Shweta Tiwari: ದೇವ್ರಿಗೆ ನನ್ನ ಬ್ರಾ ಸೈಜ್ನದ್ದೇ ಚಿಂತೆ ಎಂದಿದ್ದ ನಟಿಗೆ ಸಂಕಷ್ಟ, ಶ್ವೇತಾ ವಿರುದ್ಧ ದಾಖಲಾಯ್ತು ಎಫ್ಐಆರ್!
Shweta Tiwari: ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಅವರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಸದ್ಯ, ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ಜನಪ್ರಿಯ ಕಿರುತೆರೆ (Small Screen) ನಟಿ ಶ್ವೇತಾ ತಿವಾರಿ (Shwetha Tiwari) ಅವರು ತಮ್ಮ ಒಳ ಉಡುಪುಗಳ (Inner wear) ಬಗ್ಗೆ ಹೇಳಿಕೆ ನೀಡುವಾಗ ದೇವರನ್ನು ಉಲ್ಲೇಖಿಸಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದು, ಅವರ ಹೇಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
2/ 8
ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಅವರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಸದ್ಯ, ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
3/ 8
ಮುಂಬರುವ ವೆಬ್ ಸರಣಿ 'ಶೋ ಸ್ಟಾಪರ್' (Show Stopper) ಪ್ರಚಾರ ಕಾರ್ಯಕ್ರಮದಲ್ಲಿ ಶ್ವೇತಾ ತನ್ನ ಬ್ರಾ ಗಾತ್ರವನ್ನು 'ಭಗವಾನ್' ತೆಗೆದುಕೊಳ್ಳುತ್ತಿದ್ದಾನೆ ಎಂದು ಹೇಳಿದ್ದರು. ದೇವರ ಬಗ್ಗೆ ತಮಾಷೆ ಮಾಡಿದ್ದಕ್ಕಾಗಿ ಆಕೆಯ ವಿರುದ್ಧ ಜನರು ಸಿಟ್ಟಿಗೆದಿದ್ದರು.
4/ 8
ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಈ ಬಗ್ಗೆ ಗರಂ ಆಗಿದ್ದರು. ‘ಶ್ವೇತಾ ತಿವಾರಿ ಅವರ ಹೇಳಿಕೆಯನ್ನು ನಾನು ನೋಡಿದ್ದೇನೆ. ನಾನು ಇದನ್ನು ಖಂಡಿಸುತ್ತೇನೆ. ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಭೋಪಾಲ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ಆ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದರು.
5/ 8
ಫ್ಯಾಶನ್ ಲೋಕದ ಬಗ್ಗೆ ‘ಶೋ ಸ್ಟಾಪರ್’ ವೆಬ್ ಸರಣಿ ಸಿದ್ಧಗೊಂಡಿದೆ. ‘ಮಹಾಭಾರತ’ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರ ಮಾಡಿದ್ದ ಸೌರಭ್ ರಾಜ್ ಜೈನ್ ಕೂಡ ಈ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಸದ್ಯ, ಈ ವೆಬ್ ಸರಣಿ ಬಗ್ಗೆಯೂ ಅನೇಕರು ಕಿಡಿಕಾರುತ್ತಿದ್ದಾರೆ.
6/ 8
ತಿವಾರಿ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಅದರಲ್ಲಿ ಅವರು ತಮ್ಮ ಒಳ ಉಡುಪುಗಳ ಬಗ್ಗೆ ಮಾತನಾಡುವಾಗ ದೇವರನ್ನು ಉಲ್ಲೇಖಿಸಿದ್ದಾರೆ. "ಮೇರಿ ಬ್ರಾ ಕಾ ಸೈಜ್ ಭಗವಾನ್ ಲೇ ರಹೇ ಹೈ," ಎಂದಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
7/ 8
ಶ್ವೇತಾ ತಿವಾರಿ ಹಿಂದಿ ಕಿರುತರೆಯಲ್ಲಿ ಅತ್ಯಂತ ಜನಪ್ರಿಯ ಮತ್ತು ಜನರ ನೆಚ್ಚಿನ ನಟಿಯರಲ್ಲಿ ಒಬ್ಬರು. ಅವರು 'ಕಸೌಟಿ ಜಿಂದಗಿ ಕೇ' ನಲ್ಲಿ ಪ್ರೇರಣಾ ಪಾತ್ರವನ್ನು ನಿರ್ವಹಿಸುವ ಮೂಲಕ ಮನೆ ಮನಗಳಲ್ಲಿ ಹೆಸರು ಪಡೆದಿದ್ದಾರೆ
8/ 8
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುವ ಭರಾಟೆಯಲ್ಲಿ ಶ್ವೇತಾ ತಿವಾರಿ ತನ್ನ ಒಳ ಉಡುಪಿನ ಬಗ್ಗೆ ಮಾತಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಶ್ವೇತಾ ಸಾರಿ ಕೇಳಿದ್ದಾರೆ. ಆದರೆ, ಮಾಡಿದ ತಪ್ಪುಗೆ ಶಿಕ್ಷೆ ಅನುಭವಿಸಬೇಕು ಅಂತ ನೆಟ್ಟಿಗರು ಹೇಳುತ್ತಿದ್ದಾರೆ.