Jayasudha: 64ನೇ ವಯಸ್ಸಿನಲ್ಲಿ 3ನೇ ಮದುವೆಯಾದ್ರಾ ಜಯಸುಧಾ? ಉದ್ಯಮಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ
ಟಾಲಿವುಡ್, ಕಾಲಿವುಡ್ ಗಳಲ್ಲಿ ಪೋಷಕ ನಟಿ ಪಾತ್ರಕ್ಕೆ ಹಿರಿಯ ನಟಿ ಜಯಸುಧಾಗೆ ಭಾರೀ ಡಿಮ್ಯಾಂಡ್ ಇದೆ. ಸಾಲು ಸಾಲು ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ಜಯಸುಧಾ, ಮದುವೆ ವಿಚಾರ ಇದೀಗ ಭಾರೀ ವೈರಲ್ ಆಗಿದೆ.
2 ದಿನಗಳಿಂದ ಜಯಸುಧಾ ಮದುವೆ ವಿಚಾರ ವೈರಲ್ ಆಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜಯಸುಧಾ ತಾವು 3ನೇ ಮದುವೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
2/ 8
ವ್ಯಕ್ತಿಯೊಬ್ಬರ ಜೊತೆ ಇದ್ದ ನಟಿ ಜಯಸುಧಾ ಫೋಟೋ ಕೂಡ ಹರಿದಾಡುತ್ತಿತ್ತು. ಆತ ಉದ್ಯಮಿ, ಅವರನ್ನೇ ನಟಿ ಮದುವೆ ಆಗಿದ್ದಾರೆ ಎಂದು ಹೇಳಲಾಗಿತ್ತು. ಈ ಎಲ್ಲಾ ಗಾಸಿಪ್ ಗಳಿಗೂ ಇದೀಗ ನಟಿ ತೆರೆ ಎಳೆದಿದ್ದಾರೆ.
3/ 8
ತಮ್ಮೊಂದಿಗೆ ಓಡಾಡುತ್ತಿರುವ ವ್ಯಕ್ತಿಯ ಹೆಸರು ಫಿಲಿಪ್ ರೂಲ್ಸ್. ಅವರು ನಟಿ ಜೀವನ ಚರಿತ್ರೆಯನ್ನು ಶೂಟ್ ಮಾಡಲು ಅಮೆರಿಕಾದಿಂದ ಬಂದಿದ್ದಾರಂತೆ. ಹೀಗಾಗಿ ನಟಿ ಜಯಸುಧಾ, ಉದ್ಯಮಿ ಫಿಲಿಪ್ ರೂಲ್ಸ್ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ.
4/ 8
ಈ ಹಿಂದೆ ನಿರ್ಮಾಪಕ ವಡ್ಡೆ ರಮೇಶ್ ಜೊತೆ ಜಯಸುಧಾ ವಿವಾಹವಾಗಿದ್ರು. ಹೊಂದಾಣಿಕೆಯ ಕೊರತೆಯಿಂದಾಗಿ ಈ ಜೋಡಿ ಬೇರೆಯಾಗಿತ್ತು.
5/ 8
ನಿರ್ಮಾಪಕ ರಮೇಶ್ ಅವರಿಂದ ವಿಚ್ಚೇದನೆ ಪಡೆದುಕೊಂಡ ಜಯಸುಧಾ ಬಾಲಿವುಡ್ ನಟ ಜಿತೇಂದ್ರ ಕಪೂರ್ ಸಹೋದರ ಸಂಬಂಧಿ ನಿತಿನ್ ಕಪೂರ್ ಅವರನ್ನು ವಿವಾಹವಾದ್ರೂ.
6/ 8
ಆದ್ರೆ ಜಯಸುಧಾ ಪತಿ ನಿತಿನ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ರು. ಬಳಿಕ ನಟಿ ಜಯಸುಧಾ ಅವರನ್ನು ಒಂಟಿಯಾಗಿದ್ದು, ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
7/ 8
ನಿತಿನ್ ಸಾವಿನ ನಂತರ ಜಯಸುಧಾ ತಮ್ಮ ಮಕ್ಕಳೊಟ್ಟಿಗೆ ಜೀವನ ಸಾಗಿಸುತ್ತಿದ್ದರು. ಈ ವೇಳೆ ಜಯಸುಧಾ ಮದುವೆ ವಿಚಾರ ಭಾರೀ ಸದ್ದು ಮಾಡಿದೆ. ಉದ್ಯಮಿ ಫಿಲಿಪ್ ಜೊತೆಗಿನ ಫೋಟೋಗಳು ಮದುವೆ ಸುದ್ದಿಗೆ ಕಾರಣವಾಗಿತ್ತು.
8/ 8
ಆಲಿ ಮಗಳ ಮದುವೆ ಮತ್ತು ವಾರೀಸು ಸಿನಿಮಾದ ಈವೆಂಟ್ ಗೂ ಕೂಡ ಉದ್ಯಮಿ ಫಿಲಿಪ್ ರನ್ನು ಜಯಸುಧಾ ಕರೆತಂದಿದ್ದರು. ಈಗ ಎಲ್ಲ ಅನುಮಾನಕ್ಕೂ ಜಯಸುಧಾ ಸ್ಪಷ್ಟನೆ ನೀಡಿದ್ದಾರೆ.