Rishab Shetty: ಸದ್ಯ ರಿಷಬ್ ಶೆಟ್ಟಿಗೆ ಏನು ಬಿರುದು ಕೊಡುವುದು ಎನ್ನುವ ಚರ್ಚೆ ನಡೀತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬ ರಿಷಬ್ ಶೆಟ್ಟಿ ಅವರಿಗೆ ಡಿವೈನ್ ಸ್ಟಾರ್ ಎಂದು ಕರೆಯೋಣ ಎಂದು ಹೇಳಿದ್ದಾರೆ.
ಎಲ್ಲಿ ನೋಡಿದರೂ ಅಲ್ಲಿ ಕಾಂತಾರ ಅಬ್ಬರ. ಜನ ರಿಷಬ್ ಶೆಟ್ಟಿ ಅವರ ಜಪ ಮಾಡುತ್ತಿದ್ದಾರೆ. ಕ್ಲೈಮ್ಯಾಕ್ಸ್ನಲ್ಲಿ ಇವರ ಅಭಿನಯ ಕಂಡು ದಂಗಾಗಿ ಹೋಗಿದ್ದಾರೆ,
2/ 8
ಕಾಂತಾರ ಸಿನಿಮಾ ರಿಲೀಸ್ ಆದ ಎಲ್ಲೆಡೆ ಇಂದಿಗೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದು ಕನ್ನಡಿಗರಿಗೆ ಹೆಮ್ಮೆ ಅಂದರೆ ತಪ್ಪಾಗಲ್ಲ. ಅಷ್ಟರ ಮಟ್ಟಿಗೆ ಅದ್ಭುತವಾದ ಸಿನಿಮಾ ಮಾಡಿದ್ದಾರೆ ರಿಷಬ್ ಶೆಟ್ಟಿ.
3/ 8
'ಕಾಂತಾರ' ಸಿನಿಮಾ ಮೂಲಕ ರಿಷಬ್ ಶೆಟ್ಟಿ ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಾನೂ ಇದ್ದೇನೆ ಎಂದು ರಿಷಬ್ ಶೆಟ್ಟಿ ತೋರಿಸಿಕೊಟ್ಟಿದ್ದಾರೆ.
4/ 8
ಇನ್ನು ಸ್ಟಾರ್ ನಟರಿಗೆ ಅಭಿಮಾನಿಗಳು ಬಿರುದುಗಳನ್ನು ಕೊಡುವುದು ಹೊಸದೇನು ಅಲ್ಲ. ಕನ್ನಡದ ಎಲ್ಲಾ ನಟಿರಿಗೂ ಒಂದೊಂದು ಬಿರುದಿನಿಂದ ಅಭಿಮಾನಿಗಳು ಕರೀತಾರೆ.
5/ 8
ಸದ್ಯ ರಿಷಬ್ ಶೆಟ್ಟಿಗೆ ಏನು ಬಿರುದು ಕೊಡುವುದು ಎನ್ನುವ ಚರ್ಚೆ ನಡೀತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬ ರಿಷಬ್ ಶೆಟ್ಟಿ ಅವರಿಗೆ ಡಿವೈನ್ ಸ್ಟಾರ್ ಎಂದು ಕರೆಯೋಣ ಎಂದು ಹೇಳಿದ್ದಾರೆ.
6/ 8
'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಎಂದು ಕರೆಯೋಣ ಎಂದು ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೆಲವರು ಇದಕ್ಕೆ ಕಾಮೆಂಟ್ ಮಾಡಿ ಒಳ್ಳೆ ಬಿರುದು ಎಂದಿದ್ದಾರೆ.
7/ 8
ಇದಕ್ಕಿಂತ ಬೇರೆ ಇದ್ದರೆ ಚೆನ್ನಾಗಿರುತ್ತದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಕೆಲವರು ನ್ಯಾಚುರಲ್ ಸ್ಟಾರ್ ರಿಷಬ್ ಶೆಟ್ಟಿ ಎನ್ನುತ್ತಿದ್ದಾರೆ. ಮತ್ತೊಬ್ಬರು 'ಕರಾವಳಿ ಚಕ್ರವರ್ತಿ' ಎಂದು ಕಾಮೆಂಟ್ ಮಾಡಿದ್ದಾರೆ.
8/ 8
ಬಾಕ್ಸಾಫೀಸ್ನಲ್ಲಿ 'ಕಾಂತಾರ' ಸಿನಿಮಾ ನಾಗಾಲೋಟ ಮುಂದುವರೆದಿದೆ. ಈಗಾಗಲೇ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ.