Aamir Khan Love Story: ಆಮೀರ್ ಖಾನ್-ಕಿರಣ್ ರಾವ್ ಲವ್ ಸ್ಟೋರಿ ದಿ ಎಂಡ್: ಕಾರಣವಾದ್ರಾ ಆ ಸುಂದರ ನಟಿ..! Kiran Rao: ಮೊದಲ ಮಡದಿಯಿಂದ ವಿಚ್ಛೇದನ ಪಡೆದ ನಂತರ ಆಮೀರ್ ಖಾನ್ ಅವರು ಕಿರಣ್ ರಾವ್ ಅವರನ್ನು ಪ್ರೀತಿಸಿ ಮದುವೆಯಾದರು. 15 ವರ್ಷಗಳ ದಾಂಪತ್ಯ ಈಗ ದಿ ಎಂಡ್ ಆಗಿದೆ. ಆಮೀರ್ ಖಾನ್ ಅವರ ಈ ನಿರ್ಧಾರದ ಹಿಂದೆ ಆ ನಟಿ ಇದ್ದಾರೆ ಎನ್ನಲಾಗುತ್ತಿದೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಹಾಗೂ ಟ್ವಿಟರ್)
1 / 13
ಆಮೀರ್ ಖಾನ್ ಹಾಗೂ ಕಿರಣ್ ರಾವ್ ಅವರು ವಿಚ್ಛೇದನ ಪಡೆಯಲಿದ್ದಾರೆ ಎಂದು ತುಂಬಾ ಸಮಯದಿಂದ ಹೇಳಲಾಗುತ್ತಿತ್ತು.
2 / 13
ಆ ಎಲ್ಲ ಅಂತೆ ಕಂತೆ ಸುದ್ದಿಗಳಿಗೆ ಇಂದು ಬ್ರೇಕ್ ಬಿದ್ದಿದೆ. ಖುದ್ದು ಈ ಸೆಲೆಬ್ರಿಟಿ ಜೋಡಿಯೇ ತಮ್ಮ ವಿಚ್ಛೇದನದ ವಿಷಯ ಬಹಿರಂಗ ಪಡಿಸಿದ್ದಾರೆ.
3 / 13
ಖುಷಿಯಿಂದ ಸಾಗುತ್ತಿದ್ದ ಈ ಸಂಸಾರದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
4 / 13
ಇದರ ನಡುವೆಯೇ ಅಮೀರ್ ಖಾನ್ ಹಾಗೂ ಕಿರಣ್ ರಾವ್ ದೂರಾಗಲು ಕಾರಣ ಆ ನಟಿ ಎಂದು ಕೆಲವರು ದೂರುತ್ತಿದ್ದಾರೆ.
5 / 13
ಆಮೀರ್ ಖಾನ್ ಹಾಗೂ ಕಿರಣ್ ರಾವ್ ಅವರಿಗೆ ಆಜಾದ್ ಎಂಬ ಮಗನಿದ್ದಾರೆ.
6 / 13
ಇನ್ನು ಲಗಾನ್ ಸಿನಿಮಾದ ನಂತರ ಕಿರಣ್ ರಾವ್ ಅವರನ್ನು ಪ್ರೀತಿಸಿ ಮದುವೆಯಾದರು.
7 / 13
ಇನ್ನು ದಂಗಲ್ ಸಿನಿಮಾದ ನಂತರ ಆಮೀರ್ ಖಾನ್ ಜೀವನದಲ್ಲಿ ಮತ್ತೊಬ್ಬ ನಟಿಯ ಪ್ರವೇಶವಾಯಿತು ಎನ್ನಲಾಗುತ್ತಿದೆ.
8 / 13
ಹೌದು, ದಂಗಲ್ ಸಿನಿಮಾದಲ್ಲಿ ಮಗಳ ಪಾತ್ರದಲ್ಲಿ ನಟಿಸಿರುವ ಫಾತಿಮಾ ಸನಾ ಶೇಖ್ ಅವರು ಆಮೀರ್ ಖಾನ್ಗೆ ಬಹಳ ಆತ್ಮೀಯವಾದರಂತೆ.
9 / 13
ಅಲ್ಲಿಂದ ಆಮೀರ್ ಹಾಗೂ ಕಿರಣ್ ರಾವ್ ಅವರ ದಾಂಪತ್ಯದಲ್ಲಿ ಬಿರುಕುಂಟಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.
10 / 13
ಫಾತಿಮಾ ಸನಾ ಶೇಖ್ ಅವರು ಆಮೀರ್ ಖಾನ್ ಜೀವನಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಈ ಬೆಳವಣಿಗೆಯಾಗಿದೆ ಎಂದು ಕೆಲವರು ಈ ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
11 / 13
ಫಾತಿಮಾ ಸನಾ ಶೇಖ್ ಕಾರಣದಿಂದಲೇ ಆಮೀರ್ ಖಾನ್ ಕಿರಣ್ ಅವರಿಗೆ ವಿಚ್ಛೇದನ ನೀಡುವ ನಿರ್ಧಾರ ಮಾಡಿದ್ದು ಎಂದು ಹೇಳಲಾಗುತ್ತಿದೆ.
12 / 13
ಸದ್ಯದಲ್ಲೇ ಆಮೀರ್ ಹಾಗೂ ಫಾತಿಮಾ ಸನಾ ಶೇಖ್ ಅವರ ಮದುವೆಯ ಪ್ರಕಟಣೆ ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ.
13 / 13
ದಂಗಲ್ ನಂತರ ಫಾತಿಮಾ ಹಾಗೂ ಆಮೀರ್ ಖಾನ್ ಠಗ್ಸ್ ಆಫ್ ಹಿಂದೋಸ್ತಾನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.
First published: July 03, 2021, 18:33 IST