Farhan Akhtar-Shibani Dandekar: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ನ ಮತ್ತೊಂದು ಸ್ಟಾರ್ ಜೋಡಿ!
Farhan Akhtar and Shibani Dandekar: ಬಾಲಿವುಡ್ ತಾರಾ ಜೋಡಿ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಈ ಜೋಡಿ ಸದಾ ಡೇಟಿಂಗ್ ವಿಚಾರದಲ್ಲಿ ಸುದ್ದಿ ಆಗುತ್ತಿದ್ದರು. ಇವರ ಮದುವೆ ಯಾವಾಗ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.
ಬಾಲಿವುಡ್ನಲ್ಲಿ ಮತ್ತೆ ಮದುವೆ ಸಂಭ್ರಮ ಕಳೆಗಟ್ಟಿದೆ. ಬಾಲಿವುಡ್ ಮದುವೆಗಳು ಅಂದರೆ ಕೊಂಚ ಕುತೂಹಲ ಹೆಚ್ಚೇ ಇರುತ್ತದೆ. ಬಾಲಿವುಡ್ ತಾರಾ ಜೋಡಿ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 7
ಈ ಜೋಡಿ ಸದಾ ಡೇಟಿಂಗ್ ವಿಚಾರದಲ್ಲಿ ಸುದ್ದಿ ಆಗುತ್ತಿದ್ದರು. ಇವರ ಮದುವೆ ಯಾವಾಗ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಬಿ ಟೌನ್ನಲ್ಲಿ ಈ ಜೋಡಿಯ ಮದುವೆ ಸಮಾರಂಭ ಕಳೆಗಟ್ಟಿದೆ. ಇಂದು ಈ ಜೋಡಿ ಮದುವೆಯಾಗಿದ್ದಾರೆ,
3/ 7
ಮುಂಬೈನಲ್ಲಿರುವ ಫರಾನ್ ಅಖ್ತರ್ ಮನೆಯಲ್ಲೇ ಮದುವೆ ಸಮಾರಂಭ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಶಬಾನಾ ಅಜ್ಮಿ, ಶಿಬಾನಿ ಅವರ ಸಹೋದರಿ ಅನುಷಾ ದಾಂಡೇಕರ್, ರಿಯಾ ಚಕ್ರವರ್ತಿ ಮತ್ತು ಅಮೃತಾ ಅರೋರಾ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು.
4/ 7
ಇನ್ನು ನಿನ್ನೆ ಮೆಹೆಂದಿ ಜೊತೆಗೆ ಸಂಗೀತ್ ಕಾರ್ಯಕ್ರಮ ಕೂಡ ನೆರವೇರಿದೆ. ಈ ಸಮಾರಂಭಕ್ಕೆ ಶಿಬಾನಿ, ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಈ ವೇಳೆ ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಶಿಬಾನಿ ಡ್ಯಾನ್ಸ್ ಮಾಡಿದ್ದಾರೆ.
5/ 7
ಸಿಂಬಾ ಚಿತ್ರದ 'ಆಂಖ್ ಮೇರಿ' ಹಾಡು, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ 'ಮೆಹೆಂದಿ ಲಗಾ ಕೆ ರಖನಾ' ಹಾಡಿಗೆ ಅನುಷಾ ದಾಂಡೇಕರ್ ಮತ್ತು ರಿಯಾ ಚಕ್ರವರ್ತಿ ಅವರು ಸೇರಿದಂತೆ ಎಲ್ಲರೂ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
6/ 7
ಕೊರೊನಾ ಕಾರಣಕ್ಕೆ ಮದುವೆ ಸಂಭ್ರವನ್ನು ಚಿಕ್ಕದಾಗಿ ಮಾಡಲಾಗಿದೆ. ಮದುವೆ ಕಾರ್ಯಕ್ರಮಗಳನ್ನು ಕೂಡ ಕಡಿಮೆ ಜನರ ಸಮ್ಮುಖದಲ್ಲಿ ನಡೆದಿದೆ. ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರಷ್ಟೇ ಭಾಗಿಯಾಗಿದ್ದಾರೆ.
7/ 7
ನಟ, ನಿರ್ದೇಶಕ ಫರ್ಹಾನ್ ಅಖ್ತರ್ಗೆ ಇದು ಎರಡನೇ ಮದುವೆ. ಶಿಬಾನಿಗೂ ಮೊದಲು ಫರ್ಹಾನ್ ಅಧುನಾ ಬಬಾನಿ ಜೊತೆಗೆ ಮದುವೆ ಆಗಿದ್ದರು. 2000ರಲ್ಲಿ ಫರಾನ್ ಮೊದಲ ಮದುವೆ ಆಗಿದ್ದರು. ನಂತರ ಅವರು 2017ರಲ್ಲಿ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ನಂತರ 2018 ರಿಂದ ಶಿಬಾನಿ ಜೊತೆಗೆ ಪ್ರೀತಿಯಲ್ಲಿ ಇದ್ದಾರೆ ಫರ್ಹಾನ್.