Samantha: ನಟಿ ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ! ಎಲ್ಲಿದೆ ಸ್ಯಾಮ್ ದೇಗುಲ?

Samantha Temple: ನೆಚ್ಚಿನ ನಟ-ನಟಿಯರಿಗಾಗಿ ಅಭಿಮಾನಿಗಳು ಏನೆಲ್ಲಾ ಮಾಡ್ತಾರೆ ಎನ್ನುವುದಕ್ಕೆ ಈ ಸಮಂತಾ ಅಭಿಮಾನಿಯೇ ಸಾಕ್ಷಿಯಾಗಿದ್ದಾರೆ. ಟಾಲಿವುಡ್ ನಟಿ ಸಮಂತಾಗಾಗಿ ಅಭಿಮಾನಿಯೊಬ್ಬ ದೇಗುಲವನ್ನೇ ನಿರ್ಮಿಸಿದ್ದಾನೆ. ಆಶ್ಚರ್ಯವೇ ಆದ್ರೂ ನಿಜವಾಗಿದೆ.

First published:

  • 18

    Samantha: ನಟಿ ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ! ಎಲ್ಲಿದೆ ಸ್ಯಾಮ್ ದೇಗುಲ?

    ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರಿಗಾಗಿ ದೇವರಂತೆ ಪೂಜಿಸುತ್ತಾರೆ. ಅಭಿಮಾನ ಹೆಚ್ಚಾದ್ರೆ ದೇಗುಲವನ್ನೇ ನಿರ್ಮಿಸುತ್ತಾರೆ. ಅಭಿಮಾನಿಗಳ ಈಗಾಗಲೇ ಕೆಲ ನಾಯಕಿಯರಿಗೆ ದೇವಸ್ಥಾನವನ್ನೇ ಕಟ್ಟಿದ್ದಾರೆ. ಈಗ ಆ ಪಟ್ಟಿಗೆ  ಸಮಂತಾ ಕೂಡ ಸೇರ್ಪಡೆಯಾಗುತ್ತಿದ್ದಾರೆ.

    MORE
    GALLERIES

  • 28

    Samantha: ನಟಿ ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ! ಎಲ್ಲಿದೆ ಸ್ಯಾಮ್ ದೇಗುಲ?

    ಅಭಿಮಾನಿಯೊಬ್ಬರು ತನ್ನ ಮನೆಯ ಆವರಣದಲ್ಲೇ ಸಮಂತಾಗಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ಬಾಪಟ್ಲಾ ಜಿಲ್ಲೆಯ ಆಲಪಾಡು ಮೂಲದ ಸಂದೀಪ್ ಎಂಬ ವ್ಯಕ್ತಿ ತನ್ನ ಮನೆಯ ಅವರಣದಲ್ಲೇ ಸಮಂತಾಗೆ ದೇವಸ್ಥಾನ ನಿರ್ಮಿಸಿದ್ದಾರೆ. ಸಮಂತಾ ಹುಟ್ಟುಹಬ್ಬದ ವೇಳೆ ಈ ದೇವಾಲಯವನ್ನು ತೆರೆಯಲು ಅಭಿಮಾನಿ ಪ್ಲಾನ್ ಮಾಡಿದ್ದಾನೆ.

    MORE
    GALLERIES

  • 38

    Samantha: ನಟಿ ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ! ಎಲ್ಲಿದೆ ಸ್ಯಾಮ್ ದೇಗುಲ?

    ಸಮಂತಾ ಮೇಲಿನ ಅಭಿಮಾನದಿಂದ ಸಂದೀಪ್ ಎಂಬ ಯುವಕ ಈಗಾಗಲೇ ತಿರುಪತಿ, ಚೆನ್ನೈ, ನಾಗಪಟ್ಟಣಂ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾನೆ. ಸಮಂತಾ ಮೈಯೋಸಿಟಿಸ್​ನಿಂದ ಚೇತರಿಸಿಕೊಂಡ ನಂತರ ಸಂದೀಪ್ ಈ ಪ್ರವಾಸಗಳನ್ನು ಕೈಗೊಂಡರು.

