Big Boss: ಈ ಬಾರಿಯ ಬಿಗ್ ಬಾಸ್ ಮನೆ ಹೇಗಿರಲಿದೆ ಗೊತ್ತಾ?
ಕಿರುತೆರೆಯಲ್ಲಿಯೇ ಅತಿಹೆಚ್ಚಿನ ಖ್ಯಾತಿ ಪಡೆದಿರುವ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮ ಆರಂಭಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಬಿಗ್ ಬಾಸ್ ಪ್ರಾರಂಭದ ಕುರಿತ ಸುದೀಪ್ ಪ್ರೋಮೊ ಪ್ರಸಾರವಾಗುತ್ತಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕುತ್ತಿದೆ. ಈಗಾಗಲೇ ಯಾರೆಲ್ಲಾ ಬಿಗ್ ಬಾಸ್ ಮನೆಗೆ ಹೋಗಬಹುದು ಎಂಬ ಲೆಕ್ಕಾಚಾರಗಳು ಕೂಡ ಪ್ರಾರಂಭವಾಗಿದ್ದು, ಈ ಬಗ್ಗೆ ಕಾರ್ಯಕ್ರಮದ ಆರಂಭದ ದಿನವೇ ಅಧಿಕೃತ ಮಾಹಿತಿ ದೊರಕಲಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಿಗ್ ಬಾಸ್ ನ ಮನೆಯ ಚಿತ್ರಣವನ್ನು ಬಿಡುಗಡೆ ಮಾಡಲಾಗಿದೆ. (ಚಿತ್ರ ಕೃಪೆ : ಕಲರ್ಸ್ ವಾಹಿನಿ)