ರಾಜಮೌಳಿ ನಿರ್ದೇಶನದ ‘ಯಮದೊಂಗ’ ಚಿತ್ರದ ಮೂಲಕ ಎನ್ ಟಿಆರ್ ಅವರಿಗೆ ಹೀರೋಯಿನ್ ಆಗಿ ನಟಿಸಿ ಉತ್ತಮ ಖ್ಯಾತಿ ಗಳಿಸಿ ಹೆಚ್ಚು ಜನಪ್ರಿಯತೆ ಗಳಿಸಿದರು. ಆ ಚಿತ್ರದ ಸೂಪರ್ ಹಿಟ್ ಸಕ್ಸಸ್ ನಂತರ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನ ಜೊತೆಗೆ ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲೂ ಪ್ರಿಯಾಮಣಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸುಮಾರು 16 ವರ್ಷಗಳಿಂದ ಚಿತ್ರರಂಗದಲ್ಲಿರುವ ಪ್ರಿಯಾಮಣಿ ಅವರ ಪೂರ್ಣ ಹೆಸರು ಪ್ರಿಯಾ ವಾಸುದೇವ ಮಣಿ ಅಯ್ಯರ್.