    MORE
    GALLERIES

  • 48

    Samantha: ನಟಿ ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ! ಎಲ್ಲಿದೆ ಸ್ಯಾಮ್ ದೇಗುಲ?

    ಇದೀಗ ನಟಿಗಾಗಿ ದೇಗುಲ ನಿರ್ಮಿಸಿದ ವಿಷಯ ತಿಳಿದ ಇತರ ಸಮಂತಾ ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಟಿಗಾಗಿ ದೇಗುಲ ನಿರ್ಮಿಸುತ್ತಿರುವ ವ್ಯಕ್ತಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿದೆ.

    MORE
    GALLERIES

  • 58

    Samantha: ನಟಿ ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ! ಎಲ್ಲಿದೆ ಸ್ಯಾಮ್ ದೇಗುಲ?

    ಚಿತ್ರರಂಗದಲ್ಲಿ ಅಭಿಮಾನಿಗಳಿಂದ ಪೂಜಿಸಲ್ಪಟ್ಟ ಏಕೈಕ ನಾಯಕಿ ಎಂಬ ಖ್ಯಾತಿ ಖುಷ್ಬೂ ಅವರದಾಗಿತ್ತು. ನಂತರ, ಹನ್ಸಿಕಾ, ನಮಿತಾ ಮತ್ತು ನಿಧಿ ಅಗರ್ವಾಲ್ ಅವರಿಗಾಗಿ ಅವರ ಅಭಿಮಾನಿಗಳು ದೇಗುಲ ನಿರ್ಮಿದ್ದರು. ಇದೀಗ ಈ ಪಟ್ಟಿಗೆ ಸಮಂತಾ ಸೇರಿಕೊಳ್ಳಲಿದ್ದಾರೆ.

    MORE
    GALLERIES

  • 68

    Samantha: ನಟಿ ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ! ಎಲ್ಲಿದೆ ಸ್ಯಾಮ್ ದೇಗುಲ?

    ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಮಂತಾ ಸಿನಿಮಾಗಳತ್ತ ಹೆಚ್ಚು ಗಮನ ಹರಿಸಿದ್ದಾರೆ. ಟಾಲಿವುಡ್, ಬಾಲಿವುಡ್ ಸಿನಿಮಾ ಶೂಟಿಂಗ್​ನಲ್ಲಿ ಸ್ಯಾಮ್ ಬ್ಯುಸಿ ಆಗಿದ್ದಾರೆ. ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಮಂತಾ ಸಖತ್ ಸ್ಟ್ರಾಂಗ್ ಆಗಿದ್ದಾರೆ.

    MORE
    GALLERIES

  • 78

    Samantha: ನಟಿ ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ! ಎಲ್ಲಿದೆ ಸ್ಯಾಮ್ ದೇಗುಲ?

    ಪಾಸಿಟಿವ್ ಆಗಿ ಯೋಚಿಸುತ್ತಾ ಸಿನಿ ಕೆರಿಯರ್​ನಲ್ಲಿ ಮುಂದೆ ಸಾಗಿದ್ದಾರೆ. ಇತ್ತೀಚೆಗಷ್ಟೇ ಮೈಯೋಸಿಟಿಸ್​ನಿಂದ ಬಳಲುತ್ತಿದ್ದ ಸಮಂತಾ, ಕೆಲವು ತಿಂಗಳುಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 88

    Samantha: ನಟಿ ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ! ಎಲ್ಲಿದೆ ಸ್ಯಾಮ್ ದೇಗುಲ?

    ರಾಜ್-ಡಿಕೆ ನಿರ್ದೇಶನದ ಸಿಡಾಟೆಲ್ ವೆಬ್ ಸರಣಿಯ ಶೂಟಿಂಗ್​ನಲ್ಲಿ ಸಮಂತಾ ಬ್ಯುಸಿ ಆಗಿದ್ದಾರೆ. ಇತ್ತ ವಿಜಯ್ ದೇವರಕೊಂಡ ಜೊತೆ ಸಮಂತಾ ಖುಷಿ ಸಿನಿಮಾ ಕೂಡ ಮಾಡುತ್ತಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾದ ಮೇಲೆ ಸಮಂತಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    MORE
    GALLERIES