Bigg Boss Kannada-Kichcha Sudeep: ಕಿಚ್ಚನ ಫಿನಾಲೆ ಲುಕ್ಗೋಸ್ಕರ ಕಾಯ್ತಿದ್ದಾರೆ ಫ್ಯಾನ್ಸ್
ಕಿಚ್ಚ ಸುದೀಪ್ ಬಿಗ್ ಬಾಸ್ ಹೋಸ್ಟ್ ಮಾಡುವಾಗ ಅವರು ಧರಿಸೋ ಬಟ್ಟೆಗಳಿಗೇ ಸ್ಪೆಷಲ್ ಅಭಿಮಾನಿಗಳಿದ್ದಾರೆ. ಪ್ರತಿವಾರ ಸುದೀಪ್ ಅವರ ಡ್ರೆಸ್ ನೋಡೋಕೆ ಕಾಯ್ತಾರೆ ಫ್ಯಾನ್ಸ್. ಈಗ ಗ್ರ್ಯಾಂಡ್ ಫಿನಾಲೆ. ಇನ್ನು ಕೇಳಬೇಕಾ?
ಕಿಚ್ಚ ಸುದೀಪ್ ಅವರ ನಿರೂಪಣೆಗಾಗಿಯೇ ಬಿಗ್ ಬಾಸ್ ನೋಡುವ ಮಂದಿ ಬಹಳಷ್ಟು ಜನರಿದ್ದಾರೆ. ಇವರು ಶೋ ನೋಡುವುದೇ ಕಿಚ್ಚನ ಮಾತು ಕೇಳುವುದಕ್ಕಾಗಿ, ಡ್ರೆಸ್ ನೋಡುವುದಕ್ಕಾಗಿ, ಸ್ಟೈಲ್ ನೋಡಿ ಎಂಜಾಯ್ ಮಾಡುವುದಕ್ಕಾಗಿ,
2/ 7
ಕಿಚ್ಚನ ಮಾತು ಮೆಚ್ಚದವರಿಲ್ಲ. ಹಾಗೆಯೇ ಅವರ ಡ್ರೆಸ್ಸಿಂಗ್ ಸ್ಟೈಲ್ಗೆ ಅಭಿಮಾನಿಗಳು ಫಿದಾ. ಎಲ್ರಿಗೂ ಕಿಚ್ಚನ ಡ್ರೆಸ್ ನೋಡುವ ಕ್ರೇಜ್.
3/ 7
ಕಿಚ್ಚ ಸುದೀಪ್ ಅವರು ಪ್ರತಿ ಶೋನಲ್ಲಿ ಡಿಫರೆಂಟಾಗಿ ಡ್ರೆಸ್ ಮಾಡಿಕೊಂಡು ಬರುತ್ತಾರೆ. ಅವರ ವಿಭಿನ್ನ ಶೈಲಿ, ಟ್ರೆಂಡ್, ಬಣ್ಣದ ಡ್ರೆಸ್ ಯೂತ್ಗೆ ಸಖತ್ ಇಷ್ಟ.
4/ 7
ಕಿಚ್ಚ ಸುದೀಪ್ ಅವರು ಫಾರ್ಮಲ್ ಡ್ರೆಸ್ ಅಷ್ಟೇ ಅಲ್ಲ, ತುಂಬಾ ಫ್ಯಾಷನೆಬಲ್ ಬಟ್ಟೆಗಳನ್ನು ಧರಿಸುತ್ತಾರೆ. ಇದೀಗ ಬಿಗ್ ಬಾಸ್ ಸೀಸನ್ 9 ಫಿನಾಲೆ ನಡೆಯಲಿದ್ದು ಕಿಚ್ಚ ಅವರ ಲುಕ್ ಬಗ್ಗೆ ಕುತೂಹಲ ಹೆಚ್ಚಾಗಿದೆ.
5/ 7
ಅಭಿಮಾನಿಗಳು ಬಿಗ್ಬಾಸ್ ವಿನ್ನರ್ ಬಗ್ಗೆ ಎಷ್ಟು ಕುತೂಹಲದಲ್ಲಿದ್ದಾರೋ ಅಷ್ಟೇ ಕುತೂಹಲದಿಂದ ಕಿಚ್ಚ ಸುದೀಪ್ ಅವರ ಡ್ರೆಸ್ ಬಗ್ಗೆ ಕಾಯುತ್ತಿದ್ದಾರೆ.
6/ 7
ಕಿಚ್ಚ ಅವರ ಲುಕ್ ಬಗ್ಗೆ ಅಭಿಮಾನಿಗಳು ಕಾಯುತ್ತಿರುವಾಗ ಅವರ ಈ ಹಿಂದಿನ ಹೋಸ್ಟ್ ಲುಕ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
7/ 7
ಒಂದಕ್ಕಿಂತ ಒಂದು ಲುಕ್ ಆಕರ್ಷಕವಾಗಿದ್ದು ಸಖತ್ ಸ್ಟೈಲಿಷ್ ಆಗಿವೆ. ಡ್ರೆಸ್ಗೆ ತಕ್ಕಂತೆ ಕಿಚ್ಚ ಆ್ಯಸಸರೀಸ್ ಕೂಡಅ ಧರಿಸೋದು ಇನ್ನೊಂದು ಹೈಲೈಟ್.