ಬಾಲಿವುಡ್ ನಟ ಅರ್ಜುನ್ ಕಪೂರ್ ತನಗಿಂತಲೂ 11 ವರ್ಷ ವಯಸ್ಸಿನ ದೊಡ್ಡ ನಟಿಯೊಂದಿಗೆ ಡೇಟಿಂಗ್ ನಡೆಸುತ್ತಿರುವುದು ಗೊತ್ತಿರುವ ವಿಷಯವೇ.
2/ 26
ಸಲ್ಮಾನ್ ಖಾನ್ ಸಹೋದರ, ನಟ, ನಿರ್ಮಾಪಕ ಅರ್ಬಾಜ್ ಖಾನ್ ಮಾಜಿ ಪತ್ನಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಕಳೆದ ಎರಡು ವರ್ಷಗಳಿಂದ ಜೊತೆಯಾಗಿದ್ದಾರೆ.
3/ 26
ಅರ್ಜುನ್-ಮಲೈಕಾರ ಲವ್ವಿ-ಡವ್ವಿ ಕಾರಣದಿಂದಲೇ ಅರ್ಬಾಜ್ ಖಾನ್ ಪತ್ನಿಯಿಂದ ದೂರವಾಗಿದ್ದರು ಎಂಬ ಸುದ್ದಿಗಳು ಈ ಹಿಂದೆ ವಿಚ್ಛೇದನದ ವೇಳೆ ಹರಿದಾಡಿತ್ತು. ಇತ್ತ ಡೈವೋರ್ಸ್ ಬೆನ್ನಲ್ಲೇ ಅರ್ಜುನ್ ಕಪೂರ್ ಜೊತೆಯಾಗಿ ಮಲೈಕಾ ಕಾಣಿಸಿಕೊಂಡಿದ್ದರು.
4/ 26
ಇದರಿಂದ ಮಲೈಕಾ ಹಾಗೂ ಅರ್ಜುನ್ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಆದರೆ ಇದಾಗಿ ಎರಡುವರೆ ವರ್ಷಗಳು ಕಳೆದರೂ ಬಾಲಿವುಡ್ ಜೋಡಿ ಡೇಟಿಂಗ್ನಲ್ಲೇ ತೊಡಗಿಸಿಕೊಂಡಿದ್ದರು.
5/ 26
ಇದರೊಂದಿಗೆ ಅರ್ಜುನ್ ಕಪೂರ್ ಬಂದಲ್ಲಿ ಹೋದಲ್ಲಿ ಮದುವೆ ವಿಚಾರವಂತು ಪ್ರಸ್ತಾಪವಾಗುತ್ತಿತ್ತು. ಈ ಬಗ್ಗೆ ಮಾತನಾಡಿದ ಪಾಣಿಪತ್ ಚಿತ್ರನಟ, ನನಗೀಗ 35 ವರ್ಷ. ಇಷ್ಟು ಬೇಗ ಮದುವೆಯಾಗಬೇಕು ಎಂದು ನನಗನಿಸುತ್ತಿಲ್ಲ.
6/ 26
ಮದುವೆಯಾಗುವ ಬಗ್ಗೆ ಯಾವುದೇ ಪ್ಲ್ಯಾನ್ ಹೊಂದಿಲ್ಲ. ವಿವಾಹವಾದ್ರೆ ಪುರುಷರ ತಲೆ ಬೋಳಾಗುತ್ತದೆಯಂತೆ. ನಾನೀಗ ಸುಂದರವಾಗಿದ್ದೇನೆ ತಾನೆ. ಮತ್ಯಾಕೆ ಮದುವೆಯಾಗಿ ಬೋಳು ತಲೆಯವನಾಗಬೇಕು ಎಂದು ಅರ್ಜುನ್ ಕಪೂರ್ ಹಾಸ್ಯ ಚಟಾಕಿ ಹಾರಿಸಿದರು.
7/ 26
ಒಂದು ವೇಳೆ ವಿವಾಹವಾಗುವುದಿದ್ರೆ ನಾನೇ ತಿಳಿಸುವೆ ಎಂದಿದ್ದಾರೆ. ಇದರೊಂದಿಗೆ ಮಲೈಕಾ ಅವರನ್ನು ಅರ್ಜುನ್ ಕಪೂರ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳಿಗೆ ತೆರೆ ಎಳೆದರು.
8/ 26
ಹಾಗೆಯೇ ಮಲೈಕಾ ಅರೋರಾ ಕೂಡ ತಮ್ಮ ಎರಡನೇ ಮದುವೆ ಬಗ್ಗೆ ಈ ಹಿಂದೆ ಮನಬಿಚ್ಚಿ ಮಾತನಾಡಿದ್ದರು. ನಾವಿಬ್ಬರು ಒಂದು ಹೆಜ್ಜೆ ಮುಂದಿಡಬೇಕು ಎಂದು ಬಯಸಿದ್ದೇವೆ. ಆದರೆ ಅದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ನಮ್ಮಿಬ್ಬರ ನಿರ್ಧಾರ ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕಿದೆ ಎಂದಿದ್ದರು.
9/ 26
1998ರಲ್ಲಿ ಮದುವೆಯಾಗಿದ್ದ ಮಲೈಕಾ ಮತ್ತು ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಹಲವು ಭಿನ್ನಾಭಿಪ್ರಾಯಗಳ ಕಾರಣ ಕೌಟುಂಬಿಕ ನ್ಯಾಯಾಲಯದಲ್ಲಿ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಅದರಲ್ಲೂ ಈ ಜೋಡಿ ದೂರವಾಗಲು ಅರ್ಜುನ್ ಕಪೂರ್ ಕಾರಣ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು.
10/ 26
ಅರ್ಜುನ್ ಕಪೂರ್ ಹಾಗೂ ಮಲೈಕಾ ನಡುವಣ ರಿಲೇಷನ್ಶಿಪ್ ಬಗ್ಗೆ ಗೊತ್ತಾಗಿದ್ದರಿಂದ ಅರ್ಬಾಜ್ ಡೈವೋರ್ಸ್ ನೀಡಿದ್ದಾರೆ ಎಂಬ ಸುದ್ದಿಗಳು ಜೋರಾಗಿ ಕೇಳಿ ಬಂದಿತ್ತು. ಹಾಗೆಯೇ ಆಗೊಮ್ಮೆ ಈಗೊಮ್ಮೆ 35 ವರ್ಷದ ಅರ್ಜುನ್ ಹಾಗೂ 46 ವರ್ಷದ ಮಲೈಕಾ ಮದುವೆ ಸುದ್ದಿಗಳು ಹರಿದಾಡುತ್ತಿರುತ್ತವೆ.
11/ 26
ಬಾಲಿವುಡ್ ಬಳುಕುವ ಬಳ್ಳಿ ಮಲೈಕಾ ಅರೋರ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುವ ನಟಿ. ಡೇಟಿಂಗ್, ಮೀಟಿಂಗ್ ಮೂಲಕ ಪೇಜ್3 ಕಾಲಂನಲ್ಲಿ ಕಾಣಿಸಿಕೊಳ್ಳುವ ನಟಿ ಈ ಬಾರಿ ಸುದ್ದಿಯಾಗಿದ್ದು ಬೇರೊಂದು ವಿಷಯಕ್ಕೆ.
12/ 26
ಸಾಮಾನ್ಯವಾಗಿ ಮಲ್ಲಿಕಾ ಅರೋರ ಸಮುದ್ರ ಕಿನಾರೆಯಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿರುವ ಬಿಕಿನಿ ಫೋಟೋಗಳ ಪಡ್ಡೆ ಹೈಕ್ಳ ಹೃದಯಕ್ಕೆ ಕಿಚ್ಚು ಹಚ್ಚುತ್ತಾರೆ. ಇತ್ತೀಚೆಗೆ ಮಲೈಕಾರ ಅರೆನಗ್ನ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೇ ಹೆಚ್ಚು.
13/ 26
ಅದರಲ್ಲೂ ಚಿರ ಯೌವ್ವನವನ್ನು ಉಳಿಸಿಕೊಂಡಿರುವ ನಟಿ ಹಾಟ್ ಲುಕ್ಗೆ ಅನೇಕರು ಫಿದಾ ಆಗಿದ್ದರು.
14/ 26
ಏಕೆಂದರೆ ಮುನ್ನಿ ಬದ್ನಾಮ್ ಹೂಯಿ...ಎಂದು ಮೈ ಬಳುಕಿಸಿದ್ದ 45ರ ತಾರೆ ಇನ್ನೂ ಕೂಡ ಯೌವ್ವನವನ್ನು ಕಾಪಾಡಿಕೊಂಡಿದ್ದಾರೆ. ತಮ್ಮ ಮಾದಕ ಮೈಮಾಟದ ಫೋಟೋ ಮೂಲಕ ಮೋಡಿ ಮಾಡುವ ನಟಿ ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದಾರೆ.
15/ 26
1998ರಲ್ಲಿ ಮದುವೆಯಾಗಿದ್ದ ಮಲೈಕಾ ಮತ್ತು ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಹಲವು ಭಿನ್ನಾಭಿಪ್ರಾಯಗಳ ಕಾರಣ ಕೌಟುಂಬಿಕ ನ್ಯಾಯಾಲಯದಲ್ಲಿ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಅದರಲ್ಲೂ ಈ ಜೋಡಿ ದೂರವಾಗಲು ಅರ್ಜುನ್ ಕಪೂರ್ ಕಾರಣ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು.
16/ 26
ಅರ್ಜುನ್ ಕಪೂರ್ ಹಾಗೂ ಮಲೈಕಾ ನಡುವಣ ರಿಲೇಷನ್ಶಿಪ್ ಬಗ್ಗೆ ಗೊತ್ತಾಗಿದ್ದರಿಂದ ಅರ್ಬಾಜ್ ಡೈವೋರ್ಸ್ ನೀಡಿದ್ದಾರೆ ಎಂಬ ಸುದ್ದಿಗಳು ಜೋರಾಗಿ ಕೇಳಿ ಬಂದಿತ್ತು. ಹಾಗೆಯೇ ಆಗೊಮ್ಮೆ ಈಗೊಮ್ಮೆ ಅರ್ಜುನ್-ಮಲೈಕಾ ಮದುವೆ ಸುದ್ದಿಗಳು ಹರಿದಾಡುತ್ತಿರುತ್ತವೆ.