಡಿಸಲು ಸಾಧ್ಯ ಎಂದಿದ್ದಾರೆ.

    MORE
    GALLERIES

  • 77

    The Kerala Story ವೀಕ್ಷಣೆಗೆ 15-16 ವರ್ಷದ ಹುಡುಗಿಯರಿಗೆ ಸರ್ಕಾರ ವ್ಯವಸ್ಥೆ ಮಾಡಲಿ! ಬಿಜೆಪಿ ನಾಯಕರ ಆಗ್ರಹ

    11 ಮತ್ತು 12 ನೇ ತರಗತಿಯ ವಿದ್ಯಾರ್ಥಿನಿಯರು ಜೊತೆಗೆ ಪದವಿ ವ್ಯಾಸಂಗ ಮಾಡುತ್ತಿರುವವರು ಕೂಡ ಲವ್ ಜಿಹಾದ್ ಗೆ ಸುಲಭವಾಗಿ ಬಲಿಪಶುಗಳಾಗ್ತಾರೆ. ಹೀಗಾಗಿ ಚಿತ್ರದ ವಿಶೇಷ ಪ್ರದರ್ಶನದ ಮೂಲಕ ಅವರಿಗೆ ಚಲನಚಿತ್ರ ತೋರಿಸಬೇಕು ಅಂತ ಬಿಜೆಪಿ ಒತ್ತಾಯಿಸಿದೆ.

    MORE
    GALLERIES